1
00:00:02,000 --> 00:00:07,000
Downloaded from
YTS.BZ

2
00:00:08,000 --> 00:00:13,000
Official YIFY movies site:
YTS.BZ

3
00:00:49,375 --> 00:00:50,958
ಪ್ರೀತಿಯ ರೆಬೆಕ್ಕಾ:

4
00:00:52,250 --> 00:00:54,916
ನಿನಗೆ ತುಂಬಾ ಪ್ರಶ್ನೆಗಳಿವೆ ಎಂದು ನಾನು ಬಲ್ಲೆ.

5
00:00:56,083 --> 00:00:57,291
ನನಗೂ ಅಷ್ಟೇ.

6
00:00:57,458 --> 00:01:00,583
ಎಷ್ಟೇ ಆಗಲಿ, ಜೀವನ ಒಂದು ಮರ್ಮ.

7
00:01:01,166 --> 00:01:04,208
ಆದರೆ ಜಗತ್ತಿನ ಎಲ್ಲಾ ಒಗಟುಗಳಿಗೂ
ಒಂದು ಉತ್ತರ ಅಂತ ಇದ್ದರೆ,

8
00:01:04,375 --> 00:01:06,041
ಸಂತೋಷಕ್ಕೆ ಒಂದು ರಹಸ್ಯವಿದ್ದರೆ,

9
00:01:06,208 --> 00:01:08,625
ನಾನು ಅದನ್ನು ಹೀಗೆ ಪ್ರಸ್ತಾಪಿಸುತ್ತೇನೆ:

10
00:01:10,666 --> 00:01:11,750
ಕುರಿಗಳು.

11
00:01:15,083 --> 00:01:16,375
ಇಲ್ಲ, ನಿಜವಾಗಲೂ.

12
00:01:16,708 --> 00:01:18,208
ಅದು ನಿಜವಾಗಲೂ ಕುರಿಗಳೇ.

13
00:01:20,416 --> 00:01:22,208
ಸರಿ, ಬರುತ್ತಿದ್ದೇನೆ.

14
00:01:35,250 --> 00:01:36,083
ನಿನ್ನ ಹಿಂದಿನ ಪತ್ರದಲ್ಲಿ ನೀನು ಕೇಳಿದ್ದೆ,

15
00:01:36,166 --> 00:01:38,708
ನನ್ನ ಕುರಿಗಳಲ್ಲಿ ಯಾವುದಾದರೂ
ವಿಶೇಷವಾದದ್ದು ಇದೆಯಾ ಅಂತ.

16
00:01:38,875 --> 00:01:43,416
ಅಂದರೆ, ಅವೆಲ್ಲವೂ ವಿಶೇಷವಾದವೇ.
ಹಾಗಾಗಿ ಪ್ರತಿಯೊಂದಕ್ಕೂ ಹೆಸರಿಟ್ಟಿದ್ದೇನೆ.

17
00:01:43,583 --> 00:01:44,666
ಉದಾಹರಣೆಗೆ:

18
00:01:45,625 --> 00:01:49,500
ಈ ಅವಳಿ ರೌಡಿ ಟಗರುಗಳಿಗೆ ರಾನಿ ಮತ್ತು ರೆಜ್ಜಿ
ಅಂತ ಹೆಸರಿಟ್ಟಿದ್ದೇನೆ.

19
00:01:50,000 --> 00:01:53,333
ಮತ್ತು ಇವರು ಹೆಮ್ಮೆಯ ಮತ್ತು ಗೌರವಾನ್ವಿತ
ಸರ್ ರಿಚ್‌ಫೀಲ್ಡ್.

20
00:01:54,125 --> 00:01:55,875
ತುಪ್ಪಳ ತುಂಬಿದ ಕ್ಲೌಡ್.

21
00:01:56,041 --> 00:01:57,833
ಒಂಥರಾ ವೈಯಾರಿ ಬಿಡು ಅವಳು.

22
00:01:58,708 --> 00:02:01,000
ಅತ್ಯಂತ ಕುತೂಹಲಭರಿತ ಝೋರಾ.

23
00:02:01,791 --> 00:02:04,166
ತಾಳ್ಮೆಭರಿತ ಮಾಪಲ್.

24
00:02:04,916 --> 00:02:06,458
ಮತ್ತು ವುಲ್-ಐಯ್ಸ್…

25
00:02:07,166 --> 00:02:09,791
ಅದು ಯಾಕೆಂದರೆ, ನನಗೆ ಅದಕ್ಕಿಂತ ಉತ್ತಮವಾದ ಹೆಸರು
ಇನ್ನೂ ಹೊಳೆದಿಲ್ಲ.

26
00:02:10,083 --> 00:02:13,041
ಆಮೇಲೆ, ಸರಿ, ಅವೆಲ್ಲವೂ ವಿಶೇಷವಾದವೇ ಅಂತ
ನಾನು ಹೇಳಿದ್ದೇನೆ,

27
00:02:13,208 --> 00:02:17,875
ಆದರೆ ನಾನು ಒಂದಂತೂ ಒಪ್ಪಬೇಕು,
ನನ್ನ ಎರಡು ಕುರಿಗಳು ಎಲ್ಲಕ್ಕಿಂತ ವಿಶೇಷವಾದಂಥವು.

28
00:02:18,583 --> 00:02:19,666
ಅವನು ಸೆಬಾಸ್ಟಿಯನ್.

29
00:02:19,833 --> 00:02:21,250
ನನ್ನ ಅತಿ ದೊಡ್ಡ ಟಗರು,

30
00:02:21,416 --> 00:02:23,875
ಮತ್ತು ನನ್ನಂತೆ, ಅವನು ಕೂಡ ಒಂಟಿ.

31
00:02:24,458 --> 00:02:27,083
ಯಾವಾಗಲೂ ಒಬ್ಬನೇ ದೂರ ಹೋಗುತ್ತಿರುತ್ತಾನೆ.

32
00:02:27,416 --> 00:02:30,500
ಮತ್ತೆ ಅವನಾಗಿಯೇ ವಾಪಸ್ ಬಂದುಬಿಡುತ್ತಾನೆ.

33
00:02:34,041 --> 00:02:36,708
ಮತ್ತು ಕೊನೆಯದಾಗಿ, ಲಿಲ್ಲಿ.

34
00:02:37,166 --> 00:02:38,708
ನನ್ನ ಅತಿ ಬುದ್ಧಿವಂತ ಕುರಿ.

35
00:02:38,875 --> 00:02:42,041
ನನ್ನ ತಲೆಯಲ್ಲಿ ಏನು ಯೋಚಿಸುತ್ತಿದ್ದೇನೆ
ಮತ್ತು ಹೃದಯದಲ್ಲಿ ಏನು ಅನುಭವಿಸುತ್ತಿದ್ದೇನೆ

36
00:02:42,208 --> 00:02:44,416
ಅಂತ ಇದಕ್ಕೆ ಯಾವಾಗಲೂ ತಿಳಿದಿರುತ್ತದೆ.

37
00:02:44,583 --> 00:02:49,916
ಇತರರಿಗೆಲ್ಲಾ ಮಿಗಿಲಾಗಿ, ಇವಳಿಂದ ನನಗೆ
ಸಿಗುವಂಥ ಶಾಂತಿ ಕುರುಬರಿಗಷ್ಟೇ ಗೊತ್ತು.

38
00:02:50,083 --> 00:02:51,541
ಭೂಮಿಯ ಮೇಲಿನ ಅತ್ಯಂತ ಕರುಣಾಮಯಿ ಜೀವಿಗಳ

39
00:02:51,708 --> 00:02:56,166
ಆರೈಕೆ ಮಾಡುವುದರಿಂದ ಲಭಿಸುವಂಥ ಶಾಂತಿ.

40
00:03:01,458 --> 00:03:03,833
ಪ್ರತಿದಿನವೂ ಅವರ ಆರೋಗ್ಯದ
ಆರೈಕೆಯಿಂದ ಶುರುವಾಗುತ್ತದೆ.

41
00:03:05,958 --> 00:03:07,708
ಅವುಗಳಿಗೆ ಹೊಟ್ಟೆ ತುಂಬಾ ಆಹಾರ ಕೊಡುವೆ…

42
00:03:08,458 --> 00:03:09,583
ಸುಂದರವಾಗಿ ಕಾಣುವಂತೆ ಮಾಡುವೆ.

43
00:03:11,583 --> 00:03:14,333
ಅವುಗಳ ಮನೋರಂಜನೆಗಾಗಿ ಸಾಧ್ಯವಾದಷ್ಟು ಮಾಡುವೆ.

44
00:03:14,500 --> 00:03:17,500
ನಾನು ಎದ್ದಾಗ
ನನಗೆ ಗೊತ್ತು ನಾನು

45
00:03:17,666 --> 00:03:20,333
ನಿನ್ನ ಪಕ್ಕದಲ್ಲಿ ಮಲಗಿದ್ದು ಏಳುವ ಗಂಡು
ನಾನಾಗಿರುವೆ ಎಂದು

46
00:03:22,041 --> 00:03:26,125
ಮತ್ತು ಅವುಗಳಿಗೆ ಔಷಧವನ್ನು ಕೊಡುತ್ತೇನೆ,
ಅದನ್ನು ಅವು ಇಷ್ಟಪಡುತ್ತವೆ ಅಂದುಕೊಳ್ಳುತ್ತೇನೆ…

47
00:03:26,291 --> 00:03:27,791
ಮಾತಾಡುವಂತಿದ್ದರೆ ಹೇಳಿಕೊಳ್ಳುತ್ತಿದ್ದವು.

48
00:03:27,958 --> 00:03:30,750
ನಿನ್ನ ಔಷಧಿಯ ಸಮಯ, ಕಣೋ. ತಗೋ.

49
00:03:31,083 --> 00:03:35,250
ನನ್ನ ಕೆಲಸಗಳೆಲ್ಲಾ ಮುಗಿದು, ಸೂರ್ಯನು ಆಕಾಶದ
ಅಡಿಯಲ್ಲಿ ಮುಳುಗಲು ಆರಂಭಿಸಿದಾಗ,

50
00:03:35,416 --> 00:03:37,583
ನಾನೊಂದು ಪುಸ್ತಕವನ್ನು ಎತ್ತಿಕೊಂಡು
ಅವುಗಳಿಗಾಗಿ ಓದುತ್ತೇನೆ.

51
00:03:37,750 --> 00:03:42,041
ಪತ್ತೇದಾರಿ ಕಾದಂಬರಿಗಳು, ನಿಗೂಢತೆಗಳು,
ರಹಸ್ಯಗಳು. ಎಲ್ಲವೂ ನನ್ನ ನೆಚ್ಚಿನವೇ.

52
00:03:42,208 --> 00:03:44,958
"ರಾಡ್ನಿ ಹಾಲಿಂಗ್ಸ್‌ಹೆಡ್ ಕೊಲೆ
ಯಾವಾಗ ನಡೆಯಿತು ಅಂತ ನಂಗೊತ್ತು,

53
00:03:45,125 --> 00:03:48,416
ಮತ್ತು ನಿಜವಾದ ಕೊಲೆಗಾರ ಯಾರು ಅಂತ ನಂಗೊತ್ತು."

54
00:03:48,666 --> 00:03:51,625
ಅವರು ಕಥೆಯನ್ನು ಆಲಿಸುತ್ತಿದ್ದಾರೆ
ಅಂತ ಅಂದುಕೊಳ್ಳಲು ನನಗೆ ಇಷ್ಟ.

55
00:03:52,291 --> 00:03:56,708
ಆದರೂ ನನ್ನ ಮನಸ್ಸಿನಲ್ಲಿ ನನಗೆ ಗೊತ್ತು,
ಅವು ಎಷ್ಟೇ ವಿಶೇಷವಾಗಿದ್ದರೂ, ಅವು ಆಗಲೂ…

56
00:03:57,208 --> 00:03:58,458
ಕುರಿಗಳೇ.

57
00:03:59,541 --> 00:04:00,833
ಇಲ್ಲ, ಅಷ್ಟೇ.

58
00:04:01,416 --> 00:04:02,833
ಹೋಗಿ, ಎಲ್ಲರೂ.

59
00:04:03,000 --> 00:04:05,125
ನಾಳೆ ಇದರ ಅಂತ್ಯವನ್ನು ಓದಿ ಹೇಳುತ್ತೇನೆ.

60
00:04:11,833 --> 00:04:13,500
ಅಲ್ಲಿ ಯಾಕೆ ನಿಲ್ಲಿಸಿದ ಅಂತ?

61
00:04:13,666 --> 00:04:15,875
ಕೊಲೆಗಾರ ಯಾರು ಅಂತ ಇನ್ನೇನು ಹೇಳುವವನಿದ್ದ!

62
00:04:16,041 --> 00:04:18,082
ಇದೊಂದು ಹಿಂಸೆ! ಅದು ಕೆಲಸದವಳೇ, ಅಲ್ವಾ?

63
00:04:18,250 --> 00:04:19,791
ಖಂಡಿತ ಅದು ಕೆಲಸದವಳೇ.

64
00:04:19,957 --> 00:04:22,750
ಇಲ್ಲ, ಇಲ್ಲ, ಇಲ್ಲ, ಅದು ತೋಟದ ಮಾಲಿ.

65
00:04:22,916 --> 00:04:25,625
ಯಾವಾಗಲೂ ಹುಲ್ಲು ಕತ್ತರಿಸುತ್ತಿದ್ದ,
ಆದರೆ ಸ್ವಲ್ಪವೂ ತಿನ್ನುತ್ತಿರಲಿಲ್ಲವಲ್ಲ?

66
00:04:25,791 --> 00:04:27,125
ಹೌದು. ಅನುಮಾನಾಸ್ಪದವೇ.

67
00:04:27,291 --> 00:04:28,707
ನಿಮಗೇನು ತಲೆ ಕೆಟ್ಟಿದೆಯಾ?
ಅದನ್ನು ಮಾಡಿದ್ದು ಆ ವೈದ್ಯ.

68
00:04:28,875 --> 00:04:30,666
ಖಂಡಿತ ಇಲ್ಲ. ಆ ಭಯಾನಕ ಆಂಟಿ.

69
00:04:30,832 --> 00:04:33,750
ಆ ಭಯಾನಕ ಆಂಟಿ ಇದ್ದಿದ್ದು
ಮೂರು ಕಥೆಗಳ ಹಿಂದೆ ಕಣೋ, ಜಾಣ.

70
00:04:33,916 --> 00:04:35,666
ಅದು ಹೇಗೋಲೋ ನಾವು
ಒಂದೇ ತಂದೆ-ತಾಯಿಗೆ ಹುಟ್ಟಿದ್ದು?

71
00:04:35,832 --> 00:04:37,332
ಅಯ್ಯೋ, ಶುರುವಾಯಿತು.

72
00:04:37,500 --> 00:04:38,541
ಹೌದೋ.

73
00:04:39,291 --> 00:04:40,875
ಓ, ಮತ್ತೆ ಶುರುಮಾಡಿಕೊಂಡರು.

74
00:04:41,041 --> 00:04:43,625
ನೀವೆಲ್ಲರೂ ತಪ್ಪು ತಿಳಿದಿದ್ದೀರಿ.

75
00:04:43,791 --> 00:04:46,375
ನನಗೆ ಅದು ಎರಡು ಅಧ್ಯಾಯಗಳ ಹಿಂದೆಯೇ ಗೊತ್ತಾಯಿತು.

76
00:04:46,916 --> 00:04:47,957
ಕೆಲಸದವಳು, ತಾನೆ?

77
00:04:48,125 --> 00:04:49,291
ಕೆಲಸದವಳಲ್ಲ.

78
00:04:49,457 --> 00:04:52,500
ಅವನ ತಮ್ಮನ ಮಗ, ಬರ್ಟಿ ಹಾಲಿಂಗ್ಸ್‌ಹೆಡ್.

79
00:04:52,666 --> 00:04:56,832
ಆದರೆ, ಲಿಲ್ಲಿ, ಬರ್ಟಿ ಹಾಲಿಂಗ್ಸ್‌ಹೆಡ್ ವಿರುದ್ಧದ
ಸಾಕ್ಷಿಗಳೆಲ್ಲವನ್ನೂ ನಿಜವಾದ ಕೊಲೆಗಾರನೇ

80
00:04:57,000 --> 00:04:59,291
ತಪ್ಪಾಗಿ ಸೃಷ್ಟಿಸಿದ್ದು ಅಂತ
ಡಿಟೆಕ್ಟಿವ್ ಸಾಬೀತು ಮಾಡಿದನಲ್ವಾ?

81
00:04:59,457 --> 00:05:00,666
ಅದೇನೇ.

82
00:05:00,833 --> 00:05:02,250
ನಿಮಗೆ ಗೊತ್ತಾಗಲಿಲ್ವಾ?

83
00:05:02,416 --> 00:05:06,291
ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು,
ಸಾಕ್ಷಿಯನ್ನು ಅವನೇ ಸೃಷ್ಟಿಸಿದ್ದ.

84
00:05:08,833 --> 00:05:11,625
ಬರ್ಟಿ ಹಾಲಿಂಗ್ಸ್‌ಹೆಡ್ಡೇ ನಿಜವಾದ ಕೊಲೆಗಾರ.

85
00:05:12,916 --> 00:05:14,375
ಹಾಗೆ ಯಾಕೋ ಮಾಡಿದೆ?

86
00:05:16,375 --> 00:05:19,791
ಜಾರ್ಜ್ ನಾಳೆ ಕಥೆಯನ್ನು ಮುಗಿಸುತ್ತಾನೆ.
ನೀವೇ ನೋಡುವಿರಂತೆ.

87
00:05:23,207 --> 00:05:25,000
ನನಗೆ ಈಗಲೂ ಅದು ಕೆಲಸದವಳೇ ಅನಿಸುತ್ತೆ.

88
00:05:25,332 --> 00:05:27,666
"ಬರ್ಟಿಗೆ ಆ ಕಾನೂನಿನ ಬಗ್ಗೆ ಎಲ್ಲಾ ಗೊತ್ತಿತ್ತು,

89
00:05:28,041 --> 00:05:32,000
ಒಂದೇ ಅಪರಾಧಕ್ಕಾಗಿ ಒಬ್ಬ ವ್ಯಕ್ತಿಯನ್ನು
ಎರಡು ಬಾರಿ ಶಿಕ್ಷಿಸುವಂತಿರಲಿಲ್ಲ.

90
00:05:32,166 --> 00:05:36,832
ಹಾಗಾಗಿ, ಬಂಧನದಿಂದ ತಪ್ಪಿಸಿಕೊಳ್ಳಲು,
ಸುಳ್ಳು ಸಾಕ್ಷಿಗಳನ್ನು ಅವನೇ ಸೃಷ್ಟಿಸಿದ.

91
00:05:37,457 --> 00:05:41,916
ಬರ್ಟಿ ಹಾಲಿಂಗ್ಸ್‌ಹೆಡ್ಡೇ
ನಿಜವಾದ ಕೊಲೆಗಾರನಾಗಿದ್ದ."

92
00:05:47,375 --> 00:05:50,957
ನನ್ನ ಹೆಚ್ಚಿನ ಕುರಿಗಳ ದಿನಚರಿ ಹೇಗಿರುತ್ತೆ
ಎಂದರೆ ಅವು ತಿನ್ನುತ್ತಿರುತ್ತವೆ,

93
00:05:51,125 --> 00:05:52,957
ಅಥವಾ ತಿನ್ನುವುದರ ಬಗ್ಗೆ ಯೋಚಿಸುತ್ತಿರುತ್ತವೆ.

94
00:05:53,500 --> 00:05:57,375
ಆದರೆ ನನ್ನ ಬಳಿ ಮೂರು ಚೈತನ್ಯಭರಿತ
ಕುರಿಮರಿಗಳಿವೆ, ಅವುಗಳ ಶಕ್ತಿ ಅಪರಿಮಿತ.

95
00:05:57,916 --> 00:06:02,125
ವಸಂತಕಾಲದಲ್ಲಿ ಜನಿಸಿದ ಸಂತೋಷದ,
ನಿರಾತಂಕ ಪುಟ್ಟ ಜೀವಿಗಳು.

96
00:06:02,500 --> 00:06:06,250
ಅಸಲಿಗೆ, ಬಹುತೇಕ ಎಲ್ಲಾ ಕುರಿಮರಿಗಳು
ವಸಂತಕಾಲದಲ್ಲೇ ಜನಿಸುತ್ತವೆ.

97
00:06:06,833 --> 00:06:11,041
ಮತ್ತು ಇಲ್ಲಿ ನನ್ನ ಒಂದು ಕುರಿಮರಿ ಇದೆ,
ಇದು ಹುಟ್ಟಿದ್ದು ಚಳಿಗಾಲದಲ್ಲಿ.

98
00:06:12,458 --> 00:06:14,375
ಓ. ಹಲೋ.

99
00:06:16,832 --> 00:06:18,000
-ನಾನು ಡೈಸಿ.
-ನಾನು ಆಲಿವರ್.

100
00:06:18,166 --> 00:06:20,125
-ನಾನು ಪಿಕಲ್ಸ್.
-ನಿನ್ನ ಹೆಸರೇನು?

101
00:06:20,707 --> 00:06:22,375
ನನಗೆ ಹೆಸರಿಲ್ಲ.

102
00:06:22,541 --> 00:06:24,207
ನಮ್ಮ ಜೊತೆ ಆಟ ಆಡುತ್ತೀಯಾ?

103
00:06:24,625 --> 00:06:26,291
ಇಲ್ಲ! ಹೋಗಾಚೆ!

104
00:06:27,000 --> 00:06:29,791
ಆ ಚಳಿಗಾಲದ ಕುರಿಮರಿಯ ಜೊತೆ ಆಟ ಆಡಬಾರದು.

105
00:06:29,957 --> 00:06:32,582
ಅವನು ಈ ಹಿಂಡಿಗೆ ಸೇರಿದವನಲ್ಲ.

106
00:06:33,375 --> 00:06:36,125
ಕುರಿಗಳಿಗಷ್ಟೇ ಅರ್ಥವಾಗುವಂಥ ಕಾರಣಗಳಿಂದ,

107
00:06:36,291 --> 00:06:39,625
ಚಳಿಗಾಲದಲ್ಲಿ ಹುಟ್ಟಿದ ಕುರಿಮರಿಯನ್ನು
ಹಿಂಡು ಸಾಮಾನ್ಯವಾಗಿ ತಿರಸ್ಕರಿಸುತ್ತದೆ.

108
00:06:39,791 --> 00:06:40,625
ಪರವಾಗಿಲ್ಲ.

109
00:06:40,791 --> 00:06:44,375
ಚಳಿಗಾಲದಲ್ಲಿ ಹುಟ್ಟಿದ ಕುರಿಮರಿ
ಭಿನ್ನವಾಗಿರುವುದರಿಂದ ಅಷ್ಟೇ.

110
00:06:44,541 --> 00:06:47,125
ಓ, ಅಷ್ಟೇ. ಹಾಗೆ.

111
00:06:55,791 --> 00:06:57,082
ನನಗೊಂದು ಪ್ರಶ್ನೆ ಇದೆ.

112
00:06:57,250 --> 00:06:59,707
ಜಾರ್ಜ್ ಯಾವಾಗಲೂ ಆ ಕುರಿಮರಿಗೆ
ಅಷ್ಟು ಪ್ರೀತಿ ಯಾಕೆ ತೋರಿಸುತ್ತಾನೆ?

113
00:06:59,875 --> 00:07:01,583
ಜಾರ್ಜ್ ಕುರಿ ಅಲ್ಲ.

114
00:07:01,750 --> 00:07:04,708
ಅವನಿಗೆ ಚಳಿಗಾಲದ ಕುರಿಮರಿಗಳ ಬಗ್ಗೆ
ಯಾರೂ ಹೇಳಿಲ್ಲ.

115
00:07:16,707 --> 00:07:19,207
ಓ, ಮತ್ತೊಂದು ವಿಷಯ,
ನೀನು ನನ್ನ ಆಹ್ವಾನವನ್ನು ಸ್ವೀಕರಿಸಿದರೆ,

116
00:07:19,375 --> 00:07:22,291
ನಾನು ಡೆನ್‌ಬ್ರೂಕ್ ಎಂಬ ಊರಿನ ಪಕ್ಕದಲ್ಲಿ
ವಾಸಿಸುತ್ತಿರುತ್ತೇನೆ ಎಂದು ತಿಳಿದಿರು.

117
00:07:22,625 --> 00:07:24,791
ಅದರಲ್ಲಿ ಕೆಲವು ವಿಶೇಷವಾದಂಥವರಿದ್ದಾರೆ.

118
00:07:24,957 --> 00:07:26,041
ಉದಾಹರಣೆಗೆ…

119
00:07:26,207 --> 00:07:27,207
ಶುಭೋದಯ, ಕೇಲೆಬ್.

120
00:07:27,332 --> 00:07:28,500
ಕೇಲೆಬ್, ಅವನೂ ಕುರುಬನೇ.

121
00:07:28,582 --> 00:07:29,416
ಶುಭೋದಯ, ಮಹಿಳೆಯರೇ.

122
00:07:29,541 --> 00:07:30,375
ಇವನೆಂದರೆ ನನಗಾಗಲ್ಲ.

123
00:07:30,707 --> 00:07:32,166
ಕಸಾಯಿಯವನಾದ ಹ್ಯಾಮ್.

124
00:07:32,332 --> 00:07:34,207
ಇವನೆಂದರೆ ಖಂಡಿತ ನನಗಾಗಲ್ಲ.

125
00:07:34,375 --> 00:07:35,791
ಬೆಥ್, ವಸತಿ ಮಾಲೀಕಳು.

126
00:07:35,957 --> 00:07:37,082
ಇವಳಿಗೆ ನನ್ನ ಕಂಡರಾಗಲ್ಲ.

127
00:07:37,250 --> 00:07:38,750
ಅವನನ್ನು ಕೊಂದುಹಾಕುತ್ತೇನೆ.

128
00:07:38,916 --> 00:07:40,625
ಟಿಮ್, ಪೊಲೀಸ್ ಅಧಿಕಾರಿ.

129
00:07:42,000 --> 00:07:43,082
ಇವನೊಬ್ಬ ಮೂರ್ಖ.

130
00:07:43,250 --> 00:07:47,041
ಮತ್ತು ರೆವೆರೆಂಡ್ ಹಿಲ್‌ಕೋಟ್,
ಈತನ ಪ್ರಕಾರ ಈತ ಜನರನ್ನೇ ಕಾಯುವ ಕುರುಬ.

131
00:07:47,207 --> 00:07:50,291
ನಮ್ಮ ಸಂಬಂಧ ತುಂಬಾ ಸಂದಿಗ್ಧವಾದದ್ದು.

132
00:07:50,457 --> 00:07:54,541
ಮತ್ತು ಇಂದಿನ ಪಠಣ: ಕಳೆದುಹೋದ ಕುರಿಯ ದೃಷ್ಟಾಂತ.

133
00:08:05,250 --> 00:08:06,958
ಜಾರ್ಜ್, ನಮ್ಮೊಂದಿಗೆ ಸೇರಲು ಬಂದೆಯಾ?

134
00:08:07,750 --> 00:08:10,333
ಕರ್ತನ ಗೃಹದಲ್ಲಿ ಎಲ್ಲರಿಗೂ ಸ್ವಾಗತವೇ.

135
00:08:11,250 --> 00:08:12,541
ಕಸಾಯಿಯವರಿಗೂ ಕೂಡ, ಹಾಂ?

136
00:08:19,000 --> 00:08:20,916
ನಾನು ನಿಮ್ಮ ಜೊತೆ ಸೇರಲು ಬಂದಿಲ್ಲ.

137
00:08:21,916 --> 00:08:23,541
ಒಂದು ಹಳೆ ಬಾಕಿ ತೀರಿಸಲು ಬಂದೆ.

138
00:08:30,207 --> 00:08:31,750
ನಮ್ಮ ಪ್ರೀತಿಯ ಜಾರ್ಜ್.

139
00:08:34,040 --> 00:08:35,415
ನಮ್ಮ ಪ್ರೀತಿಯ ಜಾರ್ಜ್.

140
00:08:35,750 --> 00:08:37,625
ಆದರೆ ಜನರ ಬಗ್ಗೆ ಸಾಕಿನ್ನು.

141
00:08:38,040 --> 00:08:40,207
ನೀನು ನನ್ನ ಹಿಂಡನ್ನು ಭೇಟಿಯಾಗಬೇಕು.

142
00:08:40,375 --> 00:08:42,540
ಅವರು ನಿನ್ನನ್ನು ನೋಡಲು ಕಾತುರರಾಗಿದ್ದಾರೆ.

143
00:08:43,582 --> 00:08:45,250
ನಾನು ಕೂಡ ಅಷ್ಟೇ.

144
00:08:45,958 --> 00:08:47,625
ದಯವಿಟ್ಟು ಬೇಗ ಬಾ.

145
00:08:50,708 --> 00:08:52,375
ಪ್ರೀತಿಯಿಂದ, ಜಾರ್ಜ್.

146
00:08:59,583 --> 00:09:00,666
ಕ್ಲೌಡ್?

147
00:09:01,083 --> 00:09:02,291
ನನಗೊಂದು ಪ್ರಶ್ನೆ ಇದೆ.

148
00:09:02,458 --> 00:09:05,125
ಕಾಡು ಸೇವಂತಿಗೆ ತಿಂದರೆ ನನ್ನ ಕಣ್ರೆಪ್ಪೆಗಳೂ
ನಿನ್ನಂತೆಯೇ ಸುಂದರವಾಗುತ್ತವಾ?

149
00:09:05,291 --> 00:09:07,833
ಇಲ್ಲ, ಅವುಗಳಿಂದ
ಕಣ್ರೆಪ್ಪೆಗಳಿಗೇನೂ ಪ್ರಯೋಜನವಿಲ್ಲ.

150
00:09:08,000 --> 00:09:10,041
ಆದರೆ ಅದರಿಂದ ಉಣ್ಣೆಗೆ ತುಂಬಾ ಪ್ರಯೋಜನವಿದೆ.

151
00:09:10,208 --> 00:09:11,500
ವುಲ್-ಐಯ್ಸ್‌ನ ನೋಡು.

152
00:09:11,666 --> 00:09:13,250
ಅವನು ಕಾಡು ಸೇವಂತಿಗೆ ಬಿಟ್ಟರೆ
ಬೇರೇನೂ ತಿನ್ನುವುದಿಲ್ಲ.

153
00:09:13,416 --> 00:09:16,083
ಓ, ಅದೇನಾ ಇವುಗಳ ಹೆಸರು? ಸರಿ.

154
00:09:16,250 --> 00:09:20,166
ಒಂದಷ್ಟು ಕಾಡು ಸೇವಂತಿಗೆಯನ್ನು ಸೆಬಾಸ್ಟಿಯನ್‌ಗಾಗಿ
ಉಳಿಸಿಡಬೇಕು. ಅವನು ಹೋಗಿ ತುಂಬಾ ದಿನಗಳಾದವು.

155
00:09:20,333 --> 00:09:23,958
ಯಾರಿಗೇನಾಗಬೇಕು? ಜಾರ್ಜ್ ಅದೆಲ್ಲಿಂದಲೋ
ಅವನನ್ನು ಇಲ್ಲಿಗೆ ತಂದಾಗಿನಿಂದ,

156
00:09:24,125 --> 00:09:26,125
ಅವನು ಆ ಊರಿನೊಳಗೆ ಅಲೆದಾಡಿ ಹೋಗುತ್ತಿರುತ್ತಾನೆ.

157
00:09:26,291 --> 00:09:27,541
ಹಸಿದಿರಲಿ ಬಿಡು.

158
00:09:27,708 --> 00:09:31,541
ಅವನು ನಮ್ಮ ಬಗ್ಗೆ ಕಾಳಜಿ ತೋರದಿದ್ದ ಮಾತ್ರಕ್ಕೆ
ನಾವು ಕಾಳಜಿ ತೋರಬಾರದು ಅಂತೇನಿಲ್ಲ.

159
00:09:31,708 --> 00:09:33,958
ಸೆಬಾಸ್ಟಿಯನ್ ನಮ್ಮ ಹಿಂಡಿಗೆ ಸೇರಿದವನು.

160
00:09:34,208 --> 00:09:36,708
ಓ, ಓ, ನೋಡಿ! ಅದು ಕೇಲೆಬ್!

161
00:09:39,583 --> 00:09:40,915
ನಾಯಿಗಳು!

162
00:09:41,083 --> 00:09:45,040
ನಾಯಿಗಳು, ನಾಯಿಗಳು,
ನಾಯಿಗಳು, ನಾಯಿಗಳು, ನಾಯಿಗಳು.

163
00:09:46,790 --> 00:09:48,833
ಕೇಲೆಬ್! ಇಲ್ಲಿ ಬಾ!

164
00:09:49,000 --> 00:09:52,040
ಆಹಾ, ಇವನ ವಾಸನೆ ಎಂದರೆ ನನಗೆ ತುಂಬಾ ಇಷ್ಟ.

165
00:09:52,208 --> 00:09:53,750
ಅದು ಅವನ ಉಣ್ಣೆಯ ಸ್ವೆಟರಿನದ್ದು.

166
00:09:54,208 --> 00:09:55,875
ಎಷ್ಟು ಸುಂದರವಾಗಿ ಬಣ್ಣ ಹಾಕಿದ್ದಾರೆ.

167
00:09:57,125 --> 00:09:58,458
-ಒಳಗೆ ಬರಬಹುದಾ?
-ಹೋಗಾಚೆ!

168
00:09:58,583 --> 00:09:59,750
ಒಳಗೆ ಬರುತ್ತಿದ್ದೇನೆ.

169
00:10:00,250 --> 00:10:04,333
ಎಷ್ಟು ಹೊಸದಾಗಿ ಸುಂದರವಾಗಿ ಹೊಳೆಯುತ್ತಿದೆ.

170
00:10:04,750 --> 00:10:06,833
ನಿನಗೂ ನನ್ನ ಆಲೋಚನೆಯೇ ಹೊಳೆಯುತ್ತಿದೆಯಾ?

171
00:10:07,166 --> 00:10:09,583
-ನಾನು ಅದಕ್ಕೆ ಗುದ್ದಬೇಕು!
-ನಾನು ಅದಕ್ಕೆ ಜೋರಾಗಿ ಗುದ್ದಬೇಕು!

172
00:10:10,458 --> 00:10:11,708
ರೆಜ್ಜಿ! ರಾನಿ!

173
00:10:13,000 --> 00:10:16,708
ಇದನ್ನು ಆಗಲೇ ಚರ್ಚಿಸಿದ್ದೇವೆ.
ಅದಕ್ಕೆ ನಾವು ಗುದ್ದಬೇಕಾದರೆ…?

174
00:10:16,875 --> 00:10:20,000
ಅದಕ್ಕೆ ನಾವು ಗುದ್ದಬೇಕಾದರೆ
ಒಂದು ಸೂಕ್ತ ಕಾರಣ ಇರಬೇಕು.

175
00:10:20,166 --> 00:10:21,166
ಅದು ಸರಿ.

176
00:10:21,333 --> 00:10:23,791
ಕೇಲೆಬ್ ಈ ತಿಂಗಳಲ್ಲಿ
ಮೂರನೇ ಬಾರಿ ಬರುತ್ತಿದ್ದಾನೆ.

177
00:10:23,958 --> 00:10:26,541
ಅವರು ಅಲ್ಲಿ ಕೇವಲ ಒಂದು ವಿಷಯದ ಬಗ್ಗೆ
ಅಷ್ಟೇ ಚರ್ಚಿಸುತ್ತಿರುತ್ತಾರೆ.

178
00:10:27,083 --> 00:10:28,250
ಹಿಂಡುಗಳನ್ನು ಜೊತೆ ಸೇರಿಸುವುದು.

179
00:10:28,416 --> 00:10:30,333
-ಹಿಂಡುಗಳನ್ನು ಜೊತೆ ಸೇರಿಸುವುದು!
-ಹೊಸ ಕುರಿಗಳು.

180
00:10:30,500 --> 00:10:32,250
-ಹೊಸ ಬಯಲುಗಳು!
-ನಾಯಿಗಳು?

181
00:10:32,415 --> 00:10:33,750
ನಾನು ಅದರ ಬಗ್ಗೆ ಯೋಚಿಸುತ್ತಿದ್ದೇನೆ!

182
00:10:33,915 --> 00:10:36,500
ನಿನಗೊಂದು ಅವಕಾಶ ಕೊಟ್ಟಿದ್ದಕ್ಕೆ
ನೀನು ನನಗೆ ಸುಳ್ಳು ಹೇಳಿದೆ, ಕೇಲೆಬ್!

183
00:10:36,665 --> 00:10:37,833
ಮತ್ತೆ ವಾಪಸ್ ಬರಬೇಡ.

184
00:10:45,500 --> 00:10:48,208
ಅಯ್ಯೋ, ನಮ್ಮ ಹಿಂಡುಗಳನ್ನು ಜೊತೆ ಸೇರಿಸುವುದಿಲ್ಲ
ಅಂತ ಕಾಣುತ್ತೆ.

185
00:10:49,875 --> 00:10:51,165
ನನಗೆ ತುಂಬಾ ಸಂತೋಷವಾಗಿತ್ತು.

186
00:10:51,333 --> 00:10:52,958
ಈಗ ನನಗೆ ಬೇಜಾರಾಗಿ ದುಃಖವಾಗುತ್ತಿದೆ.

187
00:10:53,125 --> 00:10:54,708
ಇದು ನಡೆಯಿತೆಂದು ನಾನು ಮರೆಯಬೇಕು!

188
00:10:54,875 --> 00:10:56,875
ಸರಿಯಾಗಿ ಹೇಳಿದೆ. ಇದು ತುಂಬಾ ನಿರಾಶಾದಾಯಕ.

189
00:10:57,040 --> 00:10:58,290
ಸರಿ, ಎಲ್ಲರೂ ಕೇಳಿ?

190
00:10:58,458 --> 00:11:02,375
ಮೂರು ಎಣಿಸುವಷ್ಟರಲ್ಲಿ ಕೇಲೆಬ್ ಬಂದಿದ್ದನ್ನು
ನಾವು ಮರೆತುಬಿಡೋಣ.

191
00:11:02,541 --> 00:11:04,208
ಒಂದು. ಎರಡು--

192
00:11:04,375 --> 00:11:07,333
ಆದರೆ ಮಾಪಲ್ ಬಗ್ಗೆ ಏನು? ಅವನು ಏನನ್ನೂ ಮರೆಯಲಾರ.

193
00:11:07,500 --> 00:11:08,333
ಯಾಕಾಗಲ್ಲ?

194
00:11:08,500 --> 00:11:09,958
ಪಾಪದ ಮಾಪಲ್.

195
00:11:10,125 --> 00:11:12,166
ಅವನು ಹುಟ್ಟಿದ್ದೇ ಒಂದು ಭಯಾನಕ ರೋಗದೊಂದಿಗೆ.

196
00:11:12,458 --> 00:11:15,875
ನಮ್ಮಲ್ಲಿ ಇತರರಿಗೆ ಭಿನ್ನವಾಗಿ,
ಅವನು ಯಾವುದನ್ನೂ ಮರೆಯಲಾರ.

197
00:11:16,041 --> 00:11:17,125
ಓ, ಹೌದು.

198
00:11:17,291 --> 00:11:21,791
ಮಾಪಲ್, ನಾವೆಲ್ಲರೂ ಮರೆತ ನಂತರ,
ಇದು ನಡೆಯಿತೆಂದು ನಮಗೆ ನೆನಪು ಮಾಡಬೇಡ.

199
00:11:21,958 --> 00:11:24,416
ಖಚಿತವಾಗಿ ಹೇಳುತ್ತಿದ್ದೀರಾ?
ಅಂಥ ಕೆಟ್ಟದ್ದೇನೂ ನಡೆಯಲಿಲ್ಲ.

200
00:11:24,583 --> 00:11:27,833
ಇಲ್ಲ. ಆದರೆ ಅಂಥ ಒಳ್ಳೆಯದೇನೂ ನಡೆಯಲಿಲ್ಲ.
ಹಾಗಾಗಿ ಸುಮ್ಮನೆ ಯಾಕೆ?

201
00:11:28,541 --> 00:11:29,541
ತಯಾರಾ?

202
00:11:29,875 --> 00:11:30,875
ಒಂದು.

203
00:11:31,375 --> 00:11:32,458
ಎರಡು.

204
00:11:32,790 --> 00:11:33,915
ಮೂರು.

205
00:11:36,583 --> 00:11:37,625
ಕ್ಲೌಡ್?

206
00:11:38,250 --> 00:11:39,415
ನನಗೊಂದು ಪ್ರಶ್ನೆ ಇದೆ.

207
00:11:39,583 --> 00:11:42,375
ಕಾಡು ಸೇವಂತಿಗೆ ತಿಂದರೆ ನನ್ನ ಕಣ್ರೆಪ್ಪೆಗಳೂ
ನಿನ್ನಂತೆಯೇ ಸುಂದರವಾಗುತ್ತವಾ?

208
00:11:42,540 --> 00:11:44,875
ಇಲ್ಲ, ಅವುಗಳಿಂದ
ಕಣ್ರೆಪ್ಪೆಗಳಿಗೇನೂ ಪ್ರಯೋಜನವಿಲ್ಲ.

209
00:11:45,083 --> 00:11:48,250
-ಆದರೆ ಅದರಿಂದ ಉಣ್ಣೆಗೆ ತುಂಬಾ ಪ್ರಯೋಜನವಿದೆ.
-ಆದರೆ ಅದರಿಂದ ಉಣ್ಣೆಗೆ ತುಂಬಾ ಪ್ರಯೋಜನವಿದೆ.

210
00:11:58,290 --> 00:11:59,290
ನಾನು ಚೆನ್ನಾಗಿದ್ದೇನೆ.

211
00:12:12,750 --> 00:12:14,708
ನಾನು ಚೆನ್ನಾಗಿರುತ್ತೇನೆ, ನಿಜವಾಗಲೂ.

212
00:12:14,875 --> 00:12:15,916
ಅದು ಕೇವಲ…

213
00:12:17,000 --> 00:12:18,291
ಏನೋ ಗೊತ್ತಿಲ್ಲ.

214
00:12:21,875 --> 00:12:25,500
ಅದು, ಯಾಕೆಂದರೆ ಇಷ್ಟರಲ್ಲೇ
ಎಲ್ಲವೂ ಬದಲಾಗುತ್ತವೆ ಅಂದುಕೊಳ್ಳುತ್ತಿದ್ದೆ.

215
00:12:26,750 --> 00:12:28,458
ಆದರೆ ನೀವು ಚಿಂತಿಸಬೇಕಾಗಿಲ್ಲ.

216
00:12:29,500 --> 00:12:30,875
ನಿಮಗೇನೂ ಆಗಲ್ಲ.

217
00:12:32,165 --> 00:12:34,125
ಮತ್ತು ನನಗೂ ಏನೂ ಆಗಲ್ಲ.

218
00:13:05,416 --> 00:13:06,416
ಹಾಯ್.

219
00:13:06,583 --> 00:13:09,458
ಹಲೋ, ಹಲೋ. ಏನಾದರೂ ವಿಶೇಷ ಇದೆಯಾ?

220
00:13:09,625 --> 00:13:14,208
ಸೋಮವಾರದ ದಿನ ಹೆಚ್ಚಿನ ಅಂಚೆ ಇಲ್ಲ.
ಕೇವಲ ಚೀಟಿಗಳು ಮತ್ತು ಹಾಳು-ಮೂಳು ಅಷ್ಟೇ.

221
00:13:14,333 --> 00:13:16,250
ಜಾರ್ಜ್. ಅವನು ಯಾರಿಗೆ
ಪತ್ರಗಳನ್ನು ಕಳಿಸುತ್ತಿದ್ದಾನೆ?

222
00:13:16,416 --> 00:13:18,750
ಅಂದರೆ, ನಾನೇನನ್ನೂ ಹೇಳಬಾರದು, ಆದರೆ…

223
00:13:19,625 --> 00:13:23,041
ಒಬ್ಬಳು ಮಿಸ್ ರೆಬೆಕ್ಕಾ ಹ್ಯಾಂಪ್‌ಸ್ಟೆಡ್‌ಗೆ.
ಅಮೆರಿಕಾದಲ್ಲಿ.

224
00:13:23,625 --> 00:13:26,833
ಅವಳು ಯಾರೇ ಆಗಿದ್ದರೂ, ಕೆಲವು ತಿಂಗಳುಗಳಿಂದ
ಪತ್ರಗಳನ್ನು ಒಬ್ಬರಿಗೊಬ್ಬರು ಬರೆಯುತ್ತಿದ್ದಾರೆ.

225
00:13:27,208 --> 00:13:28,333
ಆಮೇಲೆ…

226
00:13:28,500 --> 00:13:29,666
ನೋಡು.

227
00:13:30,083 --> 00:13:31,166
ವಾಸನೆ ನೋಡು.

228
00:13:31,708 --> 00:13:33,208
ಗುಲಾಬಿ ಸುವಾಸನೆಯ ಕಾಗದ.

229
00:13:33,500 --> 00:13:34,625
ಇವು ಪ್ರೇಮಪತ್ರಗಳು.

230
00:13:34,790 --> 00:13:35,875
ನಂಬುತ್ತೀಯಾ ಇದನ್ನು?

231
00:13:36,040 --> 00:13:40,000
ಹರಕು ಬಟ್ಟೆಯ ಜಾರ್ಜ್ ಹಾರ್ಡಿ,
ಹಳೆಯ ಕಾಲದ ರಸಿಕ ಇವನು.

232
00:13:40,583 --> 00:13:41,790
ಯಾರಿಗೆ ಗೊತ್ತಿತ್ತು.

233
00:13:43,915 --> 00:13:45,500
ರಸಿಕ ಜಾರ್ಜ್.

234
00:13:45,708 --> 00:13:46,708
ಹಾಂ.

235
00:13:47,083 --> 00:13:48,458
-ಜಾಗ್ರತೆ.
-ಹಾಂ, ನೀನು ಕೂಡ.

236
00:13:48,583 --> 00:13:49,625
ಬಾಯ್!

237
00:13:51,333 --> 00:13:52,625
-ಹಲೋ! ಹಾಯ್!
-ಹಲೋ!

238
00:13:52,790 --> 00:13:55,750
ಡೆನ್‌ಬ್ರೂಕ್ ಸಾಂಸ್ಕೃತಿಕ ಉತ್ಸವಕ್ಕೆ
ಈಗಷ್ಟೇ ನಗರದಿಂದ ಬಂದಿದ್ದೇನೆ.

239
00:13:55,915 --> 00:13:57,500
ಓ, ಅದ್ಭುತ.

240
00:13:57,833 --> 00:13:59,250
ಇದೇ ಅದು.

241
00:14:00,083 --> 00:14:01,375
ನನ್ನ ಹಿಂದೆ ಬನ್ನಿ.

242
00:14:01,833 --> 00:14:03,708
ಇದೇ ಅದು.

243
00:14:04,125 --> 00:14:07,833
ಡೆನ್‌ಬ್ರೂಕ್ ಸಾಂಸ್ಕೃತಿಕ ಉತ್ಸವಕ್ಕೆ ಸ್ವಾಗತ.

244
00:14:12,041 --> 00:14:13,083
ತಮಾಷೆ ಮಾಡುತ್ತಿದ್ದೀರಾ?

245
00:14:13,250 --> 00:14:16,000
ಏನು? ಇದು ನಮ್ಮ ಊರಿನ ಪರಂಪರೆ.

246
00:14:18,583 --> 00:14:21,291
ರಿಟರ್ನ್ ಟು ಆಝ್ ಅಂದರೆ ಏನು?

247
00:14:21,625 --> 00:14:23,625
ಹಾಂ, ಅದು ಇದುವರೆಗೂ ತಯಾರಿಸಲಾದ
ಅತ್ಯುತ್ತಮ ಚಿತ್ರ.

248
00:14:24,041 --> 00:14:26,541
ಮತ್ತು ಅದನ್ನು ಇಲ್ಲೇ 40 ಮೈಲಿಗಳಷ್ಟೇ
ದೂರದ ರಸ್ತೆಯಾಚೆ ಚಿತ್ರೀಕರಿಸಿದ್ದರು.

249
00:14:26,916 --> 00:14:29,708
ಮೂಲಕ್ಕಿಂತ ಇದೇ ಉತ್ತಮವಾಗಿದೆ
ಅಂತ ಎಷ್ಟೋ ಜನ ಒಪ್ಪುತ್ತಾರೆ.

250
00:14:30,083 --> 00:14:31,083
ನಾನಂತೂ ನೋಡೇ ಇಲ್ಲ.

251
00:14:31,250 --> 00:14:33,375
ರಿಟರ್ನ್ ಟು ಆಝ್ ಯಾರು ನೋಡಿರಲ್ಲ?

252
00:14:33,540 --> 00:14:37,500
ಸರಿ, ಕ್ಷಮಿಸಿ. ಇದಕ್ಕಾಗಿ ಅಷ್ಟು ದೊಡ್ಡ ಬ್ಯಾನರ್
ಯಾಕೆ ಮಾಡಿಸಿದಿರಿ?

253
00:14:37,665 --> 00:14:40,540
ನನಗೆ ಜನಗಳು ಬರಬೇಕು. ಜನಗಳಿಲ್ಲದ ಹಬ್ಬ ಎಂಥದ್ದು?

254
00:14:41,040 --> 00:14:44,208
ಅಯ್ಯೋ, ಇಲ್ಲ, ಅದು ಹಬ್ಬ ಅಲ್ಲವೇ ಅಲ್ಲ.

255
00:14:44,375 --> 00:14:46,500
ಇಲ್ಲ. ಇದು ಕೆಲವು ಮೇಜುಗಳಷ್ಟೇ.

256
00:14:47,665 --> 00:14:49,915
ನನ್ನ ವ್ಯಾಪಾರ ಹೇಗೆ ನಡೆಸಬೇಕು ಅಂತ
ನನಗೆ ಹೇಳಿಕೊಡುತ್ತಿದ್ದೀಯಾ?

257
00:14:50,540 --> 00:14:51,540
ಇಲ್ಲ.

258
00:14:52,540 --> 00:14:54,250
ನೀವೇ ಸರಿ. ನನ್ನನ್ನು ಕ್ಷಮಿಸಿ.

259
00:14:55,000 --> 00:14:56,958
ನಾನು ಹೇಳಿದ್ದು ಆ ಉದ್ದೇಶದಿಂದಲ್ಲ.

260
00:14:58,458 --> 00:15:01,541
ನನ್ನ ಹೆಸರು ಎಲಿಯಟ್ ಮ್ಯಾಥ್ಯೂಸ್.
ನಾನು ಗೆಜೆಟ್‌ನಲ್ಲಿ ಒಬ್ಬ ವರದಿಗಾರ.

261
00:15:03,541 --> 00:15:05,083
ಕಿರಿಯ ವರದಿಗಾರ.

262
00:15:07,958 --> 00:15:10,125
ಆಯ್ತು. ಸರಿ. ನಾನು ಕೆಲಸ ಮಾಡುವುದು
ಶ್ರದ್ಧಾಂಜಲಿ ಪ್ರಕಟಣಾ ವಿಭಾಗದಲ್ಲಿ.

263
00:15:10,291 --> 00:15:13,333
ಆದರೆ ನಾನು ತುಂಬಾ ಕಾಲದಿಂದ
ಒಂದು ನಿಜವಾದ ಸುದ್ದಿಯನ್ನು ಹುಡುಕುತ್ತಿದ್ದೇನೆ,

264
00:15:13,500 --> 00:15:17,500
ಮತ್ತು ನನ್ನ ಪ್ರಕಟಣಾ ಸಂಪಾದಕರು
ನನಗೆ ಇದನ್ನು ವಹಿಸಿದರು:

265
00:15:18,250 --> 00:15:20,125
ಡೆನ್‌ಬ್ರೂಕ್ ಸಾಂಸ್ಕೃತಿಕ ಉತ್ಸವ.

266
00:15:20,291 --> 00:15:23,041
-ಮತ್ತೆ? ಕನಸೇ ನನಸಾದಂತಿದೆ.
-ಹಾಂ, ತುಂಬಾ ಚೆನ್ನಾಗಿದೆ.

267
00:15:23,208 --> 00:15:27,541
ಇದರ ಬಗ್ಗೆ ಬರೆದರೆ ನನಗೆ ಬಡ್ತಿಯೇನೂ ಸಿಗಲ್ಲ,
ಅಲ್ವಾ? ಇಲ್ಲ.

268
00:15:27,875 --> 00:15:29,333
ಅಯ್ಯೋ ಪಾಪ.

269
00:15:30,291 --> 00:15:31,750
ಹತ್ತು. ನಗದು.

270
00:15:32,125 --> 00:15:33,208
ಯಾವುದಕ್ಕೆ?

271
00:15:33,375 --> 00:15:35,125
-ಪ್ರವೇಶಾತಿ ಶುಲ್ಕ.
-ಪ್ರವೇಶಾತಿ ಶುಲ್ಕ.

272
00:15:38,458 --> 00:15:39,540
ಹತ್ತು.

273
00:15:39,708 --> 00:15:41,040
ತಗೊಳ್ಳಿ--

274
00:15:41,708 --> 00:15:42,915
ಎಲ್ಲವನ್ನೂ ತಗೊಳ್ಳಿ.

275
00:15:44,040 --> 00:15:45,290
ಸುಮ್ಮನೆ--

276
00:15:46,415 --> 00:15:47,583
ತಿಕ್ಕಲ.

277
00:16:06,666 --> 00:16:09,833
ಜಾರ್ಜ್ ಎಲ್ಲಿ? ನಮಗೆ ರಾತ್ರಿ ಹೇಳುವ ಕಥೆ ಎಲ್ಲಿ?

278
00:16:10,000 --> 00:16:11,333
ಅವನು ಇಷ್ಟೊತ್ತಿಗಾಗಲೇ ಬರಬೇಕಿತ್ತು.

279
00:16:13,916 --> 00:16:17,208
ಓ, ಆ ಸದ್ದಿಗೆ ನೀವು ಭಯಪಡಬೇಕಾಗಿಲ್ಲ.

280
00:16:17,375 --> 00:16:18,500
ಸರ್ ರಿಚ್‌ಫೀಲ್ಡ್?

281
00:16:18,666 --> 00:16:21,708
ಹೌದು, ಈಗ ನಿಮಗೆ ಹೇಳುವ ಸಮಯ, ಕುರಿಮರಿಗಳೇ,

282
00:16:22,000 --> 00:16:25,291
ಇದೆಲ್ಲವೂ ಹೀಗೇ ನಡೆಯುತ್ತದೆ.

283
00:16:25,458 --> 00:16:30,166
ಆ ಎಲ್ಲಾ ಮೋಡಗಳು ಒಮ್ಮೆ ಕುರಿಗಳಾಗಿದ್ದವು,
ನನ್ನ ಮತ್ತು ನಿಮ್ಮಂತೆಯೇ.

284
00:16:30,333 --> 00:16:33,665
ಭೂಮಿಯು ತುಂಬಾ ಒಣಗಿರುವುದನ್ನು ಅವುಗಳು ಕಂಡಾಗ,

285
00:16:33,833 --> 00:16:36,083
ಅವು ಕುಣಿಯಲು ಆರಂಭಿಸುತ್ತವೆ.

286
00:16:36,250 --> 00:16:40,208
ಆಕಾಶದಿಂದ ಮಳೆಯನ್ನು ಒದ್ದು ಆಚೆ ಹಾಕುವಾಗ
ದೊಡ್ಡದಾದ ಶಬ್ದಗಳು ಉಂಟಾಗುತ್ತವೆ,

287
00:16:40,375 --> 00:16:43,290
ಅದರಿಂದ ಹುಲ್ಲು ಮತ್ತು ಸಸ್ಯಗಳು ಬೆಳೆಯುತ್ತವೆ.

288
00:16:43,458 --> 00:16:45,500
ಎಲ್ಲಾ ಕುರಿಗಳೂ ಮೋಡಗಳಾಗುತ್ತವೆಯಾ?

289
00:16:45,665 --> 00:16:48,208
ಹೌದು, ಪಿಕಲ್ಸ್. ನಾವೆಲ್ಲರೂ ಅಷ್ಟೇ.

290
00:16:48,375 --> 00:16:52,625
ನಾನೂ ಒಂದು ದಿನ ಮೋಡ ಆಗುತ್ತೇನೆ, ನನಗಿಂತ ಮುಂಚೆ
ನನ್ನ ತಂದೆ-ತಾಯಿಯರು ಆದಂತೆಯೇ.

291
00:16:52,958 --> 00:16:54,333
ಆದರೂ…

292
00:16:55,375 --> 00:16:57,915
ಯಾವುದೋ ಕಾರಣಕ್ಕಾಗಿ,
ನನ್ನ ತಂದೆ-ತಾಯಿಯರು ಮೋಡಗಳಾದಾಗ

293
00:16:58,083 --> 00:17:00,458
ಹೇಗಿತ್ತೆಂದು ನನಗೆ ನೆನಪಾಗುತ್ತಿಲ್ಲ.

294
00:17:01,125 --> 00:17:03,333
ಮಾಪಲ್, ನಿನಗೆ ಎಲ್ಲವೂ ನೆನಪಿರುತ್ತದೆ.

295
00:17:03,708 --> 00:17:06,583
ಅಂದಿನ ದಿನ ಅದ್ಭುತವಾಗಿರಬೇಕು, ಅಲ್ವಾ?

296
00:17:12,375 --> 00:17:14,833
ಅದು, ಹೌದು. ಖಂಡಿತ.

297
00:17:15,000 --> 00:17:18,790
ಅವರು ವಿದಾಯ ಹೇಳಿ,
ಆನಂದದಿಂದ ಆಕಾಶದಲ್ಲಿ ತೇಲಿ ಹೋದರು,

298
00:17:18,958 --> 00:17:21,750
ಅಲ್ಲಿ ಎರಡು ಸುಂದರ ಹತ್ತಿಯಂಥ ಮೋಡಗಳಾಗಿ

299
00:17:21,915 --> 00:17:24,540
ನಮ್ಮೆಲ್ಲರನ್ನೂ ಪ್ರೀತಿಯಿಂದ

300
00:17:24,790 --> 00:17:26,040
ನೋಡುತ್ತಿದ್ದಾರೆ.

301
00:17:27,290 --> 00:17:28,375
ಎಂದೆಂದಿಗೂ.

302
00:17:30,083 --> 00:17:31,250
ಧನ್ಯವಾದ.

303
00:17:35,333 --> 00:17:36,916
ಅಲ್ಲಿ ಬಂತು ನೋಡಿ!

304
00:17:37,291 --> 00:17:39,458
ಅದು ಯಾವಾಗಲೂ ಬರುವಂತೆಯೇ.

305
00:17:41,291 --> 00:17:42,458
ಹೌದು.

306
00:17:42,791 --> 00:17:45,791
ಎಲ್ಲವೂ ನಡೆಯಬೇಕಾದಂತೆಯೇ ನಡೆಯುತ್ತಿದೆ.

307
00:18:30,625 --> 00:18:35,500
ಒಳ್ಳೆಯ ವಿಷಯ ಏನೆಂದರೆ, ಇಲ್ಲಿ ಸಿಲುಕಲು
ನೀವು ಸರಿಯಾದ ಸಮಯವನ್ನೇ ಆರಿಸಿಕೊಂಡಿದ್ದೀರಿ.

308
00:18:35,916 --> 00:18:38,708
ಈಗ ಡೆನ್‌ಬ್ರೂಕ್ ಸಾಂಸ್ಕೃತಿಕ ಉತ್ಸವ ಇದೆ!

309
00:18:39,125 --> 00:18:40,708
ಎಂಥ ಅದೃಷ್ಟವಂತ ನೀವು!

310
00:18:42,250 --> 00:18:46,291
ಕಳೆದ ವಾರಂತ್ಯದಂದು ನಾನು ನನ್ನ ತಂಗಿಯ ಜೊತೆ
ಹೋಗಿದ್ದೆ, ಅಲ್ಲಿ ಸ್ಥಳೀಯ ಗಿಣ್ಣು ತಿಂದೆವು.

311
00:18:46,458 --> 00:18:48,458
ಮತ್ತು ಅದು ನಗರಗಳಲ್ಲಿನ

312
00:18:48,625 --> 00:18:51,583
ಹೊಳೆಯುವ ಗಿಣ್ಣಿನ ಅಂಗಡಿಗಳಲ್ಲಿ ಸಿಗುವುದಕ್ಕಿಂತ
ಎಷ್ಟೋ ಚೆನ್ನಾಗಿತ್ತು.

313
00:18:51,750 --> 00:18:53,000
ನನ್ನ ತಂಗಿ ಹೇಳಿದಳು ನಾನು--

314
00:18:53,166 --> 00:18:54,500
ಅದನ್ನು ನೋಡಿದಿರಾ?

315
00:18:55,250 --> 00:18:56,541
ಏನನ್ನು ನೋಡುವುದು?

316
00:19:34,875 --> 00:19:36,416
ಯೇ! ನೀನು ಎದ್ದಿದ್ದೀಯ!

317
00:19:36,583 --> 00:19:39,291
ಹೀಗೆ ಮಾಡಬೇಡ ಅಂತ ನಿನಗೆ ಎಷ್ಟೋ ಸಲ ಹೇಳಿದ್ದೇನೆ.

318
00:19:39,708 --> 00:19:40,708
ನಾವು ಮರೆತೆವು!

319
00:19:40,875 --> 00:19:42,541
ನಾವು ಮರೆತೆವು.

320
00:19:42,708 --> 00:19:43,750
ಹೌದು ಬಿಡಿ.

321
00:19:43,916 --> 00:19:44,916
ಅದನ್ನು ನೋಡು!

322
00:19:45,083 --> 00:19:46,791
-ನಾನೂ ಬರ್ತೀನಿರು!
-ತಡಿ, ನಿಧಾನ!

323
00:19:50,958 --> 00:19:52,208
ನಾನು ಎದ್ದಾಗ

324
00:19:54,458 --> 00:19:57,166
ನಿನ್ನ ಪಕ್ಕದಲ್ಲಿ ಮಲಗಿದ್ದು ಏಳುವ ಗಂಡು
ನಾನಾಗಿರುವೆ--

325
00:20:00,833 --> 00:20:02,708
ಲಿಲ್ಲಿ? ನೀನೇನು--?

326
00:20:03,250 --> 00:20:05,750
ಇದೊಂದು ಆಟ ಅನಿಸುತ್ತೆ. ಕದಲಬೇಡ.

327
00:20:05,916 --> 00:20:08,666
ಕದಲಿದವರು ಸೋಲುತ್ತಾರೆ.

328
00:20:21,458 --> 00:20:23,416
ಅವನು ಆಟ ಆಡುತ್ತಿಲ್ಲ.

329
00:20:23,583 --> 00:20:26,791
ಹಾಗಾದರೆ, ಏನು ಮಾಡುತ್ತಿದ್ದಾನೆ?

330
00:20:29,625 --> 00:20:30,791
ಲಿಲ್ಲಿ.

331
00:20:31,125 --> 00:20:32,250
ಅವನು…

332
00:20:33,083 --> 00:20:34,541
ಅವನು ಸತ್ತಿದ್ದಾನೆ.

333
00:20:35,000 --> 00:20:36,875
ಜಾರ್ಜ್ ಸತ್ತಿದ್ದಾನೆ.

334
00:20:37,333 --> 00:20:39,791
ಏನ್--? ಸತ್ತಿದ್ದಾನೆ ಅಂದರೆ ಏನರ್ಥ?

335
00:20:40,833 --> 00:20:42,208
ಅದು ನಿಜವಲ್ಲ.

336
00:20:42,375 --> 00:20:44,250
ಅದು ಪುಸ್ತಕಗಳಲ್ಲಷ್ಟೇ ನಡೆಯುತ್ತದೆ.

337
00:20:48,208 --> 00:20:49,666
ಇದು ನಿಜವೇ?

338
00:20:53,708 --> 00:20:55,583
ಜನರು ಸಾಯುತ್ತಾರಾ?

339
00:20:57,791 --> 00:21:00,083
ಇವನು ಮೋಡವಾಗುತ್ತಾನಾ?

340
00:21:01,166 --> 00:21:04,416
ಇಲ್ಲ. ಕುರಿಗಳು ಮಾತ್ರ ಹಾಗಾಗುತ್ತವೆ.

341
00:21:34,000 --> 00:21:35,416
-"ಸತ್ತಿದ್ದಾನಾ"?
-"ಸತ್ತಿದ್ದಾನಾ"?

342
00:21:35,583 --> 00:21:36,916
ಅದು ನಿಜವಾಗಲೂ ಆಗುತ್ತಾ?

343
00:21:37,375 --> 00:21:38,958
ಹಾಗೆಯೇ ಅನಿಸುತ್ತದೆ.

344
00:21:39,125 --> 00:21:41,000
ಅಂದರೆ ಕುರಿಗಳೂ ಸಾಯಬಹುದಾ?

345
00:21:41,166 --> 00:21:44,083
ಇಲ್ಲ, ಪಿಕಲ್ಸ್, ನಾವು ಮೋಡಗಳಾಗುತ್ತೇವೆ, ಆದರೆ--

346
00:21:44,250 --> 00:21:45,541
ಜಾರ್ಜ್ ಸತ್ತಿರಲು ಸಾಧ್ಯವಿಲ್ಲ.

347
00:21:45,708 --> 00:21:48,250
ನನಗೆ ಔಷಧಿ ಬೇಕು.
ನನಗೆ ಬಾಯಿ ಹುಣ್ಣಿನ ಕಾಯಿಲೆ ಇದೆ.

348
00:21:48,416 --> 00:21:49,416
ಬಾಯಿ ಹುಣ್ಣು ಅಂದರೆ ಏನು?

349
00:21:49,583 --> 00:21:50,875
ಬಾಯಿ ಹುಣ್ಣು ಅಂದರೆ ಇದೇ.

350
00:21:52,625 --> 00:21:53,666
ಅಸಹ್ಯವಾಗಿದೆ!

351
00:21:53,833 --> 00:21:56,750
ನಾನು ಹೇಳುತ್ತಿರುವುದು
ನಿಮಗೆ ಯಾರಿಗೂ ಅರ್ಥವಾಗುತ್ತಿಲ್ಲ ಅನಿಸುತ್ತೆ.

352
00:21:57,333 --> 00:21:59,000
ಜಾರ್ಜ್ ಇನ್ನಿಲ್ಲ.

353
00:21:59,166 --> 00:22:00,958
ಅವನು ಇನ್ನೆಂದೂ ವಾಪಸ್ ಬರಲ್ಲ.

354
00:22:01,125 --> 00:22:03,833
ಆದರೆ ಜಾರ್ಜ್ ನಮ್ಮ ಕುರುಬನಾಗಿದ್ದ.
ನಾವೀಗ ಏನು ಮಾಡುವುದು?

355
00:22:04,000 --> 00:22:07,208
ಹೌದು, ಜಗತ್ತಿನಲ್ಲೇ ನೀನು ಅತಿ ಬುದ್ಧಿವಂತ ಕುರಿ,
ಲಿಲ್ಲಿ. ಏನು ಮಾಡಬೇಕಂತ ಹೇಳು!

356
00:22:07,375 --> 00:22:09,666
ನಾವು ಮಾಡುವಂಥದ್ದು ಒಂದೇ ಒಂದು ಕೆಲಸವಿದೆ.

357
00:22:10,791 --> 00:22:12,375
ನಾವು ಜಾರ್ಜ್‌ನನ್ನು ಮರೆಯಬೇಕು.

358
00:22:12,541 --> 00:22:15,291
ಏನು? ಆದರೆ, ಲಿಲ್ಲಿ, ಅದು ಜಾರ್ಜ್.
ನಾವು ಸುಮ್ಮನೆ ಹಾಗೆ--

359
00:22:15,458 --> 00:22:18,791
ಅವನನ್ನು ನೆನೆಸಿಕೊಳ್ಳುವುದರಿಂದ
ತುಂಬಾ ನೋವಾಗುತ್ತೆ. ನನ್ನಿಂದ ಆಗಲ್ಲ.

360
00:22:18,958 --> 00:22:22,708
ಅವಳು ಹೇಳಿದ್ದು ಸರಿ.
ಕುರಿಗಳಿಗೆ ಇಂಥ ವಿಚಾರಗಳು ಅನುಭವಕ್ಕೆ ಬರಬಾರದು.

361
00:22:22,875 --> 00:22:25,833
ನಾವು ಮರೆಯಲೇಬೇಕು.

362
00:22:27,833 --> 00:22:29,500
ಮೂರನ್ನು ಎಣಿಸುವಷ್ಟರಲ್ಲಿ.

363
00:22:29,666 --> 00:22:30,791
ಆದರೆ ಇರು. ಬೇಡ--

364
00:22:30,958 --> 00:22:31,958
ಒಂದು.

365
00:22:32,125 --> 00:22:33,500
ಇಲ್ಲ, ದಯವಿಟ್ಟು ಬೇಡ! ಅದು ಜಾರ್ಜ್!

366
00:22:33,875 --> 00:22:34,916
ಎರಡು.

367
00:22:35,083 --> 00:22:37,583
ನೀವು ಯಾವುದನ್ನೂ ಮರೆಯುವುದಿಲ್ಲ.

368
00:22:38,541 --> 00:22:39,541
ಸೆಬಾಸ್ಟಿಯನ್.

369
00:22:39,708 --> 00:22:44,125
ನನ್ನ ಕುರುಬನನ್ನು ಅಷ್ಟು ಸುಲಭವಾಗಿ ಮರೆಯಲು
ನಿಮಗೆ ಬಿಡುತ್ತೇನೆ ಅಂದುಕೊಂಡಿರಾ?

370
00:22:44,291 --> 00:22:46,166
ಅವನು ನಮ್ಮ ಕುರುಬನಾಗಿದ್ದ, ಸೆಬಾಸ್ಟಿಯನ್.

371
00:22:46,333 --> 00:22:47,750
ನಾವೆಲ್ಲರೂ ಅವನನ್ನು ಪ್ರೀತಿಸುತ್ತಿದ್ದೆವು.

372
00:22:48,041 --> 00:22:50,000
ಇದನ್ನು ತಡೆದುಕೊಳ್ಳುವುದು ತುಂಬಾ ಕಷ್ಟ.

373
00:22:50,541 --> 00:22:52,250
ಮತ್ತು ನಾವಿದನ್ನು ಮರೆಯುತ್ತೇವೆ.

374
00:22:52,416 --> 00:22:54,416
ಇಲ್ಲ, ನೀವು ಹಾಗೆ ಮಾಡಲ್ಲ.

375
00:22:54,583 --> 00:22:57,333
ನೀವು ಅವನನ್ನು ನೆನಪಿಟ್ಟುಕೊಳ್ಳುತ್ತೀರಿ
ಯಾಕೆಂದರೆ ಅದುವೇ ಸರಿ.

376
00:22:57,500 --> 00:22:58,958
ಯಾಕೆಂದರೆ ಅದುವೇ ನ್ಯಾಯ.

377
00:22:59,291 --> 00:23:00,458
ನಾಯಿಯಾ?

378
00:23:00,625 --> 00:23:02,833
ಅಲ್ಲ, ನಾಯಿ ಅಲ್ಲ-- ಅಂದರೆ ನ್ಯಾಯ.

379
00:23:03,750 --> 00:23:04,791
ನಾಯಿಯದ್ದು ಏನು?

380
00:23:04,958 --> 00:23:07,333
ನ್ಯಾ-ಯ. ನ್ಯಾಯ.

381
00:23:07,500 --> 00:23:09,875
ಅಂದರೆ ಒಳ್ಳೆಯವರಿಗೆ ಕೆಟ್ಟವರಿಂದ
ಹಾನಿಯಾಗಬಾರದು ಅಂತ.

382
00:23:10,041 --> 00:23:12,375
ದುರ್ಬಲರಿಗೆ ಸಬಲರಿಂದ ತೊಂದರೆ ಆಗಬಾರದು ಅಂತ.

383
00:23:12,541 --> 00:23:15,416
ಮತ್ತು ಒಬ್ಬ ಸ್ನೇಹಿತನನ್ನು ನಾವು ಮರೆಯಲೇಬಾರದು.

384
00:23:15,833 --> 00:23:18,791
ಜಾರ್ಜ್ ಹಿಂದೆ ನನಗೆ ನ್ಯಾಯವನ್ನು ತೋರಿಸಿದ್ದ.

385
00:23:19,125 --> 00:23:21,083
ಅದನ್ನು ಮರುಪಡೆಯಲು ಅವನು ಅರ್ಹನು.

386
00:23:21,250 --> 00:23:24,500
ಅದು ನಿಜವೇ. ಜಾರ್ಜ್ ಯಾವಾಗಲೂ ನನಗೆ
ತುಂಬಾ ಕರುಣೆ ತೋರಿಸುತ್ತಿದ್ದ.

387
00:23:24,666 --> 00:23:25,666
ನಿಮ್ಮೆಲ್ಲರಿಗೂ ಅಷ್ಟೇ.

388
00:23:25,833 --> 00:23:28,333
ಅದಕ್ಕಾಗಿಯೇ ಆತ ನಿಮ್ಮನ್ನು
ಕೇವಲ ಉಣ್ಣೆಗಾಗಿ ಮಾತ್ರ ಸಾಕಿದ್ದ.

389
00:23:28,500 --> 00:23:30,125
ಬೇರೆ ಇನ್ಯಾತಕ್ಕೆ ಕುರಿಗಳನ್ನು ಸಾಕುತ್ತಾರೆ?

390
00:23:30,250 --> 00:23:32,500
ಬೇರೆ ಯಾವ ಕಾರಣವೂ ಇಲ್ಲ. ಕೇವಲ ಉಣ್ಣೆಗಾಗಿ.
ಅದ್ಭುತವಾದ ಉಣ್ಣೆಗಾಗಿ ಮಾತ್ರ.

391
00:23:32,625 --> 00:23:33,916
ಓಹ್! ನನಗೊಂದು ಪ್ರಶ್ನೆ ಇದೆ.

392
00:23:34,208 --> 00:23:36,208
ಒಂದು ದಿನ ಅದು
ಕ್ಷಣಾರ್ಧದಲ್ಲಿ ಕೊನೆಗೊಳ್ಳುವುದಾದರೆ,

393
00:23:36,291 --> 00:23:38,000
ಮನುಷ್ಯನ ಬದುಕಿಗೆ ಅರ್ಥವೇನಿದೆ?

394
00:23:38,125 --> 00:23:39,625
ಅಸಲಿಗೆ, ಇಲ್ಲಿ ಮನುಷ್ಯರು ಯಾಕಿದ್ದಾರೆ?

395
00:23:39,750 --> 00:23:41,041
ಅವರನ್ನು ಸೃಷ್ಟಿಸಿದ್ದು ಯಾರು?
ನಮ್ಮನ್ನು ಸೃಷ್ಟಿಸಿದ್ದು ಯಾರು?

396
00:23:41,166 --> 00:23:43,250
ಮರದ ಒಳಗೆ ಏನಿದೆ ಮತ್ತು ಹಗಲಿನ ಹೊತ್ತು
ಚಂದ್ರ ಎಲ್ಲಿಗೆ ಹೋಗುತ್ತಾನೆ?

397
00:23:43,375 --> 00:23:45,041
ಜಾರ್ಜ್‌ನನ್ನು ಯಾಕೆ ಕೊಲೆ ಮಾಡಿದರು?

398
00:23:45,791 --> 00:23:48,250
"ಕೊಲೆಯಾ"? "ಕೊಲೆ" ಅಂದರೆ ಏನರ್ಥ?

399
00:23:48,416 --> 00:23:51,166
ಅವನು ರಾತ್ರಿ ಹೇಳುತ್ತಿದ್ದ ಕಥೆಗಳಲ್ಲಿ,
ಸತ್ತವರು ಯಾವಾಗಲೂ ಕೊಲೆಯಾಗಿರುತ್ತಿದ್ದರು.

400
00:23:51,333 --> 00:23:52,416
ಇಲ್ಲ, ಇಲ್ಲ, ಝೋರಾ.

401
00:23:52,583 --> 00:23:54,958
ಅದೆಲ್ಲವೂ ಕಥೆಯಷ್ಟೇ. ಇದು ಸತ್ಯ.

402
00:23:55,125 --> 00:23:56,208
ಹೌದಲ್ವಾ, ಲಿಲ್ಲಿ?

403
00:23:56,375 --> 00:23:59,750
ಹೌದು, ನಿಜವೇ. ಹಾಗಂದುಕೊಳ್ಳುವುದಕ್ಕೆ ಯಾವುದೇ
ಕಾರಣವಿಲ್ಲ, ಜಾರ್ಜ್ ಆ ರೀತಿ--

404
00:24:01,416 --> 00:24:02,916
ಅವನ ಟೋಪಿ.

405
00:24:20,375 --> 00:24:23,875
ಇವನಿಂದ ಕೆಲವು ಕಾಗದಗಳಿಗೆ ಸಹಿ
ಹಾಕಿಸಿಕೊಳ್ಳಬೇಕೆಂದು ಬಂದೆ, ಆಗ ಹೀಗೆ ಕಂಡು ಬಂದ.

406
00:24:25,166 --> 00:24:26,666
ಏನಾದರೂ ಹೇಳಲು ಬಯಸುತ್ತೀಯಾ?

407
00:24:26,833 --> 00:24:27,666
ಇಲ್ಲ.

408
00:24:30,875 --> 00:24:32,000
ಕೇಲೆಬ್.

409
00:24:34,083 --> 00:24:35,958
ಕಸಾಯಿಯವನು ಇಲ್ಲೇನು ಮಾಡುತ್ತಿದ್ದಾನೆ?

410
00:24:38,166 --> 00:24:39,375
ಐದು.

411
00:24:40,291 --> 00:24:41,333
ಆರು.

412
00:24:42,708 --> 00:24:44,083
ಅವನಿಗೆ ಕುರಿಗಳು ಬೇಕಂತೆ.

413
00:24:45,875 --> 00:24:47,500
ಹದಿನೈದು.

414
00:24:49,041 --> 00:24:50,583
ಹದಿನಾರು.

415
00:24:51,083 --> 00:24:52,500
ಲಿಲ್ಲಿ. ಏನು ಮಾಡುತ್ತಿದ್ದೀಯಾ?

416
00:24:52,666 --> 00:24:54,375
ಏನೂ ಇಲ್ಲದಿರಬಹುದು…

417
00:24:54,541 --> 00:24:57,541
ಆದರೆ ಜಾರ್ಜ್‌ನ ಟೋಪಿ ಮತ್ತು ಮಳೆಯಂಗಿಯ
ಬಗ್ಗೆ ಯೋಚಿಸದಿರಲು ನನ್ನಿಂದ ಆಗುತ್ತಿಲ್ಲ.

418
00:24:57,708 --> 00:24:58,875
ಯಾವ ಟೋಪಿ ಮತ್ತು ಮಳೆಯಂಗಿ?

419
00:24:59,041 --> 00:25:02,333
ಅದೇನೇ. ಅವನು ಮಳೆಯಲ್ಲಿ ಆಚೆ ಬಂದ.
ಅವುಗಳನ್ನು ತೊಡದೆ ಯಾಕೆ ಬಂದ?

420
00:25:02,500 --> 00:25:03,791
ಒಂದು ವೇಳೆ…

421
00:25:04,500 --> 00:25:05,875
ನನ್ನನ್ನು ಮೇಲಕ್ಕೇರಿಸು.

422
00:25:09,333 --> 00:25:10,375
ಏನು?

423
00:25:10,750 --> 00:25:12,916
ನಾನಂದೆ, ಇದನ್ನಾದರೂ ಮರೆಯಲು
ಸಾಧ್ಯವಾದರೆ ಒಳ್ಳೆಯದು ಅಂತ.

424
00:25:16,041 --> 00:25:17,791
ನಿನಗೆ ಏನಾದರೂ ಕಾಣಿಸಿತಾ?

425
00:25:19,708 --> 00:25:22,208
ನನಗೆ ಎಲ್ಲವೂ ಕಾಣಿಸುತ್ತಿದೆ.

426
00:25:37,416 --> 00:25:38,791
ಇಲ್ಲಿ ಕೇಳಿ?

427
00:25:38,958 --> 00:25:40,000
ಶುಭೋದಯ.

428
00:25:40,166 --> 00:25:42,375
ಕ್ಷಮಿಸಿ, ನೀವಿನ್ನೂ ಊರಿನಲ್ಲಿ
ಏನು ಮಾಡುತ್ತಿದ್ದೀರಿ?

429
00:25:42,541 --> 00:25:44,375
ಕಾರಿಗೆ ತೊಂದರೆಯಾಯಿತು. ಯಾರಿದು?

430
00:25:44,750 --> 00:25:47,208
ಇವನ ಹೆಸರು ಜಾರ್ಜ್ ಹಾರ್ಡಿ. ಇವನೊಬ್ಬ ಕುರುಬ.

431
00:25:47,541 --> 00:25:48,875
ಏನಾಯಿತು?

432
00:25:49,041 --> 00:25:50,541
ಬಹುಶಃ ಹೃದಯಾಘಾತವಾಗಿರಬಹುದು.

433
00:25:50,708 --> 00:25:53,041
ನಿನಗೆ ಇಲ್ಲಿ ಯಾವುದೇ ವಿಶೇಷ ಸುದ್ದಿ
ಇಲ್ಲ ಅಂತ ಕಾಣುತ್ತೆ.

434
00:25:53,416 --> 00:25:56,208
ಒಂದು ವೇಳೆ ಇಲ್ಲಿ ಏನಾದರೂ ಅಸಾಮಾನ್ಯವಾದದ್ದು
ಕಂಡುಬಂದರೆ. ಅಲ್ವಾ?

435
00:25:56,375 --> 00:25:58,166
ಇಲ್ಲ. ನಾನು ಎಲ್ಲಾ ಕಡೆ ನೋಡಿದ್ದೇನೆ.

436
00:25:58,333 --> 00:26:00,250
ಕ್ಯಾರವಾನ್ ಸುತ್ತಲೂ.

437
00:26:01,291 --> 00:26:02,833
ಕ್ಯಾರವಾನ್ ಕೆಳಗೆ.

438
00:26:03,000 --> 00:26:04,958
ಮತ್ತೆ ಕ್ಯಾರವಾನ್ ಒಳಗಡೆ?

439
00:26:10,250 --> 00:26:11,750
ಒಮ್ಮೆ ನೋಡಬಹುದು.

440
00:26:12,625 --> 00:26:14,583
ಓ, ಅದು ಹಾಗಲ್ಲ…

441
00:26:15,875 --> 00:26:16,916
ಏನು?

442
00:26:17,083 --> 00:26:18,875
ಬೆರಳಚ್ಚುಗಳು ಬೀಳುತ್ತವೆ, ಅಲ್ವಾ?

443
00:26:19,958 --> 00:26:22,833
ನಿಜ. ವಿಧಿವಿಜ್ಞಾನದವರು.

444
00:26:23,500 --> 00:26:24,541
ಹೌದು.

445
00:26:33,375 --> 00:26:35,625
ಸರಿ, ಎಲ್ಲವೂ ಇದ್ದಂತೆಯೇ ಕಾಣುತ್ತಿದೆ.

446
00:26:35,791 --> 00:26:37,291
ತಡಿ, ಇರು, ಇರು.

447
00:26:38,333 --> 00:26:43,125
ಹೃದಯಾಘಾತ ಆದ ವ್ಯಕ್ತಿ
ಸುಮ್ಮನೆ ಯಾಕೆ ಎದ್ದು ಆಚೆ ಬರುತ್ತಾನೆ?

448
00:26:43,458 --> 00:26:45,166
ಬಹುಶಃ ಹೊರಗೆ ಬಂದಿದ್ದಾಗ ಆಗಿರಬಹುದು.

449
00:26:45,333 --> 00:26:47,166
ಇಲ್ಲ, ಇಲ್ಲ. ಅದು ಆಗಿದ್ದು ಇಲ್ಲಿ.

450
00:26:47,833 --> 00:26:49,583
ಅವನು ಕುರ್ಚಿಯನ್ನು ಬೀಳಿಸಿದ್ದಾನೆ.

451
00:26:53,416 --> 00:26:54,916
ಮತ್ತು ಅವನು ಒಬ್ಬನೇ ಇರಲಿಲ್ಲ.

452
00:26:55,208 --> 00:26:56,875
ಮತ್ತು ಅವನು ಒಬ್ಬನೇ ಇರಲಿಲ್ಲ.

453
00:26:59,000 --> 00:27:00,250
ಏನಯ್ಯಾ ಇದು.

454
00:27:00,833 --> 00:27:02,291
ಇದೊಂದು ಹೃದಯಾಘಾತ.

455
00:27:02,458 --> 00:27:04,416
ಹಾಗಲ್ಲ ಅಂತ ನಿರೂಪಿಸುವ ಸಾಕ್ಷಿಗಳಿದ್ದರೂ
ನೀವು ಅದನ್ನು ಬೇಕಂತಲೇ

456
00:27:04,541 --> 00:27:06,333
ನಿರ್ಲಕ್ಷಿಸುತ್ತಿದ್ದೀರಿ ಅಂತ
ನನಗೆ ಅನಿಸುತ್ತಿದೆ.

457
00:27:06,458 --> 00:27:09,541
ಅಂದರೆ ಏನು ಹೇಳುತ್ತಿದ್ದೀಯ?
ಅದು ಕೊಲೆಯಾದರೆ ನನಗೆ ಭಯ ಅಂತಾನಾ?

458
00:27:09,916 --> 00:27:10,750
ಭಯ ಆಗಿದೆಯಾ?

459
00:27:11,666 --> 00:27:12,666
ಬಿಡು.

460
00:27:12,833 --> 00:27:16,458
ಡೆನ್‌ಬ್ರೂಕ್‌ನಲ್ಲಿ ಕೊಲೆ ನಡೆಯಲಿ ಅಂತ ಆಶಿಸುವೆ.
ದಿನಕ್ಕೊಂದು ಕೊಲೆಯಾಗಲಿ ಅಂತ ಬಯಸುತ್ತೇನೆ.

461
00:27:16,625 --> 00:27:18,208
ನನಗೆ ಬೇರೆ ಯಾವುದರಿಂದಲೂ ಸಂತೋಷ ಸಿಗಲ್ಲ.

462
00:27:20,125 --> 00:27:24,291
ನೋಡು, ನಿನ್ನ ಮಹಾನ್ ವಾರ್ತಾಪತ್ರಿಕೆ ವೃತ್ತಿಗಾಗಿ
ನಿನಗೊಂದು ಕಥೆ ಬೇಕಿದೆ ಅಂತ ನನಗೆ ಗೊತ್ತು.

463
00:27:24,458 --> 00:27:25,875
ಆದರೆ ಕ್ಷಮಿಸು…

464
00:27:29,000 --> 00:27:31,708
ಜಾರ್ಜ್ ಹಾರ್ಡಿ ಕೊಲೆಯಾಗಿಲ್ಲ.

465
00:27:32,500 --> 00:27:34,000
ಜಾರ್ಜ್ ಹಾರ್ಡಿ ಕೊಲೆಯಾಗಿದ್ದಾನೆ.

466
00:27:35,333 --> 00:27:37,708
ಅದು ಕೊಲೆ ಅಂತ ಆ ಪೊಲೀಸಪ್ಪ ಹೇಳಿದನಾ?

467
00:27:37,875 --> 00:27:41,125
ಇಲ್ಲ. ಆ ಪೊಲೀಸಪ್ಪ ಹೇಳಿದ್ದು ಅದು ಹೃದಯಾಘಾತ
ಅಂತ. ಆದರೆ ಅವನು ತಪ್ಪು ತಿಳಿದಿದ್ದಾನೆ.

468
00:27:41,291 --> 00:27:44,583
ಓಹೋ. ಹಾಗೆಂದರೆ ಅದು ನಿಜವಾಗಲೂ ಕೊಲೆ ಅಲ್ಲ.

469
00:27:44,750 --> 00:27:48,625
ಹೊಲದಲ್ಲಿರುವ ಯಾವುದೋ ಪ್ರಾಣಿ ಮಾಡಿದ ಊಹೆ ಅಷ್ಟೇ.

470
00:27:50,291 --> 00:27:51,333
ಸರಿ.

471
00:27:52,000 --> 00:27:56,083
ಗುಂಡು ಹಾಕುವಷ್ಟು ಸಲಿಗೆ ಇರುವ ಯಾರೋ ಒಬ್ಬರು
ಜಾರ್ಜ್‌ನನ್ನು ಭೇಟಿಯಾಗಿದ್ದಾರೆ.

472
00:27:56,250 --> 00:27:57,833
ಆಮೇಲೆ ಅವನ ಸ್ವಾಸ್ಥ್ಯ ಕೆಟ್ಟಿದೆ.

473
00:27:58,000 --> 00:28:02,791
ಬಂದ ಅತಿಥಿ ಬೇರೆ ಯಾರಿಗೂ ಎಚ್ಚರಿಸದೆ
ಇರುವುದರಿಂದ, ಅವರೇ ಮಾಡಿರುವ ಸಾಧ್ಯತೆ ಇದೆ,

474
00:28:02,958 --> 00:28:06,375
ಮತ್ತು ಯಾವುದೇ ಗಾಯದ ಗುರುತುಗಳಿಲ್ಲದಿರುವ ಕಾರಣ
ವಿಷ ಕೊಟ್ಟಿರಬಹುದು.

475
00:28:06,708 --> 00:28:10,666
ಅವನ ಕೈಗಳ ಮೇಲಿದ್ದ ಹುಲ್ಲಿನಂಥ ಹಸಿರು ಬಣ್ಣವು
ಅವನ ಹೋರಾಟವನ್ನು ಸೂಚಿಸುತ್ತದೆ.

476
00:28:10,875 --> 00:28:12,583
ಕೊಲೆಗಾರ ತಪ್ಪಿಸಿಕೊಂಡಿದ್ದಾರೆ.

477
00:28:12,750 --> 00:28:16,041
ಜಾರ್ಜ್ ವಿಷಪ್ರಾಶನದಿಂದ ಸತ್ತಿದ್ದಾನೆ.

478
00:28:18,458 --> 00:28:19,625
ನಾನು ಊಹೆ ಮಾಡಲ್ಲ.

479
00:28:20,666 --> 00:28:24,625
ಆ ಪೊಲೀಸಪ್ಪ ಯಾವುದೇ ಪ್ರಯೋಜನವಿಲ್ಲ, ನಾವು
ರಾತ್ರಿ ಕೇಳುತ್ತಿದ್ದ ಕಥೆಗಳಲ್ಲಿ ಇದ್ದಂತೆಯೇ.

480
00:28:24,791 --> 00:28:28,166
ಅದಕ್ಕಾಗಿಯೇ ಬೇರೆ ಯಾರಾದರೂ ಬಂದು
ಅಪರಾಧವನ್ನು ಭೇದಿಸಬೇಕು.

481
00:28:28,333 --> 00:28:29,416
ಯಾರು?

482
00:28:29,708 --> 00:28:31,208
ಜಾರ್ಜ್ ನಮಗೆ ಊಟ ಹಾಕಿದ.

483
00:28:31,375 --> 00:28:33,500
ಜಾರ್ಜ್ ನಮ್ಮ ಆರೈಕೆ ಮಾಡಿದ.

484
00:28:33,666 --> 00:28:35,541
ಜಾರ್ಜ್ ನಮ್ಮನ್ನು ಪ್ರೀತಿಸಿದ.

485
00:28:36,000 --> 00:28:37,458
ನಾವು ಅವನಿಗೆ ಎಲ್ಲಾ ರೀತಿಯಲ್ಲಿ ಋಣಿಗಳು.

486
00:28:37,875 --> 00:28:39,500
ಏನು ಹೇಳುತ್ತಿದ್ದೀಯ?

487
00:28:39,666 --> 00:28:42,208
ನಮ್ಮ ಕುರುಬನನ್ನು ಕೊಲೆ ಮಾಡಿದ್ದಾರೆ.

488
00:28:42,375 --> 00:28:45,125
ಮತ್ತು ನಾವು ಅಪರಾಧವನ್ನು ಭೇದಿಸೋಣ.

489
00:28:49,500 --> 00:28:50,500
ಇದರಲ್ಲಿ ತಮಾಷೆ ಏನಿದೆ?

490
00:28:50,666 --> 00:28:52,833
ಅಯ್ಯಬ್ಬಾ.

491
00:28:53,666 --> 00:28:55,041
ಮೊದಲು ಏನೆಂದರೆ…

492
00:28:55,208 --> 00:28:57,541
ನೀವೆಲ್ಲರೂ ಕುರಿಗಳು!

493
00:28:57,875 --> 00:28:59,000
ನಿನ್ನ ಬಗ್ಗೆ ಹೇಳುತ್ತಿದ್ದಾನೆ.

494
00:28:59,166 --> 00:29:03,500
ನೀವೆಲ್ಲರೂ ಅಪರಾಧವನ್ನೇ ಭೇದಿಸುವಷ್ಟು
ಬುದ್ಧಿವಂತರು ಅಂದುಕೊಂಡಿದ್ದೀರಾ?

495
00:29:03,666 --> 00:29:08,416
ಸ್ವಂತ ಆಲೋಚನೆ ಇಲ್ಲದ ದಡ್ಡರನ್ನು ಮನುಷ್ಯರು
ಏನಂತ ಕರೆಯುತ್ತಾರೆ ಗೊತ್ತಾ?

496
00:29:08,583 --> 00:29:09,583
ಬಾತುಕೋಳಿಗಳು!

497
00:29:09,666 --> 00:29:10,500
ಕುರಿಗಳು!

498
00:29:10,666 --> 00:29:13,541
ಮತ್ತು ನೀನು.
"ಜಗತ್ತಿನಲ್ಲೇ ಅತಿ ಬುದ್ಧಿವಂತ ಕುರಿ."

499
00:29:13,708 --> 00:29:16,458
"ಜಗತ್ತಿನಲ್ಲಿ" ಎಲ್ಲೆಲ್ಲಿ ಓಡಾಡಿದ್ದೀಯ?

500
00:29:16,750 --> 00:29:19,541
ಇಲ್ಲಾ? ಮತ್ತು ಅಲ್ಲಾ?

501
00:29:19,916 --> 00:29:20,958
ಬಿಡಮ್ಮ.

502
00:29:21,125 --> 00:29:25,208
ಸುಮ್ಮನೆ ಹುಲ್ಲು ಮತ್ತು ಕಾಡು ಸೇವಂತಿಗೆಗಳನ್ನು
ತಿಂದುಕೊಂಡು, ಹಾಯಾಗಿ ಮಲಗುತ್ತಾ,

503
00:29:25,375 --> 00:29:28,125
ಕೊಲೆ ಪ್ರಕರಣದ ವಿಷಯಗಳನ್ನು
ಮನುಷ್ಯರಿಗೆ ಬಿಟ್ಟುಬಿಡು.

504
00:29:29,666 --> 00:29:32,125
ಮತ್ತೆ. ಶುರು ಮಾಡೋಣವೇ?

505
00:29:34,250 --> 00:29:37,916
ಸುಳಿವುಗಳನ್ನು ಹುಡುಕಿ.
ಯಾವುದೇ ಸಾಕ್ಷಿಯನ್ನು ಕದಲಿಸಬೇಡಿ.

506
00:29:40,083 --> 00:29:43,000
ಕೃತ್ಯ ನಡೆದ ಸ್ಥಳವನ್ನು ತಿನ್ನುವಂತಿಲ್ಲ!

507
00:29:44,250 --> 00:29:45,541
ಹೇ, ಏನಿದು?

508
00:29:45,708 --> 00:29:48,791
ಕೇಳಿರೋ! ನಾನೊಂದು ಸುಳಿವಿನ ಒಳಗಡೆ ಇರಬಹುದು!

509
00:29:50,291 --> 00:29:52,625
ಅಯ್ಯೋ ದೇವರೇ. ಹಲೋ?

510
00:29:52,750 --> 00:29:54,750
ಸರಿ, ಸುಳಿವುಗಳ ವಿಷಯವನ್ನು ಬಿಡೋಣ.

511
00:29:54,916 --> 00:29:58,375
ಕೊಲೆ ನಡೆದ ರಾತ್ರಿ
ಯಾರಾದರೂ ಏನನ್ನಾದರೂ ನೋಡಿದಿರಾ?

512
00:29:58,541 --> 00:30:00,000
ನಾನು ನೋಡಿದೆ.

513
00:30:01,125 --> 00:30:03,166
ನಾನು ನಿನ್ನನ್ನು ನೋಡಿದೆ, ಸೆಬಾಸ್ಟಿಯನ್.

514
00:30:04,208 --> 00:30:05,416
ಸೆಬಾಸ್ಟಿಯನ್ ಮಾಡಿದ್ದು!

515
00:30:05,583 --> 00:30:07,125
ಕೊಲೆಗಾರ!

516
00:30:07,666 --> 00:30:09,625
ಹೌದು. ನಾನೇ ಮಾಡಿದ್ದು.

517
00:30:09,791 --> 00:30:13,791
ನಾನು ಹಿಡಿಸದ ಬಾಗಿಲಿನ ಮೂಲಕ ಒಳಹೋಗಿ,
ನಾನು ಕೂರಲಾಗದ ಕುರ್ಚಿಯ ಮೇಲೆ ಕುಳಿತು,

518
00:30:13,958 --> 00:30:16,041
ಯಾವುದೇ ಕಾರಣವಿಲ್ಲದೆ
ನನ್ನ ಕುರುಬನನ್ನೇ ಕೊಂದುಬಿಟ್ಟೆ,

519
00:30:16,208 --> 00:30:20,125
ಜಾಗರೂಕವಾಗಿ ಅವನ ಲೋಟದೊಳಗೆ
ವಿಷದ ತೊಟ್ಟುಗಳನ್ನು ಹಿಂಡಿದೆ,

520
00:30:20,375 --> 00:30:22,125
ಇದನ್ನು ಬಳಸಿಕೊಂಡು.

521
00:30:22,291 --> 00:30:24,000
-ಅವನು ಹೇಳಿದ್ದೂ ಸರಿಯೇ.
-ಏನು ನಡೆಯುತ್ತಿದೆ?

522
00:30:24,166 --> 00:30:26,500
ಯಾರಾದರೂ ಮನುಷ್ಯರನ್ನು ನೋಡಿದಿರಾ?

523
00:30:27,250 --> 00:30:29,333
ನಾನು ಜಾರ್ಜ್‌ನ ಭೂತವನ್ನು ನೋಡಿದೆ.

524
00:30:30,250 --> 00:30:32,041
-ಇಲ್ಲ, ಹಾಗೇನಿಲ್ಲ.
-ನೋಡಿದೆ.

525
00:30:34,125 --> 00:30:36,291
ಭೂತವು ಅವನ ದೇಹದಿಂದ ಮೇಲೆದ್ದಿತು.

526
00:30:36,458 --> 00:30:39,833
ಅಂದರೆ, ನನಗೆ ಕತ್ತಲಲ್ಲಿ
ಅಷ್ಟು ಸ್ಪಷ್ಟವಾಗಿ ಕಾಣಲಿಲ್ಲ,

527
00:30:40,000 --> 00:30:42,291
ಆದರೆ ಆ ವಾಸನೆ ಜಾರ್ಜ್‌ನಂತೆಯೇ ಇತ್ತು ಮತ್ತು--

528
00:30:42,458 --> 00:30:45,333
ದಯವಿಟ್ಟು, ವಿಂಟರ್ ಲ್ಯಾಂಬ್,
ಅದಕ್ಕೆ ಇದು ಸಮಯವಲ್ಲ.

529
00:30:45,791 --> 00:30:48,458
ಗಂಟೆಗಳಾ? ಎರಡು ದಿನಗಳ ಹಿಂದಷ್ಟೇ
ಗಂಟೆಗಳನ್ನು ಹೊಡೆದಿದ್ದರು.

530
00:30:48,791 --> 00:30:51,583
ಊರಿನವರನ್ನು ಸಭೆ ಸೇರಿಸಲು
ಗಂಟೆಗಳನ್ನು ಬಾರಿಸುತ್ತಾರೆ.

531
00:30:51,750 --> 00:30:53,000
ಇದು ಜಾರ್ಜ್ ಬಗ್ಗೆ.

532
00:30:53,166 --> 00:30:54,208
ಖಂಡಿತ!

533
00:30:54,375 --> 00:30:58,875
ರಾತ್ರಿಯ ಕಥೆಗಳಲ್ಲಿ, ಕೊಲೆಯನ್ನು ಘೋಷಿಸಲು
ಯಾವಾಗಲೂ ಒಂದು ಸಭೆ ಸೇರಿಸುತ್ತಾರೆ.

534
00:30:59,041 --> 00:31:00,958
ಮತ್ತು ಕೊಲೆಗಾರ ಅವರ ನಡುವೆಯೇ ಇರುತ್ತಾನೆ.

535
00:31:01,125 --> 00:31:02,500
ನಾವು ಅಲ್ಲಿಗೆ ಹೋಗಬೇಕು.

536
00:31:03,208 --> 00:31:05,416
ಮನೆ ಬಿಟ್ಟು ಹೋಗುವಷ್ಟು ಧೈರ್ಯ ಇದೆಯಾ ನಿನಗೆ?

537
00:31:05,583 --> 00:31:07,416
ನಿಮ್ಮಲ್ಲಿ ಯಾರೂ
ಈ ಹುಲ್ಲುಗಾವಲನ್ನು ಬಿಟ್ಟು ಹೋಗಿಲ್ಲ.

538
00:31:07,583 --> 00:31:10,041
ನಿಮ್ಮ ಗೊರಸುಗಳು ಹುಲ್ಲನ್ನು ಬಿಟ್ಟರೆ
ಬೇರೇನನ್ನೂ ಸ್ಪರ್ಶಿಸಿಲ್ಲ.

539
00:31:10,208 --> 00:31:12,041
ಮನೆ ಬಿಟ್ಟು ಹೋಗುವುದರಲ್ಲಿ ಏನು ಕಷ್ಟವಿದೆ?

540
00:31:12,208 --> 00:31:13,583
ನಮಗೆ ಯಾವ ಭಯವಿಲ್ಲ.

541
00:31:18,958 --> 00:31:20,958
-ಮಾಪಲ್, ಏನದು?
-ರಸ್ತೆ ಅನಿಸುತ್ತೆ.

542
00:31:21,083 --> 00:31:23,500
-ಆದರೆ ಅದನ್ನು ಯಾವುದರಿಂದ ಮಾಡಿದ್ದಾರೆ?
-ಅಂದರೆ, ಹುಲ್ಲಂತೂ ಅಲ್ಲ, ಅದು ಹೇಳಬಲ್ಲೆ.

543
00:31:23,625 --> 00:31:24,708
ಲಿಲ್ಲಿ?

544
00:31:25,250 --> 00:31:26,250
ಹಾಂ!

545
00:31:26,416 --> 00:31:27,875
ಬರುತ್ತಿದ್ದೀಯಾ?

546
00:31:28,041 --> 00:31:29,708
ನಾನು ಬರೀ…

547
00:31:30,041 --> 00:31:32,083
ನೀನು ಹೋಗು ಮುಂದೆ.

548
00:31:32,250 --> 00:31:34,416
ಯಾಕೆ ಕೂಗುತ್ತಿದ್ದೀಯ?

549
00:31:34,583 --> 00:31:36,875
ನಾನು ನಿನ್ನಿಂದ ಕೆಲವೇ ಅಡಿಗಳಷ್ಟು ದೂರ ಇದ್ದೇನೆ.

550
00:31:38,625 --> 00:31:40,291
ಆದರೆ ಇದು ತುಂಬಾ ದೂರ ಅನಿಸುತ್ತಿದೆ.

551
00:31:40,458 --> 00:31:43,958
ನೀವು ರಸ್ತೆ ದಾಟಿ ಬರಬೇಕು ಅಷ್ಟೇ.

552
00:31:56,625 --> 00:31:59,125
ಇಲ್ಲ. ಇಲ್ಲ, ನನ್ನಿಂದ ಆಗಲ್ಲ.

553
00:31:59,291 --> 00:32:00,583
ಇದು ಅಸಾಧ್ಯ.

554
00:32:15,375 --> 00:32:17,041
ಅದು ನಿನ್ನ ತಪ್ಪಲ್ಲ.

555
00:32:17,208 --> 00:32:18,708
ಅದು ನಮ್ಮ ಸ್ವಭಾವ ಅಷ್ಟೇ.

556
00:32:21,625 --> 00:32:25,500
ಬಹುಶಃ ನಾವಿಬ್ಬರೂ ಜೊತೆಯಲ್ಲಿ ದಾಟಿದರೆ.

557
00:32:27,375 --> 00:32:28,666
ಜಾರ್ಜ್‌ಗಾಗಿ?

558
00:32:30,500 --> 00:32:32,083
ಜಾರ್ಜ್‌ಗಾಗಿ.

559
00:32:33,083 --> 00:32:34,416
ಜೊತೆಯಾಗಿ.

560
00:32:45,791 --> 00:32:48,166
-ನಾನು ವಾಪಸ್ ಹೋಗಬೇಕು.
-ನಾನೂ ಅಷ್ಟೇ. ಸುಮ್ಮನೆ ನಡೆ.

561
00:32:52,291 --> 00:32:54,500
ನಾವು ಸಾಧಿಸಿದೆವು! ಮನೆ ಬಿಟ್ಟು ಬಂದೆವು!

562
00:32:54,666 --> 00:32:56,833
ನೋಡಿದೆಯಾ? ಕುರಿಗಳು ಕೂಡ ಮಾಡಬಲ್ಲವು.

563
00:32:57,000 --> 00:32:59,541
ಅಸಲಿಗೆ, ನಾವು ಏನು ಬೇಕಾದರೂ ಮಾಡಬಲ್ಲೆವು.

564
00:32:59,708 --> 00:33:01,083
ಭಲೇ ಭಲೇ.

565
00:33:01,250 --> 00:33:03,416
ಇನ್ನೆರಡೇ ಮೈಲಿ ಹೋಗಬೇಕಷ್ಟೇ.

566
00:33:03,583 --> 00:33:05,250
ತೊಂದರೆ ಏನಿಲ್ಲ.

567
00:33:05,875 --> 00:33:07,958
ಮತ್ತು ಈಗ ಎಷ್ಟು ಮೈಲಿ ಬಂದೆವು ನಾವು?

568
00:33:08,625 --> 00:33:10,291
ನಾನು ಒಪ್ಪಲೇಬೇಕು, ಮೆಚ್ಚಿದೆ.

569
00:33:10,458 --> 00:33:14,750
ನೀನು ರಹಸ್ಯವನ್ನು ಬಗೆಹರಿಸಲ್ಲ, ಆದರೂ ನೀನು
ಸ್ವಲ್ಪ ಪ್ರಪಂಚವನ್ನಾದರೂ ನೋಡುತ್ತಿದ್ದೀಯ.

570
00:33:14,916 --> 00:33:16,958
ಖಂಡಿತ ನಾನು ರಹಸ್ಯವನ್ನು ಬಗೆಹರಿಸುವೆ.

571
00:33:17,125 --> 00:33:19,208
ಇಂದು ರಾತ್ರಿಯೊಳಗೇ ಬಗೆಹರಿಸುವೆ.

572
00:33:19,625 --> 00:33:22,250
ಜಾರ್ಜ್ ನಮಗೆ ಇಂಥ ಹಲವಾರು ಕಥೆಗಳನ್ನು
ರಾತ್ರಿ ಹೇಳಿದ್ದ.

573
00:33:22,416 --> 00:33:25,166
ಅವುಗಳ ನಿಯಮಗಳು ಬಹಳ ಸರಳ.

574
00:33:25,333 --> 00:33:26,541
ಮಾಪಲ್?

575
00:33:27,291 --> 00:33:29,125
ಹಾಂ? ಓ. ಒಂದು!

576
00:33:29,250 --> 00:33:31,375
ಕೊಲೆಗಾರ ಯಾವಾಗಲೂ
ಕೃತ್ಯದ ಸ್ಥಳಕ್ಕೆ ವಾಪಸಾಗುತ್ತಾನೆ.

577
00:33:31,458 --> 00:33:32,291
ಎರಡು!

578
00:33:32,416 --> 00:33:34,583
ಪೊಲೀಸರು ಯಾವಾಗಲೂ ಯಾರೋ ಆಗಂತುಕ
ಮಾಡಿರಬಹುದು ಎಂದುಕೊಳ್ಳುತ್ತಾರೆ.

579
00:33:34,750 --> 00:33:36,333
ಓ, ಅವರಿಗೆ ಯಾವಾಗಲೂ ಆಗಂತುಕನದ್ದೇ ಚಿಂತೆ.

580
00:33:36,416 --> 00:33:37,250
ಮೂರು.

581
00:33:37,375 --> 00:33:40,583
ಒಬ್ಬ ಅನಿರೀಕ್ಷಿತ ವ್ಯಕ್ತಿ ಬಂದು
ಎಲ್ಲವನ್ನೂ ಬದಲಾಯಿಸುತ್ತಾರೆ.

582
00:33:40,750 --> 00:33:41,583
ನಾಲ್ಕು!

583
00:33:41,750 --> 00:33:44,583
ಕೊಲೆಯಾದವರೇ ಅತಿ ಮುಖ್ಯವಾದ ಸುಳಿವು.

584
00:33:44,916 --> 00:33:47,208
ಸರಿ, ಅದು ಸರಳವೇ.

585
00:33:47,375 --> 00:33:52,458
ಆದರೆ ನೈಜ ಪ್ರಪಂಚವು ಪುಸ್ತಕಕ್ಕಿಂತ ಸ್ವಲ್ಪ
ಸಂಕೀರ್ಣವಾಗಿರುತ್ತದೆ ಅಂತ ನೀನು ಅರಿಯುವೆ.

586
00:33:52,625 --> 00:33:53,791
ಮಾತಾಡಿದ್ದೇ ಬಂತು…

587
00:33:53,958 --> 00:33:56,083
ಡೆನ್‌ಬ್ರೂಕ್‌ಗೆ ಸ್ವಾಗತ.

588
00:33:56,916 --> 00:33:58,166
ಏನಿದು?

589
00:33:58,333 --> 00:34:01,250
ಈ ಚರ್ಚ್ ಒಳಗಡೆ ಯಾರೋ
"ದೇವರು" ಅನ್ನೋರು ಇರುತ್ತಾರಂತೆ.

590
00:34:01,416 --> 00:34:02,416
ದೇವರು ಅಂದರೆ ಯಾರು?

591
00:34:02,583 --> 00:34:03,916
ಅದು ಸ್ವಲ್ಪ ಗೊಂದಲಮಯವೇ.

592
00:34:04,083 --> 00:34:05,500
ದೇವರು ಒಬ್ಬ ಕುರುಬ.

593
00:34:05,666 --> 00:34:07,083
ಅಂದರೆ ಆತ ನಮ್ಮ ಕುರುಬನೂ ಆಗಿರಬಹುದಾ?

594
00:34:07,250 --> 00:34:09,833
ಇಲ್ಲ. ಯಾಕೆಂದರೆ ಆತ ಕುರಿಮರಿ ಕೂಡ.

595
00:34:09,916 --> 00:34:10,750
ಏನು?

596
00:34:10,875 --> 00:34:12,625
ಮತ್ತು ಅವನು ಆಗೋಚರ ಕೂಡ.

597
00:34:12,791 --> 00:34:14,041
ಮತ್ತು ಅವನು ರೊಟ್ಟಿಯಿಂದ ಮಾಡಲ್ಪಟ್ಟಿರುತ್ತಾನೆ.

598
00:34:14,208 --> 00:34:15,583
ಅವನು ಎಲ್ಲದಕ್ಕೂ ಶಾಪ ಹಾಕುತ್ತಿರುತ್ತಾನೆ.

599
00:34:15,708 --> 00:34:17,666
ಚಾಪೆ ಹಾಕೋದಾ? ನೆಲದ ಮೇಲಿನಂತೆ?

600
00:34:17,833 --> 00:34:18,833
ಹೌದು.

601
00:34:19,000 --> 00:34:22,500
ಅಂದರೆ ದೇವರು ಒಂದು ದೊಡ್ಡ, ಅಗೋಚರ ಚಾಪೆ ಹಾಕುವ
ಕುರಿಮರಿ, ರೊಟ್ಟಿಯಿಂದ ಮಾಡಲ್ಪಟ್ಟವನಾ?

602
00:34:22,666 --> 00:34:24,625
ಹೌದು. ಅವನನ್ನು ಭಾನುವಾರದಂದು ತಿನ್ನುತ್ತಾರೆ.

603
00:34:25,583 --> 00:34:26,875
ಪಾಪದ ದೇವರು.

604
00:34:27,208 --> 00:34:28,541
ನಾನು ವಾಪಸ್ ಬರಬೇಕಿತ್ತು ಅಂತ ಗೊತ್ತು,

605
00:34:28,708 --> 00:34:32,333
ಆದರೆ ನನಗೆ ಈಗಷ್ಟೇ ಒಂದು ಸಣ್ಣ ಊರಿನ
ರಹಸ್ಯ ಪ್ರಕರಣ ಸಿಕ್ಕಿರಬಹುದು.

606
00:34:32,500 --> 00:34:34,291
ನಾನು ಹೋಗಬೇಕು, ಹೋಗಬೇಕು.

607
00:34:34,458 --> 00:34:36,291
ಬಾ. ನಾವು ಅವರಿಗೆ ಇಲ್ಲಿಂದ ಕಾಣಲ್ಲ.

608
00:34:36,458 --> 00:34:38,833
ಅವರಿಗೆ ಈಗಾಗಲೇ ಕಾಣುತ್ತಿದ್ದೀರಿ,
ಅವರು ತಲೆಕೆಡಿಸಿಕೊಳ್ಳುವುದಿಲ್ಲ.

609
00:34:39,000 --> 00:34:41,416
ನೂರನೇ ಸಲ ಹೇಳುತ್ತಿದ್ದೇನೆ, ನೀವು ಕುರಿಗಳು.

610
00:34:41,875 --> 00:34:43,833
ಡೆನ್‌ಬ್ರೂಕ್‌ನ ಜನಗಳೇ.

611
00:34:44,250 --> 00:34:48,750
ಜಾರ್ಜ್ ಹಾರ್ಡಿಯ ಸಾವು ಅನುಮಾನಾಸ್ಪದ ಎಂಬ
ವದಂತಿಗಳು ಓಡಾಡುತ್ತಿವೆ ಅಂತ ನನಗೆ ಗೊತ್ತು.

612
00:34:48,916 --> 00:34:52,541
ಆದರೆ ತನಿಖೆ ನಡೆಯುತ್ತಿರುವುದರಿಂದ
ವಿಷಪ್ರಾಶನದ ಬಗ್ಗೆ ನಾನು--

613
00:34:52,666 --> 00:34:54,583
ತಡಿ! ಜಾರ್ಜ್ ಕೊಲೆಯಾದನಾ?

614
00:34:55,458 --> 00:34:56,583
ಅಯ್ಯೋ.

615
00:34:56,750 --> 00:34:59,000
ಕ್ಷಮಿಸಿ, ಯಾವ ರೀತಿಯ ವಿಷ?

616
00:34:59,166 --> 00:35:00,166
ನೋಡಿ.

617
00:35:00,708 --> 00:35:03,208
ಜಾರ್ಜ್‌ಗೆ ಹಾಕಿದ ವಿಷಯ ಹೆಸರು ಟ್ಯಾಕ್ಸಿನ್.

618
00:35:03,500 --> 00:35:05,125
ಸ್ಥೌನೇಯ ಮರದ ಹಣ್ಣುಗಳಲ್ಲಿ ಅದು ಕಂಡುಬರುತ್ತದೆ.

619
00:35:05,291 --> 00:35:07,625
ಮತ್ತು ಆ ಮರಗಳು ಇಲ್ಲಿ ಬೆಳೆಯುತ್ತವೆಯಾ?

620
00:35:09,333 --> 00:35:10,166
ಅಲ್ಲೇ.

621
00:35:12,000 --> 00:35:13,583
ಅಂದರೆ ಅವನನ್ನು ಕೊಂದವರು ನಮ್ಮಲ್ಲೇ ಇದ್ದಾರೆ.

622
00:35:13,750 --> 00:35:15,041
ಇಲ್ಲ, ಇಲ್ಲ. ಇಲ್ಲ. ಇಲ್ಲ.

623
00:35:15,208 --> 00:35:18,291
ದಯವಿಟ್ಟು. ಅದನ್ನು ಮಾಡಿರುವುದು
ಖಂಡಿತ ಒಬ್ಬ ಆಗಂತುಕನೇ.

624
00:35:22,791 --> 00:35:24,208
ಏನಾಗಿದೆ ಅವುಗಳಿಗೆ?

625
00:35:44,916 --> 00:35:46,375
ಆಫೀಸರ್ ಡೆರ್ರಿ?

626
00:35:47,250 --> 00:35:48,541
ಆಫೀಸರ್ ಡೆರ್ರಿ.

627
00:35:49,458 --> 00:35:50,541
ಹಾಂ.

628
00:35:50,875 --> 00:35:53,458
ಏನ್--? ನಾನೇ ಅದು.

629
00:35:53,625 --> 00:35:56,333
ಲಿಡಿಯಾ ಹಾರ್‌ಬಾಟಲ್? ಹಾರ್‌ಬಾಟಲ್ ಅಂಡ್ ಬ್ಲೂಮ್?

630
00:35:56,583 --> 00:36:00,083
ಮುಂಚೆ ಮಾತಾಡಿದ್ದೆವು.
ನಾನು ದಿವಂಗತ ಜಾರ್ಜ್ ಹಾರ್ಡಿಯ ವಕೀಲೆ.

631
00:36:00,250 --> 00:36:02,708
ಸರಿ. ಮತ್ತು ನೀವು?

632
00:36:02,916 --> 00:36:04,875
ನಾನು ರೆಬೆಕ್ಕಾ ಹ್ಯಾಂಪ್‌ಸ್ಟೆಡ್.

633
00:36:05,041 --> 00:36:06,833
ನಾನು ಜಾರ್ಜ್‌ನ ಮಗಳು.

634
00:36:07,416 --> 00:36:10,125
-ಅವನಿಗೆ ಮಗಳಿದ್ದಳಾ?
-ಜಾರ್ಜ್‌ಗೆ ಮಗಳಿದ್ದಾಳಾ?

635
00:36:10,625 --> 00:36:15,250
ಒಬ್ಬ ಅನಿರೀಕ್ಷಿತ ವ್ಯಕ್ತಿ ಬಂದು
ಎಲ್ಲವನ್ನೂ ಬದಲಾಯಿಸುತ್ತಾರೆ.

636
00:36:16,666 --> 00:36:19,500
ಪುಟದ ಕೆಳಗೆ ಇರುವುದು ನಿಮ್ಮ ಫೋನ್ ಸಂಖ್ಯೆ.

637
00:36:19,666 --> 00:36:21,500
ಹಾಗಾಗಿ ನಿಮಗೆ ಕರೆ ಮಾಡಿದೆ.

638
00:36:21,666 --> 00:36:23,250
ನಾನು ಯಾವಾಗಲು ಪತ್ತೆ ಮಾಡುತ್ತಿರುತ್ತೇನೆ.

639
00:36:23,416 --> 00:36:25,083
ಆದರೂ ನೀವು ಪತ್ತೇದಾರ ಅಲ್ಲ ಅಲ್ವಾ?

640
00:36:25,250 --> 00:36:26,250
ಗೊತ್ತು, ಆದರೆ--

641
00:36:26,375 --> 00:36:28,250
ಒಂದು ಸಣ್ಣ ಕ್ಯಾರವಾನ್ ಒಳಗಿನ ಮೇಜಿನ ಮೇಲೆ

642
00:36:28,333 --> 00:36:30,291
ಈ ದಾಖಲೆಯನ್ನು
ತೆರೆದಿರುವುದನ್ನು ನೀವು ನೋಡಿದಿರಿ.

643
00:36:30,416 --> 00:36:31,666
ಅದು ಕೇವಲ "ಗಮನಿಸುವುದು" ಅಷ್ಟೇ, ಅಲ್ವಾ?

644
00:36:31,833 --> 00:36:32,666
ಅಂದರೆ…

645
00:36:32,791 --> 00:36:37,208
ಹಾರ್ಡಿಯವರ ಕ್ಯಾರವಾನ್‌ಗೆ ಎರಡನೆಯ ಸಲ ಹೋದಾಗ
ಈ ದಾಖಲೆಯನ್ನು ಗಮನಿಸಿದಿರಾ?

646
00:36:37,375 --> 00:36:38,291
ಹೌದು, ನಿಜ.

647
00:36:38,458 --> 00:36:41,666
ಅಂದರೆ, ನಾನು ಅಲ್ಲಿಗೆ ವಾಪಸ್ ಹೋಗಿ,
ಅಲ್ಲಿ ಚೆನ್ನಾಗಿ ಹುಡುಕಿದೆ.

648
00:36:42,083 --> 00:36:45,208
ಅಲ್ಲಿಗೆ ಹೋಗಿ ಪೊಲೀಸ್ ಟೇಪ್ ಹಾಕಿದೆ.
ನಾನು ಅಂದುಕೊಂಡಿದ್ದಕ್ಕಿಂತ ಅಂಟಾಗಿತ್ತು.

649
00:36:45,333 --> 00:36:46,958
ಬೇಕಾಗಿಲ್ಲ, ಆ ವಿಷಯ ಯಾರಿಗೂ ಬೇಕಾಗಿಲ್ಲ.

650
00:36:47,083 --> 00:36:49,750
ಅದನ್ನು ಓದಿದ್ದೀರಾ? ಅದನ್ನು ಒಮ್ಮೆ ನೋಡಿದ್ದೀರಾ?

651
00:36:49,916 --> 00:36:51,916
ಇಲ್ಲ. ಅದು ನನ್ನ ಕೆಲಸವಲ್ಲ.

652
00:36:52,083 --> 00:36:53,666
ಅದು ಖಂಡಿತ ನಿಮ್ಮದೇ ಕೆಲಸ.

653
00:36:54,166 --> 00:36:56,125
ಇಂದು ಮಧ್ಯಾಹ್ನ ಉಯಿಲನ್ನು ಓದಿ ಹೇಳುವೆ.

654
00:36:56,291 --> 00:37:00,083
ಈ ಕೆಲವರ ಹೆಸರುಗಳು ಇವೆ,
ಹಾಗಾಗಿ ಅವರು ಬಂದಿರುವಂತೆ ನೋಡಿಕೊಳ್ಳಿ.

655
00:37:00,250 --> 00:37:04,250
ರೆವೆರೆಂಡ್ ಹಿಲ್‌ಕೋಟ್, ಕೇಲೆಬ್ ಮೆರ್ರೋ…

656
00:37:04,416 --> 00:37:05,833
ಇದನ್ನು ಬರೆದುಕೊಳ್ಳಿ.

657
00:37:06,000 --> 00:37:09,750
ರೆವೆರೆಂಡ್ ಹಿಲ್‌ಕೋಟ್,
ಕೇಲೆಬ್ ಮೆರ್ರೋ, ಬೆಥ್ ಪೆನ್ನಕ್,

658
00:37:09,916 --> 00:37:14,375
ಹ್ಯಾಮ್ ಗಿಲ್ಯರ್ಡ್, ನೀವು,
ಮತ್ತು ರೆಬೆಕ್ಕಾ ಹ್ಯಾಂಪ್‌ಸ್ಟೆಡ್.

659
00:37:14,541 --> 00:37:16,666
ನಾನು ಪಾರ್ಟ್ರಿಜ್ ಇನ್‌ನಲ್ಲಿ ತಂಗಿರುತ್ತೇನೆ.

660
00:37:17,250 --> 00:37:19,833
ಸಂಜೆ 5:00 ಗಂಟೆಗೆ ಸರಿಯಾಗಿ ಓದುತ್ತೇವೆ.

661
00:37:20,000 --> 00:37:22,083
ಸಂಜೆ 5:00 ಗಂಟೆ. 1700.

662
00:37:22,250 --> 00:37:27,583
ನೋಡಿ, ರೆಬೆಕ್ಕಾ ಅಮೆರಿಕದಲ್ಲಿದ್ದರೂ
ಆಕೆಯ ತಂದೆ ಸತ್ತ ಎಂದು ನೀವು ಹೇಳಿದ ದಿನದಂದೇ

663
00:37:27,750 --> 00:37:30,791
ಇಲ್ಲಿ ಡೆನ್‌ಬ್ರೂಕ್‌ಗೆ ಬಂದಿದ್ದಾಳೆ ಎಂದು
ನಾನು ನಿಮಗೆ ಹೇಳಿದೆ.

664
00:37:30,958 --> 00:37:33,791
ಅದರರ್ಥ ಅವನು ಕೊಲೆಯಾದ ರಾತ್ರಿಯಂದು
ಅವಳು ಅದಾಗಲೇ ಈ ದೇಶದಲ್ಲಿ ಇದ್ದಳು.

665
00:37:33,958 --> 00:37:35,708
ನೀವು ಅದರ ಬಗ್ಗೆ ಗಮನ ಹರಿಸಲಿಲ್ಲ, ಅಲ್ವಾ?

666
00:37:36,958 --> 00:37:38,041
ಹಾಂ.

667
00:37:38,375 --> 00:37:40,875
ಇಲ್ಲ. ಹಾಂ. ಖಂಡಿತ ಗಮನಿಸಿದೆ.

668
00:37:41,291 --> 00:37:43,708
ಇದು ನಿಮ್ಮ ಮೊದಲ ಕೊಲೆ, ಅಲ್ವಾ?

669
00:37:43,875 --> 00:37:44,916
ಏನು?

670
00:37:45,958 --> 00:37:47,791
ಅವನನ್ನು ನಾನು ಕೊಂದೆ ಅಂತೀರಾ?

671
00:37:54,000 --> 00:37:57,500
ಹಾಂ, ಅಂದರೆ ನಿಮ್ಮ ಅರ್ಥ
ನನ್ನ ಮೊದಲ ಕೊಲೆ ಪ್ರಕರಣ.

672
00:37:58,458 --> 00:38:01,791
ಸರಿ, ಅದೆಲ್ಲವೂ ಈಗ ನಿಮ್ಮ ಹೆಗಲ ಮೇಲಿದೆ,
ಆಫೀಸರ್ ಡೆರ್ರಿ.

673
00:38:02,125 --> 00:38:03,208
5:00 ಗಂಟೆಗೆ ಸಿಗೋಣ.

674
00:38:03,375 --> 00:38:05,041
5:00 ಗಂಟೆಗೆ ಸಿಗೋಣ, ಮಿಸ್ ಹಾರ್‌ಬಾಟಲ್.

675
00:38:05,208 --> 00:38:06,500
ಮೇಡಂ ಹಾರ್‌ಬಾಟಲ್.

676
00:38:08,750 --> 00:38:10,875
ನಾವು ಆ ಉಯಿಲು ಓದುವ ಸಭೆಗೆ ಹೋಗಬೇಕು.

677
00:38:11,458 --> 00:38:13,041
ಇದು ಪಾರ್ಟ್ರಿಜ್ ಇನ್.

678
00:38:13,208 --> 00:38:15,250
ನಾನು ಕೆಲವೊಮ್ಮೆ
ಇಲ್ಲಿ ಹೂಗಳನ್ನು ತಿನ್ನುತ್ತೇನೆ.

679
00:38:15,416 --> 00:38:18,708
ಆದರೂ, ಇದೆಲ್ಲವೂ ಹೇಗೆ ಮುಖ್ಯವಾಗುತ್ತದೆಯೋ
ನನಗೆ ಗೊತ್ತಿಲ್ಲ.

680
00:38:18,875 --> 00:38:21,250
ರಾತ್ರಿ ಹೇಳುತ್ತಿದ್ದ ಕತೆಗಳಲ್ಲಿ
ಯಾವಾಗಲೂ ಉಯಿಲು ಇರುತ್ತಿತ್ತು,

681
00:38:21,416 --> 00:38:24,583
ಮತ್ತು ಉಯಿಲಿನಲ್ಲಿ ಹೆಸರಿಸಲಾದ ಜನರೇ
ಯಾವಾಗಲೂ ಶಂಕಿತರು.

682
00:38:27,083 --> 00:38:28,416
ನಾನು ಅವರ ಮುಖಗಳನ್ನು ನೋಡಬೇಕು.

683
00:38:28,500 --> 00:38:29,333
ಯಾಕೆ?

684
00:38:29,500 --> 00:38:33,083
ಯಾಕೆಂದರೆ ಮನುಷ್ಯರು ಸಾಮಾನ್ಯವಾಗಿ ಸುಳ್ಳು
ಹೇಳುತ್ತಾರೆ, ಅದನ್ನು ಅವರ ಮುಖದಲ್ಲಿ ನೋಡಬಹುದು.

685
00:38:33,250 --> 00:38:34,500
ಅದೇನೇ.

686
00:38:36,125 --> 00:38:39,500
ಮಾಪಲ್, ನಾವು ಕಿಟಕಿಯ ಮೂಲಕ ನೋಡುವಾಗ, ಸುತ್ತಲೂ
ಯಾವುದಾದರೂ ಚೆನ್ನಾಗಿರೋದು ಇದೆಯಾ ಅಂತ ಹುಡುಕು.

687
00:38:39,666 --> 00:38:40,750
ಸರಿ.

688
00:38:41,416 --> 00:38:42,750
ಶುರು ಮಾಡೋಣವಾ?

689
00:38:45,208 --> 00:38:47,416
ನಿಮ್ಮ ಹೆತ್ತ ತಾಯಿಯ ಬಗ್ಗೆ ನಿಮಗೇನು ಗೊತ್ತು?

690
00:38:47,583 --> 00:38:51,250
ಆಕೆ ನನಗೆ ಜನ್ಮ ಕೊಟ್ಟು ತೀರಿಕೊಂಡರು ಅಂತ
ಅಪ್ಪ ನನಗೆ ಪತ್ರದಲ್ಲಿ ಹೇಳಿದ್ದರು.

691
00:38:51,416 --> 00:38:54,333
ಮತ್ತು ಅವರು ತುಂಬಾ ಕಿರಿಯರಾಗಿದ್ದರು
ಮತ್ತು ಭಯಗೊಂಡಿದ್ದರು ಮತ್ತು ಬಡತನದಲ್ಲಿದ್ದರು…

692
00:38:55,791 --> 00:38:57,750
ಮತ್ತು ನನ್ನನ್ನು ದತ್ತು ಕೊಟ್ಟುಬಿಟ್ಟರು.

693
00:38:58,291 --> 00:38:59,541
ಚರ್ಚಿನಿಂದ, ಅಸಲಿಗೆ.

694
00:39:02,375 --> 00:39:04,291
ನನ್ನದೂ ಒಂದು ಪ್ರಶ್ನೆಯಿದೆ.

695
00:39:04,458 --> 00:39:05,791
ಕ್ಷಮಿಸು, ಗುರು.

696
00:39:06,791 --> 00:39:08,291
ನಿಮ್ಮನ್ನು ನೋಡಿ ಖುಷಿಯಾಯಿತು.

697
00:39:08,458 --> 00:39:10,208
ನನಗೆ ಈಗಷ್ಟೇ ಅರಿವಾಯಿತು,

698
00:39:10,958 --> 00:39:12,208
ಅದೂ ನನಗೆ ಮಾತ್ರ,

699
00:39:12,375 --> 00:39:16,208
ಅಂದರೆ ನೀವು ಅಮೆರಿಕದಿಂದ ಇವತ್ತು ಇಲ್ಲಿಗೆ
ಬಂದಿರಲಿಕ್ಕೆ ಸಾಧ್ಯ ಇಲ್ಲ, ಅಲ್ವಾ?

700
00:39:16,375 --> 00:39:19,500
ಅಂದರೆ ನೀವು ಕಳೆದ ರಾತ್ರಿಯೇ
ಈ ದೇಶದಲ್ಲಿ ಇದ್ದಿರಿ ಅಂತರ್ಥ,

701
00:39:19,666 --> 00:39:22,750
ಅಂದರೆ ಜಾರ್ಜ್… ಕೊಲೆಯಾದ ಸಮಯದಲ್ಲಿ.

702
00:39:23,208 --> 00:39:26,500
ನಾನು ನಿಮ್ಮ ಮೇಲೆ ಯಾವುದೇ ಆರೋಪ ಮಾಡುತ್ತಿಲ್ಲ,
ಆದರೆ ಅದು ಸರಿಯಲ್ವಾ?

703
00:39:26,875 --> 00:39:28,791
ನೀವು ತುಂಬಾ ಬುದ್ಧಿವಂತರು, ಪತ್ತೇದಾರರೇ.

704
00:39:28,958 --> 00:39:31,208
ಇಲ್ಲ, ನಾನು ಪತ್ತೇದಾರ ಅಲ್ಲ.

705
00:39:31,375 --> 00:39:33,125
ನಾನೊಬ್ಬ ಅಧಿಕಾರಿ ಅಷ್ಟೇ…

706
00:39:33,291 --> 00:39:36,125
ಯಾವಾಗಲೂ ಪತ್ತೆ ಮಾಡುತ್ತಿರುತ್ತೇನೆ.

707
00:39:36,625 --> 00:39:39,750
ಸರಿ, ನಾನು… ನಾನು…

708
00:39:40,541 --> 00:39:44,083
ನಾನು ಈ ದೇಶದಲ್ಲೇ ಇದ್ದೆ,
ಆದರೆ ಇಂದಿನವರೆಗೂ ಡೆನ್‌ಬ್ರೂಕ್‌ಗೆ ಬಂದಿರಲಿಲ್ಲ.

709
00:39:44,625 --> 00:39:46,500
ಮುಂದಿನ ಪ್ರಶ್ನೆ:

710
00:39:46,666 --> 00:39:48,166
ನಿಮಗೆ ಯಾರಾದರೂ

711
00:39:48,333 --> 00:39:49,583
ಪ್ರಿಯಕರ ಇದ್ದಾರಾ?

712
00:39:50,583 --> 00:39:51,875
ಇದನ್ನು ನೋಡೋಕೆ ಆಗುತ್ತಿಲ್ಲ.

713
00:39:52,041 --> 00:39:53,916
ಏನು? ಇದು ಸಾಮಾನ್ಯವಾದ ಪ್ರಶ್ನೆ,

714
00:39:54,083 --> 00:39:57,833
ಇಂಥ ಸಂದರ್ಭದಲ್ಲಿ
ಯಾವುದೇ ತನಿಖಾಧಿಕಾರಿ ಕೇಳುವಂಥದ್ದೇ.

715
00:39:58,000 --> 00:40:01,083
ಇದನ್ನು ನೀವು ಕೇಳಿದ್ದು ಆಶ್ಚರ್ಯ ಅನಿಸುತ್ತಿದೆ.
ಇತ್ತೀಚೆಗಷ್ಟೇ ಬೇರೆಯಾದೆವು.

716
00:40:01,583 --> 00:40:02,791
ಅಯ್ಯೋ.

717
00:40:04,166 --> 00:40:05,583
ನನಗೆ ಕಂಡಿದ್ದು ನಿನಗೆ ಕಾಣಿಸಿತಾ?

718
00:40:05,750 --> 00:40:06,791
ಅವನ ಮಗಳು.

719
00:40:06,958 --> 00:40:09,125
ಅವಳ ಮುಖದಲ್ಲಿ ಖುಷಿ ಇದೆ…

720
00:40:09,291 --> 00:40:12,000
ಆದರೆ ಅವಳ ಕಣ್ಣುಗಳಲ್ಲಿ ಭಯ ಇದೆ.

721
00:40:12,166 --> 00:40:14,833
ಮತ್ತೆ, ನೀವು ನಿನ್ನೆ ರಾತ್ರಿ ಸರಿಯಾಗಿ
ಎಷ್ಟು ಸಮಯಕ್ಕೆ ಬಂದಿರಿ?

722
00:40:15,000 --> 00:40:17,583
ನಾನು ಸಂಜೆ 7:00ಕ್ಕೆ ಬಂದೆ, ಮತ್ತು…

723
00:40:19,416 --> 00:40:20,416
ನನ್ನನ್ನು ಕ್ಷಮಿಸಿ.

724
00:40:22,083 --> 00:40:24,750
-ಪರವಾಗಿಲ್ಲ.
-ನಾನು ಇವತ್ತು ಅವರನ್ನು ಭೇಟಿಯಾಗಬೇಕಿತ್ತು.

725
00:40:24,916 --> 00:40:26,333
ನನಗೆ ದುಃಖ ತಡೆಯೋಕಾಗುತ್ತಿಲ್ಲ.

726
00:40:28,375 --> 00:40:30,250
-ಓ, ಧನ್ಯವಾದ.
-ಹೇಳಿ. ಮುಂದೆ ಹೇಳಿ.

727
00:40:30,416 --> 00:40:31,875
ಧನ್ಯವಾದ.

728
00:40:32,291 --> 00:40:34,166
ಪರವಾಗಿಲ್ಲ. ತುಂಬಾ ಧನ್ಯವಾದ.

729
00:40:34,625 --> 00:40:38,166
ಕಿಟಕಿ, ಕಿಟಕಿ, ಕಿಟಕಿ.
ನಾನು ಕಿಟಕಿಯಾಗಿದ್ದರೆ ಎಲ್ಲಿ ಹೋಗುತ್ತಿದ್ದೆ?

730
00:40:40,083 --> 00:40:41,250
ತರಕಾರಿಗಳು.

731
00:40:41,458 --> 00:40:44,458
ಹಲೋ. ಒಂದು ಚಿಕ್ಕ ಕ್ಯಾರೆಟ್ ಅಷ್ಟೇ.

732
00:40:45,541 --> 00:40:49,291
ಓ. ಅಯ್ಯೋ. ಅಯ್ಯಯ್ಯೋ.

733
00:40:49,666 --> 00:40:53,416
ನನಗೆ ಒಬ್ಬ ಸಹೋದರ ಇದ್ದಾನೆ ಅಂತ ಹೇಳಿದರು,
ಅವಳಿ ಸಹೋದರನಂತೆ,

734
00:40:53,583 --> 00:40:55,500
ಅವನನ್ನು ಸೌತ್ ಆಫ್ರಿಕಾಗೆ ಕಳಿಸಿದರು ಅನಿಸುತ್ತೆ.

735
00:40:55,666 --> 00:40:59,041
ನೀವು ಎಂದಿಗೂ ಭೇಟಿಯಾಗದ ಸೌತ್ ಆಫ್ರಿಕಾದ ಅವಳಿ.
ಇದು ಅಮೋಘ.

736
00:40:59,541 --> 00:41:01,166
ಮತ್ತು ನೀವು ಯಾರು?

737
00:41:01,916 --> 00:41:04,875
ನಾನು ಎಲಿಯಟ್ ಮ್ಯಾಥ್ಯೂಸ್.
ನಾನು ಈ ವರದಿಯನ್ನು ಬರೆಯುತ್ತಿರುವುದು--

738
00:41:05,041 --> 00:41:06,458
ಬೇಕಾಗಿಲ್ಲ. ಆಚೆ ಹೋಗು.

739
00:41:07,708 --> 00:41:09,583
ಅಂದರೆ, ಅಸಲಿಗೆ, ಒಬ್ಬ ಪತ್ರಕರ್ತನಾಗಿ ನನಗೆ--

740
00:41:09,708 --> 00:41:13,166
ಖಂಡಿತವಾಗಲೂ ಯಾವುದೇ ಹಕ್ಕಿಲ್ಲ. ಹೋಗು ಆಚೆ.

741
00:41:13,500 --> 00:41:14,333
ಸರಿ.

742
00:41:14,458 --> 00:41:16,208
ಇಲ್ಲೇ ಇದ್ದು ಕದ್ದು ಆಲಿಸಬೇಡ.

743
00:41:16,375 --> 00:41:20,875
ನಾನು "ಅಧ್ಯಕ್ಷೀಯ ಕೋಣೆ"ಯಲ್ಲಿ ಇರುತ್ತೇನೆ,
ಅಲ್ಲಿನ ಐಶ್ವರ್ಯಗಳನ್ನು ಆನಂದಿಸುತ್ತಿರುತ್ತೇನೆ.

744
00:41:21,041 --> 00:41:22,208
ಲಿಲ್ಲಿ!

745
00:41:22,708 --> 00:41:24,333
ಲಿಲ್ಲಿ, ಸೆಬಾಸ್ಟಿಯನ್!

746
00:41:24,500 --> 00:41:25,833
ಕಾಪಾಡಿ!

747
00:41:28,166 --> 00:41:32,583
ಮಿ. ವಾನ್ ವ್ಯೊರೆನ್, ನಾನು ಲಿಡಿಯಾ ಹಾರ್‌ಬಾಟಲ್.
ನನ್ನ ಮಾತು ಕೇಳಿಸುತ್ತಿದೆಯಾ?

748
00:41:32,750 --> 00:41:34,375
ಹಾಂ. ಒಳ್ಳೆಯ ಸಂಪರ್ಕ ಇದೆ. ಧನ್ಯವಾದ.

749
00:41:34,541 --> 00:41:37,250
ಮಿ. ವಾನ್ ವ್ಯೂರೆನ್ ಮಿ. ಹಾರ್ಡಿಯ ಮಗ,

750
00:41:37,416 --> 00:41:41,833
ಮತ್ತು ಅವರು ವಾಸಿಸುವುದು ಸೌತ್ ಆಫ್ರಿಕಾದಲ್ಲಿ,
ಹಾಗಾಗಿ ನಮ್ಮೊಂದಿಗೆ ಫೋನ್ ಸಂಪರ್ಕದಲ್ಲಿದ್ದಾರೆ.

751
00:41:42,000 --> 00:41:47,250
ಈಗ, ಮಿ. ಹಾರ್ಡಿ ಅವರ ಉಯಿಲಿನ ಪ್ರತಿಯನ್ನು
ನನಗೆ ಎರಡು ತಿಂಗಳ ಹಿಂದೆ ಕಳಿಸಿದ್ದರು.

752
00:41:48,916 --> 00:41:52,416
ಆದರೆ ನಾನು ಇವತ್ತು ಈ ಉಯಿಲನ್ನು ಓದುವುದಿಲ್ಲ.

753
00:41:52,583 --> 00:41:53,750
ಅವರೊಂದು ಹೊಸ ಉಯಿಲನ್ನು ಬರೆದಿದ್ದಾರೆ.

754
00:41:54,083 --> 00:41:55,666
-ನನಗದು ಸಿಕ್ಕಿತು.
-ಶ್.

755
00:41:55,833 --> 00:41:58,083
ಇದನ್ನು ತಮ್ಮ ಸಾವಿಗೆ
ಮೂರು ದಿನಗಳ ಹಿಂದಷ್ಟೇ ಬರೆದಿದ್ದಾರೆ.

756
00:41:58,250 --> 00:42:02,291
ಖಂಡಿತ. ಯಾವಾಗಲೂ ಒಂದು
ಹೊಸ ಉಯಿಲು ಇದ್ದೇ ಇರುತ್ತದೆ.

757
00:42:02,750 --> 00:42:07,041
"ಇದು ಶ್ರೀ ಜಾರ್ಜ್ ಹಾರ್ಡಿಯವರ ಕೊನೆಯ ಉಯಿಲು
ಮತ್ತು ಒಡಂಬಡಿಕೆಯಾಗಿದೆ.

758
00:42:07,541 --> 00:42:10,041
ನೀವು ಏಳು ಮಂದಿಯನ್ನು
ನಾನು ಇಲ್ಲಿಗೆ ಕರೆಸಿರುವ ಕಾರಣ

759
00:42:10,208 --> 00:42:14,083
ಯಾಕೆಂದರೆ ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೆ
ನನಗೆ ಮುಗಿಯದ ಕೆಲಸಗಳಿವೆ.

760
00:42:14,250 --> 00:42:17,125
ನಾನು ನಿಮ್ಮಲ್ಲಿ ಕೆಲವರಿಗೆ ಅನ್ಯಾಯ ಮಾಡಿರಬಹುದು,

761
00:42:17,291 --> 00:42:20,416
ಮತ್ತು ನಿಮ್ಮಲ್ಲಿ ಕೆಲವರು
ನನಗೆ ಅನ್ಯಾಯ ಮಾಡಿದ್ದೀರಿ.

762
00:42:20,875 --> 00:42:24,083
ಈಗ ನಿಮ್ಮ ನಡುವೆ, ಇದೇ ಕೋಣೆಯಲ್ಲಿ,

763
00:42:24,250 --> 00:42:27,750
ಒಬ್ಬ ಮೂರ್ಖ, ಒಬ್ಬ ಕೆಟ್ಟ ಕುರುಬ,

764
00:42:27,916 --> 00:42:31,333
ಒಂದು ವಸಂತದ ಕುರಿಮರಿ, ಒಂದು ಚಳಿಗಾಲದ ಕುರಿಮರಿ,

765
00:42:31,500 --> 00:42:32,833
ಒಬ್ಬ ಬಲಿಪಶು,

766
00:42:34,291 --> 00:42:35,625
ಮತ್ತು ಇಬ್ಬರು ಕೊಲೆಗಾರರಿದ್ದಾರೆ."

767
00:42:35,791 --> 00:42:37,000
ಇಬ್ಬರು ಕೊಲೆಗಾರರಾ?

768
00:42:37,166 --> 00:42:38,375
ನನ್ನನ್ನು ಕೆಟ್ಟ ಕುರುಬ ಅಂದ.

769
00:42:38,541 --> 00:42:39,875
ಅದನ್ನು ನಾನು ಹೇಗೆ ಕಂಡು ಹಿಡಿಯುವುದು?

770
00:42:39,958 --> 00:42:41,250
ಕನಿಷ್ಠ ನಮಗೆ ಮೂರ್ಖ ಯಾರು
ಅಂತಲಾದರೂ ಗೊತ್ತಾಯಿತು.

771
00:42:41,416 --> 00:42:43,541
ನಾನು ಫ್ರೆಂಚ್ ಕುರಿಗಳನ್ನು ಸಾಕುತ್ತೇನೆ.
ಸರ್ವಶ್ರೇಷ್ಠವಾದ ತಳಿ ಅದು.

772
00:42:43,708 --> 00:42:45,250
ಇನ್ನೊಬ್ಬ ಬಲಿಪಶು ಅಂದರೆ ಯಾರು?

773
00:42:45,416 --> 00:42:46,750
ಅಂದರೆ ಮುಂದೆ ಸಾಯುವವರು ನಮ್ಮಲ್ಲೊಬ್ಬರು.

774
00:42:46,916 --> 00:42:48,458
ನಮ್ಮಲ್ಲೊಬ್ಬರು ಕೊಲೆಗಾರರಾಗಿರಬಹುದು.

775
00:42:48,583 --> 00:42:52,250
ನೀನು ಲಲ್ಲೆ ಹೊಡೆಯುವುದರ ಬದಲು
ಪ್ರಶ್ನೆ ಕೇಳಬಹುದಲ್ವಾ?

776
00:42:53,291 --> 00:42:54,666
ಇಬ್ಬರು ಕೊಲೆಗಾರರಾ?

777
00:42:54,833 --> 00:42:56,708
ಒಂದು ಚಳಿಗಾಲದ ಕುರಿಮರಿ.

778
00:42:59,791 --> 00:43:01,416
"ನಾನು ನಿಮಗೆ ಬಿಟ್ಟುಹೋಗುವುದು ಇದನ್ನು."

779
00:43:01,583 --> 00:43:02,708
ಹೇ! ಹೇ!

780
00:43:05,208 --> 00:43:07,583
"ನಾನು ನಿಮಗೆ ಬಿಟ್ಟುಹೋಗುವುದು ಇದನ್ನು.

781
00:43:08,333 --> 00:43:11,583
ನೀವು ನಿಜವಾಗಲೂ ಯಾರು
ಎಂದು ನನಗೆ ಅರಿವಾದದ್ದರ ಜ್ಞಾನ.

782
00:43:12,458 --> 00:43:15,750
ಮತ್ತು ನಿಮ್ಮಲ್ಲಿ ಹಲವರಿಗೆ ಸಿಗುವುದು ಅದೇ."

783
00:43:16,250 --> 00:43:20,041
ನಮಗೆ ಸಿಗುವುದು ಅದೇ ಅಂತ ಅಂದರೆ ಏನರ್ಥ?
ಮತ್ತೆ, ನನಗೆ ಇಲ್ಲೇನು ಕೆಲಸ?

784
00:43:20,208 --> 00:43:21,666
ಬಾಯಿ ಮುಚ್ಚಿಕೊಂಡು ಕುಳಿತುಕೋ, ಹ್ಯಾಮ್.

785
00:43:22,375 --> 00:43:23,416
ಆಗಲ್ಲ.

786
00:43:23,583 --> 00:43:27,166
ಇಲ್ಲ, ಉಯಿಲಿನಲ್ಲಿ ಬರೆದಿರುವ ಮುಂದಿನ ಸಾಲು ಅದೇ.
"ಬಾಯಿ ಮುಚ್ಚಿಕೊಂಡು ಕುಳಿತುಕೋ, ಹ್ಯಾಮ್."

787
00:43:28,208 --> 00:43:31,708
ಜಾರ್ಜ್ ನಿಮ್ಮನ್ನು
ತುಂಬಾ ಚೆನ್ನಾಗಿ ಬಲ್ಲ ಅಂತ ಕಾಣುತ್ತೆ.

788
00:43:32,333 --> 00:43:33,416
ಸ್ವಲ್ಪ ಮಾನ-ಮರ್ಯಾದೆ ಉಳಿಸಿಕೋ.

789
00:43:33,583 --> 00:43:34,875
-ಮುಚ್ಕೊಂಡಿರು.
-ನೀನು ಮುಚ್ಕೊಂಡಿರು.

790
00:43:35,041 --> 00:43:37,333
"ನನ್ನ ಮಗನಾದ ಪೀಟರ್ ವಾನ್ ವ್ಯೂರೆನ್‌ಗೆ,

791
00:43:37,500 --> 00:43:41,750
ಪ್ರಸ್ತುತ ಕೇಲೆಬ್ ಮೇರ್ರೋಗೆ
ಭೋಗ್ಯಕ್ಕೆ ಕೊಟ್ಟಿರುವ 300 ಎಕರೆಗಳು."

792
00:43:41,916 --> 00:43:43,333
ಓ, ಎಂಥಾ ಔದಾರ್ಯ.

793
00:43:43,500 --> 00:43:45,541
"ನನ್ನ ಮಗಳಾದ ರೆಬೆಕ್ಕಾ ಹ್ಯಾಂಪ್‌ಸ್ಟೆಡ್‌ಗೆ,

794
00:43:45,708 --> 00:43:49,500
ನಾನು ಮನೆ ಎಂದು ಕರೆಯುವ,
ಅದಕ್ಕೆ ಹೊಂದಿಕೊಂಡಿರುವ 300 ಎಕರೆಗಳು,

795
00:43:49,666 --> 00:43:54,958
ಇದರ ಜೊತೆಗೆ ನನ್ನ ಕ್ಯಾರವಾನ್, ನನ್ನ ಹೊಲ,
ಅದರಲ್ಲಿನ ವಸ್ತುಗಳು ಮತ್ತು ನನ್ನ ಕುರಿಗಳು."

796
00:43:55,125 --> 00:43:59,041
ಈಗ, ತಮ್ಮ ಹಿಂದಿನ ಉಯಿಲಿನಲ್ಲಿ, ಮಿ. ಹಾರ್ಡಿ
ತಮ್ಮ ಉಳಿದ ಆಸ್ತಿಗಳನ್ನು ದಾನವಾಗಿ

797
00:43:59,208 --> 00:44:02,083
ಬರೆದಿದ್ದರು, ಸೊಸೈಟಿ ಫಾರ್ ದ ಪ್ರೊಟೆಕ್ಷನ್
ಆಫ್ ಅನಿಮಲ್ಸ್ ಎಂಬ ಸಂಸ್ಥೆಗೆ.

798
00:44:02,833 --> 00:44:06,208
ಆದರೆ ಹೊಸ ಉಯಿಲಿನಲ್ಲಿ, ಈ ವಾಕ್ಯವೃಂದ ಹೀಗಿದೆ:

799
00:44:06,375 --> 00:44:09,083
"ನನ್ನ ಉಳಿದ ಎಲ್ಲಾ ಆಸ್ತಿಗಳನ್ನು ನನ್ನ ಮಗಳಾದ

800
00:44:09,208 --> 00:44:11,583
ರೆಬೆಕ್ಕಾ ಹ್ಯಾಂಪ್‌ಸ್ಟೆಡ್‌ಗೆ
ಘೋಷಿಸುತ್ತಿದ್ದೇನೆ."

801
00:44:11,750 --> 00:44:14,208
ಹಾಂ, ಅಷ್ಟೆಲ್ಲಾ ಖುಷಿ ಪಡಬೇಡ.
ಆತನ ಬಳಿ ಏನೂ ಇರಲಿಲ್ಲ.

802
00:44:14,375 --> 00:44:19,166
ಹಾಂ, ಅಸಲಿಗೆ ಒಂದು ಕಾರ್ಯನಿರ್ವಹಿಸದ
ಗೊಬ್ಬರವಾಹಕ ಇದೆ,

803
00:44:19,333 --> 00:44:22,166
ಹಿಂದೆ ಖರೀದಿಸಿದ್ದ ಮೂರು ರಸಗೊಬ್ಬರದ ಚೀಲಗಳಿವೆ…

804
00:44:22,333 --> 00:44:23,750
ಅದು ತುಂಬಾ ಪ್ರಯೋಜನಕಾರಿ ಆಗಬಹುದು.

805
00:44:23,916 --> 00:44:28,291
…ಮತ್ತು ಒಂದು ಹಣಕಾಸಿನ ಮಾರುಕಟ್ಟೆ ಖಾತೆ,
ಇದರ ಮೊತ್ತ ಸರಿಸುಮಾರು…

806
00:44:28,458 --> 00:44:29,708
ಮೂರು ಕೋಟಿ ಡಾಲರ್‌ಗಳು.

807
00:44:30,666 --> 00:44:32,125
ಮೂರು ಕೋಟಿ ಅಂದಳಾ?

808
00:44:32,291 --> 00:44:35,166
ಅಂದರೆ, ಈಗ ನಮಗೆ ಉದ್ದೇಶ ತಿಳಿಯಿತು.

809
00:44:35,958 --> 00:44:37,666
ಮೂರು ಕೋಟಿ? ಹೇಗೆ?

810
00:44:37,833 --> 00:44:40,791
ಎರಡು ವರ್ಷಗಳ ಹಿಂದೆ, ಓರ್ಫ್ ಎಂಬ
ಕುರಿಗಳ ಬಾಯಿಹುಣ್ಣಿನ ಕಾಯಿಲೆಗೆ

811
00:44:40,958 --> 00:44:44,250
ಜಾರ್ಜ್ ಹಾರ್ಡಿ ಔಷಧ ಕಂಡುಹಿಡಿದರು.

812
00:44:44,416 --> 00:44:46,166
-ಓರ್ಫ್?
-ಓರ್ಫ್.

813
00:44:46,333 --> 00:44:49,125
ಅಂದರೆ ನೀವು ಹೇಳುತ್ತಿರುವುದು, ಅವನು ಯಾವಾಗಲೂ
ಬೆರೆಸುತ್ತಿದ್ದ ಆ ನೀಲಿ ದ್ರವ, ಅದು ಔಷಧಿ ಅಂತಲೇ?

814
00:44:49,250 --> 00:44:53,250
ಅದರ ಸ್ವಾಮ್ಯದ ಸನದನ್ನು ಆತ ಒಂದು
ಬೃಹತ್ ವ್ಯಾವಸಾಯಿಕ ಸಂಸ್ಥೆಗೆ ಮಾರಿದ ಮೊತ್ತ--

815
00:44:53,375 --> 00:44:54,666
ಮೂರು ಕೋಟಿ.

816
00:44:55,791 --> 00:44:56,791
ಓರ್ಫ್‌ಗಾಗಿ.

817
00:45:08,958 --> 00:45:10,583
-ಅಲ್ಲಿ ಯಾರೋ ಇದ್ದಾರೆ.
-ಟಿಮ್.

818
00:45:10,750 --> 00:45:12,958
ಹೋಗಿ ಅವರನ್ನು ಹಿಡಿ. ಹೋಗು! ಹೋಗು.

819
00:45:26,041 --> 00:45:27,958
ಹೇ-ಹೇ! ಹೇ!

820
00:45:38,291 --> 00:45:40,083
ನನಗೇನಾಗಿಲ್ಲ. ನನಗೇನಾಗಿಲ್ಲ.

821
00:45:41,083 --> 00:45:41,916
ಓ, ಮತ್ತೆ ಬಂತು!

822
00:46:02,291 --> 00:46:03,750
ಅದನ್ನು ಆಚೆ ಹಾಕಿ!

823
00:46:03,916 --> 00:46:05,000
ಹೊರಗೆ!

824
00:46:09,458 --> 00:46:13,041
ಲಿಲ್ಲಿ, ನನಗೆ ಕಿಟಕಿ ಕಾಣಿಸಿತು.

825
00:46:14,125 --> 00:46:15,916
ತಗೋ. ಜಾಣ ಮರಿ.

826
00:46:16,083 --> 00:46:17,333
ತಿನ್ನು.

827
00:46:20,625 --> 00:46:23,916
ಈ ಕುರಿಗಳಿಗೆ ಕುರುಬನಿಲ್ಲದಿದ್ದರೆ
ದಿಕ್ಕಿಲ್ಲದೆ ಓಡುತ್ತಿರುತ್ತವೆ, ಸರಿನಾ?

828
00:46:24,166 --> 00:46:25,166
ಅದರಲ್ಲೂ ಆ ದೊಡ್ಡದು.

829
00:46:26,625 --> 00:46:28,666
ಜಾರ್ಜ್ ಅದನ್ನು ಒಂದು ಜಾತ್ರೆಯಲ್ಲಿ ಖರೀದಿಸಿದ.

830
00:46:29,000 --> 00:46:30,583
ಅದೊಳ್ಳೆ ಕಾಡುಪ್ರಾಣಿಯಂಥದ್ದು.

831
00:46:35,708 --> 00:46:39,250
ಇರು, ಟಿಮ್! ನೀನೊಂದು ಹೇಳಿಕೆ ಕೊಡುತ್ತೀಯಾ?

832
00:46:39,416 --> 00:46:42,041
ಇಲ್ಲ. ಇಲ್ಲ. ಯಾವುದೇ ಹೇಳಿಕೆ ಇಲ್ಲ.
ನನ್ನನ್ನು ಆಫೀಸರ್ ಅಂತ ಕರೆ.

833
00:46:42,208 --> 00:46:44,166
ಏನಾದರೂ ಸುಳಿವುಗಳಿವೆಯಾ?
ನಿಮಗೆ ಸುಳಿವುಗಳು ಸಿಕ್ಕಿವೆಯಾ?

834
00:46:44,333 --> 00:46:46,291
ಹೌದು. ಹಾಂ, ಸಿಕ್ಕಾಪಟ್ಟೆ ಸುಳಿವುಗಳು ಸಿಕ್ಕಿವೆ,

835
00:46:46,375 --> 00:46:48,333
ನಾನಿದನ್ನು ತುಂಬಾ ಚೆನ್ನಾಗಿ
ನಿರ್ವಹಿಸುತ್ತಿದ್ದೇನೆ.

836
00:46:49,666 --> 00:46:53,791
ನೋಡಿ. ನನಗೊಂದು ಕಥೆ ಬೇಕು.
ನಿಮಗೊಂದು ಬಂಧನ ಬೇಕು.

837
00:46:54,583 --> 00:46:57,958
ಒಂದು ಸಲವಾದರೂ ಆ ಮರ್ಯಾದೆಗೆ ಬೆಲೆ ಕೊಡಬಾರದಾ?

838
00:46:58,125 --> 00:47:00,791
ಹೇ. ಜನರು ನನಗೆ ಮರ್ಯಾದೆ ಕೊಡುತ್ತಾರೆ.

839
00:47:02,500 --> 00:47:05,708
ನೀವು ಇದನ್ನು ಪರಿಹರಿಸಿದರೆ,
ಒಬ್ಬ ಧೀರನಾಗುತ್ತೀರಿ.

840
00:47:09,000 --> 00:47:10,750
ನಾವು ಜೊತೆಯಲ್ಲಿ ಕೆಲಸ ಮಾಡಬಹುದು.

841
00:47:12,291 --> 00:47:13,291
ನಾನು ಸಹಾಯ ಮಾಡಬಲ್ಲೆ.

842
00:47:13,458 --> 00:47:16,125
ಕಳೆದ ರಾತ್ರಿ ನನ್ನ ಕಾರನ್ನು
ಟೋಯಿಂಗ್ ಮಾಡುತ್ತಿದ್ದಾಗ,

843
00:47:16,291 --> 00:47:19,250
ರಾತ್ರಿ ಸುಮಾರು 9:00ಕ್ಕೆ ಜಾರ್ಜ್‌ನ ಹೊಲದಲ್ಲಿ
ಒಂದು ಟಾರ್ಚ್ ಬೆಳಕು ಕಂಡೆ.

844
00:47:20,208 --> 00:47:22,000
ಸರಿ. ಸರಿ.

845
00:47:22,541 --> 00:47:23,958
ಸರಿ ಹೊಂದುತ್ತೆ.

846
00:47:24,250 --> 00:47:27,708
ಜಾರ್ಜ್ ಸತ್ತಿದ್ದು ರಾತ್ರಿ 8:00ರಿಂದ 11:00ರ
ಒಳಗೆ ಅಂತ ಶವಪರೀಕ್ಷಕರು ಹೇಳಿದರು.

847
00:47:30,541 --> 00:47:33,833
ನೀನು ಶವದ ಚಿತ್ರಗಳನ್ನು ತೆಗೆದೆ, ಅಲ್ವಾ?
ಯಾಕೆಂದರೆ ನಾನು ಅದನ್ನು ನಿಜವಾಗಲೂ ಮಾಡಬೇಕಿತ್ತು.

848
00:47:34,000 --> 00:47:38,083
ನಾನು ತುಂಬಾ ಚಿತ್ರಗಳನ್ನು ತೆಗೆದೆ.
ಅವುಗಳೆಲ್ಲವನ್ನೂ ನಿಮಗೆ ಕಳಿಸುತ್ತೇನೆ.

849
00:47:39,875 --> 00:47:41,083
ಏನಂತೀರಿ…

850
00:47:41,666 --> 00:47:43,333
ಆಫೀಸರ್ ಧೀರ?

851
00:47:48,791 --> 00:47:52,416
ಆಮೇಲೆ ಹೇಳಿದಳು, ಒಬ್ಬ ಮೂರ್ಖ,
ಒಬ್ಬ ಬಲಿಪಶು, ಇಬ್ಬರು ಕೊಲೆಗಾರರು--

852
00:47:52,583 --> 00:47:54,000
ನನಗೆ ಈಗಲೂ ಅದು ಕೆಲಸದವಳೇ ಅನಿಸುತ್ತೆ.

853
00:47:54,166 --> 00:47:55,791
ಯಾವುದೇ ಕೆಲಸದವಳು ಇಲ್ಲ!

854
00:47:55,958 --> 00:48:00,083
ಅದೊಂದು ಕಥೆ, ಮತ್ತು ಆ ಕಥೆಯಲ್ಲೂ,
ಅದು ಕೆಲಸದವಳಲ್ಲ. ಕೆಲಸದವರ ಮಾತು ಸಾಕು!

855
00:48:00,833 --> 00:48:02,000
ಕುರಿಗಳು.

856
00:48:02,166 --> 00:48:05,791
ಕೇಲೆಬ್ ನಮ್ಮ ಹೊಸ ಕುರುಬನಾಗುತ್ತಾನೆ,
ಅಲ್ವಾ, ಲಿಲ್ಲಿ?

857
00:48:05,958 --> 00:48:09,708
ಖಂಡಿತ. ಈ ರಹಸ್ಯ ಬಗೆಹರಿಯುವವರೆಗೂ
ನಾವು ಕಾಯಬೇಕಾಗುತ್ತದೆ.

858
00:48:09,875 --> 00:48:10,875
ನನಗೊಂದು ಪ್ರಶ್ನೆ ಇದೆ.

859
00:48:11,041 --> 00:48:12,833
ನೀನಿನ್ನೂ ಈ ರಹಸ್ಯವನ್ನು
ಯಾಕೆ ಭೇದಿಸಿಲ್ಲ, ಲಿಲ್ಲಿ?

860
00:48:13,000 --> 00:48:15,375
ರಾತ್ರಿಯ ಕಥೆಗಳನ್ನು ಕೇಳಿ
ನೀನು ಥಟ್ಟನೆ ಪರಿಹರಿಸುತ್ತಿದ್ದೆ.

861
00:48:15,541 --> 00:48:19,250
ಗೊತ್ತು, ಆದರೆ ನೈಜ ಜಗತ್ತು
ಪುಸ್ತಕಗಳಲ್ಲಿರುವುದಕ್ಕಿಂತ

862
00:48:19,416 --> 00:48:21,958
ಸ್ವಲ್ಪ… ಜಟಿಲವಾಗಿದೆ.

863
00:48:22,625 --> 00:48:24,000
ಪುಸ್ತಕ.

864
00:48:24,666 --> 00:48:26,500
ಅದೇ ಉತ್ತರ ಇರಬಹುದು.

865
00:48:26,666 --> 00:48:29,166
ನಾನು ಜಾರ್ಜ್‌ನ ಬಂಡಿಯ ಒಳಗೆ ಹೊಕ್ಕು…

866
00:48:29,333 --> 00:48:30,416
ನೋಡಬೇಕು.

867
00:48:32,541 --> 00:48:34,291
ಅದು ರೆಬೆಕ್ಕಾನಾ?

868
00:48:36,083 --> 00:48:38,000
ಏನನ್ನು ಹುಡುಕುತ್ತಿದ್ದಾಳೆ?

869
00:49:04,583 --> 00:49:06,291
ನಿನ್ನ ಹೆಸರೇನು?

870
00:49:06,791 --> 00:49:08,708
ಅವಳೇನಾ ಜಾರ್ಜ್‌ನ ಮಗಳು?

871
00:49:08,875 --> 00:49:11,916
ಅವಳ ವಾಸನೆ ಅವನಂತೆಯೇ ಇದೆ.
ಆದರೆ ನೋಡಲು ಅವಳು ಅವನಂತಿಲ್ಲ.

872
00:49:12,083 --> 00:49:13,916
ಅವಳು ಖಂಡಿತ ಚಳಿಗಾಲದಲ್ಲೇ ಹುಟ್ಟಿರಬೇಕು.

873
00:49:14,083 --> 00:49:16,250
ಅದಕ್ಕೇ ಜಾರ್ಜ್ ಅವಳನ್ನು
ಜೊತೆಯಲ್ಲಿ ಇರಿಸಿಕೊಂಡಿರಲಿಲ್ಲ.

874
00:49:16,416 --> 00:49:19,833
ಖಂಡಿತ. ಚಳಿಗಾಲದ ಕುರಿಮರಿ.
ಅದರಿಂದಲೇ ಸಾಬೀತಾಯಿತು.

875
00:49:20,000 --> 00:49:21,083
ಸರಿ.

876
00:49:21,250 --> 00:49:22,375
ರೆಬೆಕ್ಕಾ ಮಾಡಿದಳು!

877
00:49:22,541 --> 00:49:23,833
ಕೊಲೆಗಾತಿ!

878
00:49:24,000 --> 00:49:26,041
ನಮಗೆ ಅದು ಗೊತ್ತಿಲ್ಲ!

879
00:49:26,208 --> 00:49:28,250
-ನನಗೆ ಗೊತ್ತಿತ್ತು!
-ಅದನ್ನೇ ನಾನು ಹೇಳಲು ನೋಡುತ್ತಿರುವುದು.

880
00:49:28,416 --> 00:49:30,041
ನನಗೆ ತಕ್ಷಣವೇ ಅನಿಸಿತು,
"ರೆಬೆಕ್ಕಾ, ಇವಳಲ್ಲಿ ಏನೋ ಸರಿ ಇಲ್ಲ" ಅಂತ.

881
00:49:30,208 --> 00:49:31,541
ನಾನು ಅದನ್ನು ಮೊದಲಿನಿಂದಲೂ ಹೇಳುತ್ತಿದ್ದೇನೆ.

882
00:49:33,083 --> 00:49:36,541
ಸೆಬಾಸ್ಟಿಯನ್?

883
00:49:36,708 --> 00:49:38,333
ಲಿಲ್ಲಿ? ಜಾರ್ಜ್‌ನ ಬಂಡಿಯ ಬಗ್ಗೆ
ನೀನು ಏನೋ ಹೇಳುತ್ತಿದ್ದೆ?

884
00:49:39,416 --> 00:49:40,416
ಮತ್ತು ಪುಸ್ತಕದ ಬಗ್ಗೆ?

885
00:49:40,541 --> 00:49:44,000
ಜಾರ್ಜ್ ನಮಗೆ ಓದಿ ಹೇಳಿದ ಕೊನೆಯ ಪುಸ್ತಕದಲ್ಲಿ
ಶಂಕಿತರನ್ನು ಹೇಗೆ ಖಾತರಿಪಡಿಸುವುದು ಅಂತ ಇತ್ತು.

886
00:49:44,125 --> 00:49:47,041
ನಾನು ಆ ಪುಸ್ತಕವನ್ನು ಹುಡುಕಿ
ಪೊಲೀಸಪ್ಪನಿಗೆ ಕೊಡಬೇಕು.

887
00:49:47,208 --> 00:49:49,875
ನಮಗೆ ಅದೃಷ್ಟ ಇದ್ದರೆ, ಅವನು ಅದನ್ನು ಓದಿ,
ಏನನ್ನಾದರೂ ಕಂಡುಹಿಡಿಯಬಹುದು.

888
00:49:50,458 --> 00:49:52,583
-ನಾನು ತರುವೆ! ನಾನು ತರುವೆ! ನಾನು ತರುವೆ!
-ಇಲ್ಲ, ಇಲ್ಲ. ಝೋರಾ!

889
00:49:52,750 --> 00:49:54,708
ನಾನು ಪತ್ತೇದಾರಿಯಾಗಬೇಕು! ನಾನು ತರುವೆ!

890
00:49:54,875 --> 00:49:56,625
ಆಯ್ತು, ಸರಿ. ಮಾರ್ಗ, ಉದ್ದೇಶ,
ಮತ್ತು ಅವಕಾಶದ ಬಗ್ಗೆ ಇರುವ

891
00:49:56,750 --> 00:49:58,541
ಅಧ್ಯಾಯವನ್ನು ಜಾರ್ಜ್ ನಮಗೆ ಓದಿ ಹೇಳಲು

892
00:49:58,708 --> 00:50:00,958
ಶುರು ಮಾಡಿದ್ದ ಪುಸ್ತಕವನ್ನು
ನನಗೆ ಹುಡುಕಿ ಕೊಡು ಸಾಕು.

893
00:50:01,125 --> 00:50:02,958
ನನಗೊಂದು ಪ್ರಶ್ನೆ ಇದೆ. ಅಧ್ಯಾಯ ಅಂದರೆ ಏನು?

894
00:50:03,125 --> 00:50:05,666
ಅದು ಮುಖ್ಯವಲ್ಲ. ಮುಖಪುಟದ ಮೇಲೆ ರೈಲಿನ ಚಿತ್ರ
ಇರುವ ಪುಸ್ತಕವನ್ನು ಹುಡುಕು.

895
00:50:05,833 --> 00:50:08,916
-ನನಗೊಂದು ಪ್ರಶ್ನೆ ಇದೆ. ರೈಲು ಅಂದರೆ ಏನು?
-ಅದು ಬಂಡಿಗಳ ಒಂದು ಉದ್ದನೆಯ, ಬಡಕಲು ಸಾಲು.

896
00:50:09,083 --> 00:50:09,958
ನನಗೊಂದು ಪ್ರಶ್ನೆ ಇದೆ.

897
00:50:10,083 --> 00:50:11,791
ಒಂದು ನಿಮಿಷ ಇರು.
ವುಲ್-ಐಯ್ಸ್, ಏನು ಮಾಡುತ್ತಿದ್ದೀಯ?

898
00:50:11,958 --> 00:50:15,833
ಎಲ್ಲಾ ಹಿಂದಕ್ಕೆ ಹೋಗಿ. ನನ್ನ ಸೂಕ್ಷ್ಮ ವಾಸನಾ
ಗ್ರಹಿಕೆಯ ಶಕ್ತಿಯಿಂದ ಈ ಪುಸ್ತಕವನ್ನು ಹುಡುಕುವೆ.

899
00:50:17,833 --> 00:50:20,833
ಓ, ಅಲ್ಲಿ ಕೆಲವು ಟೊಮೇಟೊಗಳಿವೆ.
ನೀವು ತಿನ್ನಬಹುದು.

900
00:50:22,041 --> 00:50:24,291
ಬಾ, ವುಲ್-ಐಯ್ಸ್.
ಎಲ್ಲರೂ ನಿನ್ನನ್ನೇ ನಂಬಿದ್ದಾರೆ.

901
00:50:24,458 --> 00:50:25,708
ಇಲ್ಲ, ನಾವೇನಿಲ್ಲ.

902
00:50:25,875 --> 00:50:28,541
ಜಾರ್ಜ್ ಮುಟ್ಟಿದ ಕಡೆಯ ಪುಸ್ತಕ ಅಲ್ವಾ ಅದು?

903
00:50:28,708 --> 00:50:29,958
ಹೌದಾ--? ಇಲ್ಲ, ಅದು ಕ್ಯಾರೆಟ್.

904
00:50:30,125 --> 00:50:32,458
-ಅಯ್ಯಬ್ಬಾ.
-ಅಲ್ಲಿಗೆ ಆಮೇಲೆ ಬರೋಣ.

905
00:50:36,833 --> 00:50:39,125
ಇದನ್ನೇನಾ ನೀವು ಹುಡುಕುತ್ತಿದ್ದದ್ದು?

906
00:50:39,291 --> 00:50:40,291
ಅಲ್ಲ!

907
00:50:40,458 --> 00:50:42,875
ಓ. ಮತ್ತೆ ಇದು?

908
00:50:43,000 --> 00:50:45,583
ಇದೇ! ವುಲ್-ಐಯ್ಸ್, ನೀನು ಅದನ್ನು ಹುಡುಕಿದೆ!

909
00:50:45,750 --> 00:50:47,000
ಖಂಡಿತ ಹುಡುಕಿದೆ.

910
00:50:47,166 --> 00:50:48,750
ಲಿಲ್ಲಿ ತಾನೆ ನೀನು, ಹೌದಾ?

911
00:50:48,916 --> 00:50:51,500
ಎಷ್ಟೇ ಆದರೂ ನಾನು ಒಬ್ಬ ಕುರಿ ಪತ್ತೇದಾರಿ.

912
00:51:38,125 --> 00:51:40,166
ಇಲ್ಲಿ ಚೆನ್ನಾಗಿದೆ.

913
00:51:40,750 --> 00:51:42,541
ಆದರೆ ಸ್ವಲ್ಪ ಒಂಟಿತನ ಕಾಡುತ್ತೆ.

914
00:51:46,041 --> 00:51:50,333
ಓ, ನಾನು ಪೊಲೀಸಪ್ಪನಿಗೆ ಅಪರಾಧವನ್ನು ಬಗೆಹರಿಸಲು
ಒಂದು ಪುಸ್ತಕವನ್ನು ಕೊಟ್ಟು ಬಂದೆ.

915
00:51:55,583 --> 00:51:57,208
ಜಾತ್ರೆ ಎಂದರೇನು?

916
00:51:58,125 --> 00:52:00,708
ಅದು ಏನಿಲ್ಲ. ನಿನ್ನ ಹಿಂಡಿನ ಬಳಿ ವಾಪಸ್ ಹೋಗು.

917
00:52:01,375 --> 00:52:02,958
ನಮ್ಮ ಹಿಂಡು ಅದು.

918
00:52:08,291 --> 00:52:09,750
ಅದು ಸಂಗೀತ.

919
00:52:10,500 --> 00:52:13,041
ಜಾತ್ರೆಯೆಂದರೆ ಸಂಗೀತ.

920
00:52:14,041 --> 00:52:15,250
ಮತ್ತು ಆಟಗಳು.

921
00:52:16,666 --> 00:52:21,416
ಪ್ರತಿದಿನ ಮಕ್ಕಳು ಬಂದು ನನ್ನನ್ನು ಮುಟ್ಟುತ್ತಾ,
ನನಗೆ ತಿನ್ನಿಸುತ್ತಿದ್ದರು.

922
00:52:21,916 --> 00:52:23,833
ನನಗದು ಇಷ್ಟವಾಗುತ್ತಿತ್ತು.

923
00:52:24,083 --> 00:52:26,416
ನಾನು ತುಂಬಾ ದೊಡ್ಡದಾಗಿ ಬೆಳೆಯುವವರೆಗೂ.

924
00:52:27,541 --> 00:52:30,250
ಆಮೇಲೆ ರಾತ್ರಿಯಾದಾಗ,

925
00:52:30,416 --> 00:52:34,125
ಜಾತ್ರೆಯಲ್ಲಿನ ಜನರು ಬಂದು
ನನ್ನನ್ನು ಒಂದು ವೃತ್ತದೊಳಗೆ ಕಳಿಸುತ್ತಿದ್ದರು.

926
00:52:35,666 --> 00:52:39,416
ಮತ್ತು ಆ ವೃತ್ತದ ಒಳಗಡೆ
ಒಂದು ನಾಯಿ ಇರುತ್ತಿತ್ತು.

927
00:52:41,541 --> 00:52:43,541
ನನ್ನಿಂದ ಕಾಳಗ ಮಾಡಿಸುತ್ತಿದ್ದರು.

928
00:52:46,125 --> 00:52:48,541
ನನ್ನ ರಕ್ತ ಸುರಿಯುವವರೆಗೂ ಕಾಳಗ.

929
00:52:50,541 --> 00:52:52,416
ಆಮೇಲೆ ಒಂದು ರಾತ್ರಿ…

930
00:52:53,416 --> 00:52:54,833
ಅವನಿಗೆ ನಾನು ಸಿಕ್ಕಿದೆ.

931
00:53:07,625 --> 00:53:09,458
ಅವರಿಗೆ ಹಣ ಕೊಟ್ಟು…

932
00:53:10,291 --> 00:53:11,625
ನನ್ನನ್ನು ಎತ್ತಿಕೊಂಡು ಹೋದ.

933
00:53:14,250 --> 00:53:18,083
ಜಾತ್ರೆ ಅಂದರೆ ಅದು.

934
00:53:21,458 --> 00:53:24,791
ಆದರೆ ನೀನು ಅಂಥ ಕೆಟ್ಟ ಜಾಗದಲ್ಲಿ
ಹೇಗೆ ಸಿಲುಕಿದ್ದೆ?

935
00:53:24,958 --> 00:53:26,833
ನಿನ್ನ ಹಿಂಡಿನ ಜೊತೆ ಯಾಕೆ ನೀನಿರಲಿಲ್ಲ?

936
00:53:27,625 --> 00:53:29,833
ಮಹಾನ್ ಕುರಿ ಪತ್ತೇದಾರಿ ಲಿಲ್ಲಿ ಇಷ್ಟೊತ್ತಿಗಾಗಲೇ

937
00:53:29,958 --> 00:53:31,791
ಅದನ್ನು ಕಂಡುಹಿಡಿದಿರುತ್ತಾಳೆ
ಅಂತ ಅಂದುಕೊಂಡಿದ್ದೆ.

938
00:53:34,083 --> 00:53:35,666
ಅಂದರೆ ನೀನೊಬ್ಬ ಚಳಿಗಾಲದ--

939
00:53:35,791 --> 00:53:40,208
ಇಷ್ಟರಲ್ಲೇ ಯಾವಾಗಲಾದರೂ,
ಚಳಿಗಾಲದ ಕುರಿಮರಿಗೆ ಹೊರಡಬೇಕು ಅನಿಸುತ್ತದೆ.

940
00:53:57,291 --> 00:53:59,583
ಇಲ್ಲಿದ್ದಾನೆ! ಹಾಂ!

941
00:54:01,500 --> 00:54:03,666
ಓ, ನಿನಗೆ ಹಸಿವಾಗಿರಬೇಕು, ಟಿಮ್.

942
00:54:03,833 --> 00:54:05,125
ಹೌದಾ?

943
00:54:06,958 --> 00:54:08,125
ಹಲೋ?

944
00:54:08,875 --> 00:54:14,166
ಪ್ರತಿ ಸಲ ಈ ಪ್ರಕರಣದಲ್ಲಿ
ಏನಾದರೂ ಆಸಕ್ತಿಕರವಾದದ್ದು ನಡೆದಾಗ,

945
00:54:15,166 --> 00:54:16,625
ಅವು ಅಲ್ಲಿ ಕಾಣಿಸಿಕೊಳ್ಳುತ್ತವೆ.

946
00:54:22,708 --> 00:54:24,250
ನಿನಗೆ ತಲೆ ಕೆಟ್ಟಿದೆ.

947
00:54:24,750 --> 00:54:27,416
ನಿನಗೆ ತಲೆ ಕೆಟ್ಟಿದೆ,
ಮತ್ತು ನೀನು ಏನನ್ನೂ ಮಾಡಿಲ್ಲ! ಟಿಮ್!

948
00:54:27,583 --> 00:54:31,250
ಏನೂ ಇಲ್ಲ ಅನ್ನೋಕಾಗಲ್ಲ.

949
00:54:32,333 --> 00:54:35,750
"ಜಾರ್ಜ್‌ನನ್ನು ಕೊಂದಿದ್ದು ಯಾರು?"

950
00:54:35,916 --> 00:54:37,791
ಉಯಿಲಿನಲ್ಲಿ ಐವರು ಶಂಕಿತರ ಹೆಸರಿದೆ.

951
00:54:38,041 --> 00:54:41,541
ಜಾರ್ಜ್‌ನನ್ನು ಕೊಂದವರಿಗೆ
ಮೂರು ವಸ್ತುಗಳು ಬೇಕಾಗಿದ್ದವು:

952
00:54:41,708 --> 00:54:45,750
ಮಾರ್ಗ, ಉದ್ದೇಶ, ಅವಕಾಶ.

953
00:54:46,000 --> 00:54:48,416
ಅದು ಫಲಿಸಿತು! ಅವನು ಪುಸ್ತಕ ಓದಿದ್ದಾನೆ!

954
00:54:48,583 --> 00:54:51,000
ಇವುಗಳನ್ನು ಒಂದೊಂದಾಗಿ ಪರಿಶೀಲಿಸೋಣ, ಸರಿನಾ?

955
00:54:51,166 --> 00:54:54,541
ಮಾರ್ಗ: ಸ್ಥೌನೇಯ ಮರದ
ಹಣ್ಣುಗಳಲ್ಲಿರುವ ಟ್ಯಾಕ್ಸಿನ್.

956
00:54:54,708 --> 00:54:57,458
ಚರ್ಚ್ ಸುತ್ತಲಿನ ಜಮೀನಿನಲ್ಲಿ
ಎಲ್ಲೆಡೆ ಸ್ಥೌನೇಯ ಮರಗಳಿವೆ.

957
00:54:57,625 --> 00:54:59,750
ಎಲ್ಲರಿಗೂ ಮಾರ್ಗ ಲಭ್ಯವಿತ್ತು.

958
00:54:59,916 --> 00:55:02,458
ಉದ್ದೇಶ: ಜಾರ್ಜ್‌ನನ್ನು ಯಾಕೆ ಕೊಲ್ಲುವುದು?

959
00:55:02,625 --> 00:55:04,458
ರೆಬೆಕ್ಕಾಗೆ ಅತ್ಯಂತ ಸ್ಪಷ್ಟವಾದ ಉದ್ದೇಶವಿದೆ.

960
00:55:04,625 --> 00:55:07,625
ಆದರೆ ಬೇರೆ ಯಾರಿಗೇ ಆದರೂ ಕಾರಣ ಇರಬಹುದು.
ಅವರು ಏನನ್ನು ಮುಚ್ಚಿಡುತ್ತಿದ್ದಾರೆ?

961
00:55:08,125 --> 00:55:11,708
ಅವಕಾಶ: ಇವರಲ್ಲಿ ಯಾರ ಬಳಿಯಾದರೂ
ನಿರ್ದೋಷಿ ಎನಿಸಲು ಕಾರಣವಿದೆಯಾ?

962
00:55:11,875 --> 00:55:15,041
ಮಾರ್ಗ, ಉದ್ದೇಶ, ಅವಕಾಶ.

963
00:55:15,208 --> 00:55:20,000
ಈ ಮೂರೂ ಇರುವ ವ್ಯಕ್ತಿಯನ್ನು ಹಿಡಿದರೆ
ಡೆನ್‌ಬ್ರೂಕ್ ಪಾಯ್ಸನರ್‌ನನ್ನು ಹಿಡಿಯಬಹುದು.

964
00:55:22,750 --> 00:55:25,833
ಟಿಮ್. ಇದು ನಿಜವಾಗಲೂ ತುಂಬಾ ಅದ್ಭುತ.

965
00:55:26,000 --> 00:55:28,666
ಹಾಂ, ಅದು, ಅದು ಹೇಗೋ…

966
00:55:29,958 --> 00:55:31,375
ನೆನ್ನೆ ರಾತ್ರಿ ನನಗೆ ಹೊಳೆಯಿತು.

967
00:55:32,791 --> 00:55:36,291
ಸರಿ. ಶುರು ಮಾಡೋಣ.

968
00:55:36,458 --> 00:55:37,791
ಹ್ಯಾಮ್.

969
00:55:37,958 --> 00:55:40,333
ಜಾರ್ಜ್‌ನ ಉಯಿಲಿನಿಂದ ಯಾರು ನೀನು?

970
00:55:40,833 --> 00:55:42,541
ಬಹುಶಃ ಕೊಲೆಗಾರನಿರಬಹುದು.

971
00:55:43,625 --> 00:55:46,250
ಅವನು ಸಸ್ಯಾಹಾರಿಯಾಗಿದ್ದ.

972
00:55:46,583 --> 00:55:50,166
ಅದು ಒಬ್ಬ ಮಹಿಳೆಯಾಗಿದ್ದರೆ ಕ್ಷಮಿಸಬಹುದಿತ್ತು.
ಆದರೆ ಒಬ್ಬ ಗಂಡಸಾಗಿ?

973
00:55:50,625 --> 00:55:52,416
ಅಸಹ್ಯ.

974
00:55:52,583 --> 00:55:53,708
ಬೆಥ್.

975
00:55:54,083 --> 00:55:57,250
ಜಾರ್ಜ್ ರೆಬೆಕ್ಕಾಗೆ ಬರೆದ ಪತ್ರ.
ನೀನು ಯಾಕೆ ಇಟ್ಟುಕೊಂಡಿದ್ದೆ?

976
00:55:57,541 --> 00:56:01,833
ಬಹುಶಃ ಇತಿಹಾಸದಲ್ಲೇ ಮೊದಲ ಬಾರಿಗೆ
ಅಂಚೆ ಇಲಾಖೆ ತಪ್ಪು ಮಾಡಿರಬಹುದೇನೋ.

977
00:56:02,000 --> 00:56:04,791
ಮತ್ತು ಜಾರ್ಜ್ ಸಾಯುವ ಮುನ್ನಾ ದಿನ,

978
00:56:04,958 --> 00:56:07,541
ನೀನು "ಅವನನ್ನು ಕೊಂದುಹಾಕುವೆ"
ಅಂತ ನನಗೆ ಹೇಳಿದೆ.

979
00:56:07,708 --> 00:56:10,583
ನಾನು ಕೊಲೆಗಾತಿ ಅಲ್ಲ. ನಾನು ಬಲಿಪಶು.
ಅಷ್ಟೇ ನಾನು ಹೇಳುವುದು.

980
00:56:10,750 --> 00:56:12,083
ನನ್ನ ಹಕ್ಕುಗಳನ್ನು ತಿಳಿದಿದ್ದೇನೆ!

981
00:56:12,250 --> 00:56:13,416
ಕೇಲೆಬ್.

982
00:56:13,583 --> 00:56:15,208
ಜಾರ್ಜ್ ನಿನಗೆ ಸಿಕ್ಕಿದ ಬೆಳಿಗ್ಗೆ,

983
00:56:15,333 --> 00:56:17,541
ನೀನು ಆತನಿಗೆ ಕೆಲವು ಕಾಗದಗಳನ್ನು
ತಂದುಕೊಡುತ್ತಿದ್ದೆ ಅಂತ ಹೇಳಿದ್ದೆ.

984
00:56:17,708 --> 00:56:19,500
ಹಾಂ, ಆತ ನನ್ನ ಭೋಗ್ಯವನ್ನು ರದ್ದುಗೊಳಿಸಿದ.

985
00:56:19,666 --> 00:56:22,500
ಹಾಗಾಗಿ ಅದನ್ನು ಮರುಪರಿಶೀಲಿಸಲು
ಅವನಿಗೊಂದು ಪ್ರಸ್ತಾವನೆಯನ್ನು ತರುತ್ತಿದ್ದೆ.

986
00:56:22,666 --> 00:56:23,958
ಎಲ್ಲಾ ವ್ಯರ್ಥವಾಯಿತು.

987
00:56:25,041 --> 00:56:29,333
ತಡಿ. ಜಾರ್ಜ್ ನಿನ್ನ ಭೋಗ್ಯವನ್ನು
ರದ್ದುಪಡಿಸಿದ. ಯಾಕೆ?

988
00:56:29,708 --> 00:56:32,958
ಉಯಿಲಿನಲ್ಲೇ ಕೇಳಿದಿರಲ್ವಾ?
ಅವನ ಪ್ರಕಾರ ನಾನೊಬ್ಬ ಕೆಟ್ಟ ಕುರುಬ.

989
00:56:33,125 --> 00:56:34,541
ಹಿಲ್‌ಕೋಟ್.

990
00:56:34,708 --> 00:56:36,416
ಜಾರ್ಜ್ ಎಂದಿಗೂ ನಿಮ್ಮ ಚರ್ಚ್ ಒಳಗೆ ಕಾಲಿಡಲಿಲ್ಲ.

991
00:56:36,583 --> 00:56:39,791
ಮತ್ತು ಏಕಾಏಕಿ ತಾನು ಸಾಯುವ ದಿನದಂದು ಒಳಬಂದು

992
00:56:39,958 --> 00:56:41,375
ಒಂದು ದೊಡ್ಡ ದೇಣಿಗೆಯನ್ನು ನೀಡುತ್ತಾನೆ.

993
00:56:43,875 --> 00:56:44,708
ಯಾಕೆ?

994
00:56:44,958 --> 00:56:46,958
ಯಾವಾಗಲೂ ನಾನೇ ಯಾಕೆ ಕೆಳಗೆ ನಿಲ್ಲಬೇಕು?

995
00:56:48,250 --> 00:56:49,875
ಜಾರ್ಜ್ ಕೆಲಕಾಲದ ಹಿಂದೆ ನನ್ನ ಬಳಿ ಬಂದು

996
00:56:50,041 --> 00:56:53,541
ಚರ್ಚ್ ತನ್ನ ಮಕ್ಕಳನ್ನು
ದತ್ತು ಕೊಡುತ್ತಿದೆ ಅಂತ ಹೇಳಿದ್ದ.

997
00:56:53,708 --> 00:56:57,416
ಆದರೆ ಆತ ಸ್ವಲ್ಪ ಸ್ಥಿರವಾದ ಕೂಡಲೇ,
ಅವರಿಗಾಗಿ ಹುಡುಕಲು ಆರಂಭಿಸಿದ.

998
00:56:57,583 --> 00:56:59,958
ಅವರು ಎಲ್ಲಿದ್ದಾರೆಂದು ಚರ್ಚ್ ಆತನಿಗೆ ಹೇಳಲಿಲ್ಲ.

999
00:57:00,125 --> 00:57:02,291
ಅದಕ್ಕೆ ಕಾರಣ, ಕಟ್ಟುನಿಟ್ಟಾದ ನಿಯಮ.

1000
00:57:02,458 --> 00:57:04,666
ಹಾಗಾಗಿ ಆ ಮಾಹಿತಿಯನ್ನು ಆತನಿಗಾಗಿ ಕಲೆಹಾಕಲು

1001
00:57:04,833 --> 00:57:09,458
ನನಗೇನು ಬೇಕೆಂದು ಕೇಳಿದ.

1002
00:57:09,625 --> 00:57:13,041
ಮತ್ತು ಅದು ಚರ್ಚಿಗೆ ಗೊತ್ತಾಗಿದ್ದರೆ,
ನನ್ನ ಸ್ಥಾನಮಾನ ಹೋಗುತ್ತಿತ್ತು.

1003
00:57:13,208 --> 00:57:15,375
-ಅಯ್ಯೋ.
-ಅಂದರೆ ಕೆಲಸ ಹೋಗುತ್ತಿತ್ತು ಅಂತ.

1004
00:57:16,625 --> 00:57:18,250
ಆದರೆ ಆ ಹಣವು ನನಗಾಗಿರಲಿಲ್ಲ.

1005
00:57:18,416 --> 00:57:20,958
ಈ ಚರ್ಚಿಗೆ ದುರಸ್ತಿಯು ತುಂಬಾ ಅಗತ್ಯವಿದೆ.

1006
00:57:21,833 --> 00:57:25,916
ಜಾರ್ಜ್ ತನ್ನ ಅಗತ್ಯಕ್ಕಾಗಿ ನನ್ನನ್ನು ಸಮೀಪಿಸಿದ,
ನಾನು ಅದರ ಲಾಭ ಪಡೆದುಕೊಂಡೆ.

1007
00:57:26,541 --> 00:57:28,750
ಕೇಲೆಬ್ ಅಲ್ಲ ಕೆಟ್ಟ ಕುರುಬ.

1008
00:57:31,125 --> 00:57:32,333
ಅದು ನಾನು.

1009
00:57:32,500 --> 00:57:33,833
ಮತ್ತು ರೆಬೆಕ್ಕಾ.

1010
00:57:34,166 --> 00:57:35,000
ಮಿಸ್ ಹ್ಯಾಂಪ್‌ಸ್ಟೆಡ್.

1011
00:57:36,708 --> 00:57:39,375
ಡೆನ್‌ಬ್ರೂಕ್ ಸಾಂಸ್ಕೃತಿಕ ಉತ್ಸವ ಚೆನ್ನಾಗಿದೆಯಾ?

1012
00:57:41,083 --> 00:57:43,333
ಹಾಂ. ತುಂಬಾನೇ ಚೆನ್ನಾಗಿದೆ.

1013
00:57:44,833 --> 00:57:46,250
ಸುಲಭ. ಸುಲಭದ ಪ್ರಶ್ನೆಗಳು.

1014
00:57:46,416 --> 00:57:51,458
ಕೊಲೆ ನಡೆದ ರಾತ್ರಿ 8:00ರಿಂದ 11:00ರವರೆಗೂ
ನೀವು ಎಲ್ಲಿದ್ದಿರಿ?

1015
00:57:51,625 --> 00:57:53,791
ವಿಮಾನ ನಿಲ್ದಾಣದ ಬಳಿಯ ಹೋಟೆಲಿನಲ್ಲಿ.

1016
00:57:53,958 --> 00:57:56,791
ನಾನು ಕೋಣೆ ಪಡೆದು ಟಿವಿ ನೋಡುತ್ತಿದ್ದೆ.

1017
00:57:56,958 --> 00:57:59,125
ನಿದ್ದೆ ಬರುತ್ತಿರಲಿಲ್ಲ.
ದೀರ್ಘ ಪ್ರಯಾಣ. ಗೊತ್ತಾ?

1018
00:58:00,083 --> 00:58:02,125
ಏನು ನೋಡುತ್ತಿದ್ದಿರಿ?

1019
00:58:03,541 --> 00:58:05,750
24-ಗಂಟೆಗಳ ವಾರ್ತಾ ವಾಹಿನಿ.

1020
00:58:06,791 --> 00:58:10,875
-24-ಗಂಟೆಗಳ ವಾರ್ತಾ ವಾಹಿನಿ.
-24-ಗಂಟೆಗಳ ವಾರ್ತಾ ವಾಹಿನಿ.

1021
00:58:11,041 --> 00:58:15,000
ಸರಿ. ಅದರ ಉತ್ತರ ಸಿಕ್ಕಿತು.
ನಿಮ್ಮ ದಿನ ಶುಭವಾಗಿರಲಿ, ಮಿಸ್ ಹ್ಯಾಂಪ್‌ಸ್ಟೆಡ್.

1022
00:58:15,166 --> 00:58:17,458
ನಿಮಗೂ ಅಷ್ಟೇ. ಸಿಗೋಣ.

1023
00:58:18,375 --> 00:58:20,083
ಅಥವಾ ಮಿಸ್ ಕ್ರಾಂಪ್ಫ್ಸ್ ಅಂತ ಕರೆಯಬೇಕಾ?

1024
00:58:26,083 --> 00:58:30,583
ಚಾಸ್ಟಿಟಿ ಕ್ರಾಂಪ್ಫ್ಸ್
ನಿಮ್ಮ ನಿಜವಾದ ಹೆಸರು, ಅಲ್ವಾ?

1025
00:58:30,750 --> 00:58:32,333
ಚಾಸ್ಟಿಟಿ ಕ್ರಾಂಪ್ಫ್ಸ್ ಎಂಬ ಹೆಸರನ್ನು

1026
00:58:32,500 --> 00:58:35,375
ಯಾರಾದರೂ ಯಾಕೆ ಬದಲಾಯಿಸುತ್ತಾರೆ
ಎಂಬ ಕಾರಣ ನಿಮಗೇನಾದರೂ ಹೊಳೆದಿದೆಯಾ?

1027
00:58:35,541 --> 00:58:38,500
ಅದು ಸರಿಯೇ.
ಆದರೂ ನಾನೊಂದು ಹಿನ್ನೆಲೆ ಪರಿಶೀಲನೆ ನಡೆಸಿದೆ.

1028
00:58:38,750 --> 00:58:41,000
ಮತ್ತು ಏನು ತಿಳಿಯಿತೆಂದರೆ,
ಹಿಂದೊಮ್ಮೆ ನೀವು ಒಬ್ಬ

1029
00:58:41,125 --> 00:58:42,916
ಹೆಸರಾಂತ ಅಪರಾಧಿಯೊಂದಿಗೆ ಕೈಜೋಡಿಸಿದ್ದಿರಿ ಅಂತ.

1030
00:58:43,083 --> 00:58:44,541
ಅನೇಕ ನಕಲಿ ಸಹಿಗಳ ಅಪರಾಧ.

1031
00:58:44,708 --> 00:58:46,250
ಅವನ ಜೊತೆ
ಬ್ಯಾಂಕ್ ಖಾತೆಯನ್ನೂ ಹಂಚಿಕೊಂಡಿದ್ದಿರಿ.

1032
00:58:46,416 --> 00:58:49,166
ಸರಿ. ತಪ್ಪಾದ ಸಂಬಂಧಗಳಲ್ಲಿ
ಇರದಂಥವರು ಯಾರೂ ಇರಲ್ಲ.

1033
00:58:49,333 --> 00:58:51,791
ಅದರ ಬಗ್ಗೆ ನನಗೆ ಗೊತ್ತೂ ಇರಲಿಲ್ಲ.
ಮತ್ತು ಅದು ಮೂರು ವರ್ಷಗಳ ಹಿಂದೆ.

1034
00:58:51,958 --> 00:58:54,416
ಸರಿ. ಅಂದರೆ ಇತ್ತೀಚೆಗೇನೂ ಬೇರೆಯಾಗಿಲ್ಲ, ಅಲ್ವಾ?

1035
00:58:54,666 --> 00:58:56,500
-ಅಸಲಿ ಹೆಸರಲ್ಲ.
-ಇದೊಂದು ಚಾಳಿ ಇದ್ದಂತಿದೆ.

1036
00:58:56,666 --> 00:58:58,125
ಇಲ್ಲೊಂದು ಚಾಳಿ ಎದ್ದು ಕಾಣುತ್ತಿದೆ.

1037
00:58:58,291 --> 00:59:00,000
ಹಾಗಾದರೆ, ಹೇಳು.

1038
00:59:00,375 --> 00:59:02,791
ಚರ್ಚ್ ಮೈದಾನದಲ್ಲಿ ಸ್ಥೌನೇಯ ಮರದ ಬಳಿ
ಏನಾದರೂ ಹೋಗಿದ್ದೆಯಾ?

1039
00:59:03,041 --> 00:59:04,833
ಇಲ್ಲ. ಖಂಡಿತ ಇಲ್ಲ.

1040
00:59:05,000 --> 00:59:08,583
ಆಮೇಲೆ ಜಾರ್ಜ್‌ನ ತೋಟಕ್ಕೆ?

1041
00:59:09,041 --> 00:59:10,500
ಅಲ್ಲಿಗೇನಾದರೂ ಹೋಗಿದ್ದೆಯಾ?

1042
00:59:11,541 --> 00:59:12,666
ಖಂಡಿತ ಇಲ್ಲ.

1043
00:59:13,875 --> 00:59:15,458
ಕೇಲೆಬ್ ಭೋಗ್ಯ ಪಡೆದಿದ್ದ…

1044
00:59:15,625 --> 00:59:17,291
ಓ, ಆದರೆ ಆಮೇಲೆ ಬೆಥ್ ಹೇಳಿದಳು…

1045
00:59:17,458 --> 00:59:18,875
ರೆಬೆಕ್ಕಾ ಯಾಕೆ ಸುಳ್ಳು ಹೇಳುತ್ತಿದ್ದಾಳೆ?

1046
00:59:19,041 --> 00:59:20,416
ಮತ್ತು ಸಸ್ಯಾಹಾರಿ ಅಂದರೆ ಏನು?

1047
00:59:20,583 --> 00:59:21,875
ಇವೆಲ್ಲವೂ ಹೇಗೆ ಸಂಬಂಧಿಸಿವೆ?

1048
00:59:22,041 --> 00:59:24,750
ಯೋಚಿಸು, ದಡ್ಡ ಕುರಿಯೇ, ಯೋಚಿಸು!

1049
00:59:24,916 --> 00:59:27,916
ಅಷ್ಟು ಕಷ್ಟಪಟ್ಟು ಯೋಚಿಸಬೇಡ, ಲಿಲ್ಲಿ.
ಅದನ್ನು ಮಾಡಿರುವುದು ಸ್ಪಷ್ಟವಾಗಿ ಅವನ ಮಗಳೇ.

1050
00:59:28,083 --> 00:59:30,250
-ಖಂಡಿತ ಅದು ರೆಬೆಕ್ಕಾ.
-ಸರಿ ಹೇಳಿದ್ದಾಳೆ.

1051
00:59:30,416 --> 00:59:32,041
ಇಲ್ಲ, ಅದು ಅವಳಲ್ಲ!

1052
00:59:32,916 --> 00:59:35,208
ನಿಮಗೆ ಅವಳ ಬಗ್ಗೆ ಗೊತ್ತಿಲ್ಲ. ಅವಳು ಒಳ್ಳೆಯವಳು.

1053
00:59:35,375 --> 00:59:39,291
ಅವಳ ವಾಸನೆ ಜಾರ್ಜ್‌ನಂತೆಯೇ ಇದೆ,
ಮತ್ತು ಜಾರ್ಜ್ ನನ್ನನ್ನು ಪ್ರೀತಿಸುತ್ತಿದ್ದ.

1054
00:59:39,458 --> 00:59:42,083
ನಿನ್ನನ್ನು ಪ್ರೀತಿಸುತ್ತಿದ್ದನಾ?
ಚಳಿಗಾಲದ ಕುರಿಮರಿಯನ್ನು ಯಾರೂ ಪ್ರೀತಿಸಲ್ಲ.

1055
00:59:42,250 --> 00:59:46,291
ಒಂದು ಚಳಿಗಾಲದ ಕುರಿಮರಿ ಇನ್ನೊಂದನ್ನು
ಬೆಂಬಲಿಸುವುದು. ಹಾಗೇನೇ ಅವರೆಲ್ಲರೂ.

1056
00:59:46,458 --> 00:59:47,458
ಇರಿ.

1057
00:59:47,625 --> 00:59:49,083
ಏನು ಹೇಳಿದೆ ನೀನು?

1058
00:59:49,250 --> 00:59:51,875
ಜಾರ್ಜ್ ನನ್ನನ್ನು ಪ್ರೀತಿಸುತ್ತಿದ್ದ ಅಂದೆ.

1059
00:59:52,041 --> 00:59:53,958
ಇಲ್ಲ. ಅದಕ್ಕೂ ಮುಂಚೆ.

1060
00:59:54,125 --> 00:59:57,666
ರೆಬೆಕ್ಕಾಳ ವಾಸನೆ
ಜಾರ್ಜ್‌ನಂತೆಯೇ ಇದೆ ಅಂತ ಹೇಳಿದೆ.

1061
00:59:57,833 --> 01:00:00,083
ಇದನ್ನು ಮುಂಚೆಯೂ ಯಾರೋ ಹೇಳಿದ್ದರು.

1062
01:00:00,250 --> 01:00:01,958
ತಪ್ಪಾದ ಯಾರೋ ಅದು.

1063
01:00:02,125 --> 01:00:03,291
ಯಾರು?

1064
01:00:04,958 --> 01:00:06,291
ನೀನೇ.

1065
01:00:06,458 --> 01:00:09,416
ಯಾರು, ನಾನಾ? ನಾನು ಅಂದರೆ ಏನರ್ಥ?

1066
01:00:09,583 --> 01:00:10,625
ಅದನ್ನು ಮಾಡಿದ್ದು ಕ್ಲೌಡ್!

1067
01:00:10,791 --> 01:00:12,708
ಕೊಲೆಗಾತಿ!

1068
01:00:12,875 --> 01:00:16,083
ಅಲ್ಲ. ಆದರೂ ಅವಳೊಂದು
ರಹಸ್ಯವನ್ನು ಮುಚ್ಚಿಟ್ಟಿದ್ದಾಳೆ.

1069
01:00:16,250 --> 01:00:17,625
ಅಲ್ವಾ, ಕ್ಲೌಡ್?

1070
01:00:17,791 --> 01:00:21,000
ರೆಬೆಕ್ಕಾಳ ವಾಸನೆ ಜಾರ್ಜ್‌ನಂತೆಯೇ ಇದೆ
ಅಂತ ನೀನು ಕಳೆದ ರಾತ್ರಿ ಹೇಳಿದ್ದೆ.

1071
01:00:21,166 --> 01:00:25,125
ಆದರೆ ಅವಳು ತುಂಬಾ ದೂರದಲ್ಲಿದ್ದಳು,
ನಿನಗೆ ಅವಳ ವಾಸನೆ ಗೊತ್ತಾಗುವ ಅವಕಾಶವೇ ಇರಲಿಲ್ಲ.

1072
01:00:25,291 --> 01:00:28,375
ರೆಬೆಕ್ಕಾ ಮುಂಚೆಯೇ ಇಲ್ಲಿಗೆ ಬಂದಿದ್ದರ ಹೊರತು.

1073
01:00:30,458 --> 01:00:33,208
ಆದರೆ ಅದು ತುಂಬಾ ಸುಂದರವಾಗಿದೆ!

1074
01:00:33,375 --> 01:00:35,291
ಯಾವುದು ಸುಂದರವಾಗಿದೆ?

1075
01:00:37,625 --> 01:00:39,625
ಕೊನೆಯೇ ಇಲ್ಲದ ಆ ವಸ್ತು.

1076
01:00:43,916 --> 01:00:45,208
ನೋಡಿದಿರಾ?

1077
01:00:45,375 --> 01:00:48,708
ಇದು ಎಷ್ಟು ಸುಂದರವಾಗಿದೆ
ಮತ್ತು ಇದಕ್ಕೆ ಕೊನೆಯೇ ಇಲ್ಲ.

1078
01:00:48,875 --> 01:00:53,666
ಇದರ ಸುತ್ತಲೂ ಸುತ್ತುತ್ತಾ, ಸುತ್ತುತ್ತಾ,
ಸುತ್ತುತ್ತಾ, ಇದನ್ನು ಗಂಟೆಗಟ್ಟಲೆ ನೋಡಿದ್ದೇನೆ.

1079
01:00:53,916 --> 01:00:55,541
ಕ್ಲೌಡ್. ಕ್ಲೌಡ್!

1080
01:00:55,708 --> 01:00:57,666
ಇದು ನಿನಗೆ ಎಲ್ಲಿ ಸಿಕ್ಕಿತು?

1081
01:01:00,208 --> 01:01:02,458
ಅಂದು ರಾತ್ರಿ ರೆಬೆಕ್ಕಾ ಇಲ್ಲಿಗೆ ಬಂದಿದ್ದಳು.

1082
01:01:02,750 --> 01:01:04,541
ಜಾರ್ಜ್ ಕೊಲೆಯಾದ ಆ ರಾತ್ರಿ.

1083
01:01:06,875 --> 01:01:11,125
ನನಗೆ ಎಚ್ಚರವಾಗಿ ಹಸಿವಾಯಿತು, ಹಾಗಾಗಿ ನಾನು
ಹುಲ್ಲುಗಾವಲಿಗೆ ಹೋದಾಗ ಅಲ್ಲಿ ಅವಳು ಕಂಡಳು.

1084
01:01:11,291 --> 01:01:12,791
ಆಮೇಲೆ ಅವಳು ನನ್ನನ್ನು ನೋಡಿ ಹೇಳಿದಳು:

1085
01:01:12,958 --> 01:01:16,291
"ಎಷ್ಟು ಸುಂದರವಾಗಿದ್ದೀಯಲ್ಲ?" ಯಾಕೆಂದರೆ ಅದು
ನಿಜವೇ. ಅಂದರೆ, ಎಲ್ಲರಿಗಿಂತ ಸುಂದರಿ ನಾನೇ.

1086
01:01:16,458 --> 01:01:18,208
ಮತ್ತು ಅವಳು ನನ್ನ ತುಪ್ಪಳವನ್ನು ನೇವರಿಸಿದಳು,

1087
01:01:18,375 --> 01:01:20,041
ಮತ್ತು ಆ ವಸ್ತು ಜಾರಿ ಬಿದ್ದಿತು, ಹಾಗಾಗಿ ನಾನು--

1088
01:01:21,208 --> 01:01:22,958
ನಾನಾಗ ನಿರ್ಧರಿಸಿದೆ…

1089
01:01:23,541 --> 01:01:25,583
ಅದು ನನ್ನದಾಗಬೇಕು ಅಂತ.

1090
01:01:25,750 --> 01:01:28,125
ಈಗ ವಸ್ತುಗಳನ್ನೂ ಇಟ್ಟುಕೊಳ್ಳುತ್ತಿದ್ದೀವಾ?

1091
01:01:28,291 --> 01:01:30,500
ಕುರಿಗಳ ಬಳಿ ವಸ್ತುಗಳು ಇರುವುದಿಲ್ಲ!

1092
01:01:30,666 --> 01:01:32,166
ನಂಗೊತ್ತು, ಆದರೆ…

1093
01:01:32,625 --> 01:01:34,333
ಅದಕ್ಕೆ ಕೊನೆಯೇ ಇಲ್ಲ.

1094
01:01:34,958 --> 01:01:36,791
ಹಾಗೆಯೇ ಅದು ಇತ್ಯರ್ಥವಾಯಿತು.

1095
01:01:36,958 --> 01:01:38,166
ರೆಬೆಕ್ಕಾನೇ ಕೃತ್ಯ ಎಸಗಿದ್ದಾಳೆ.

1096
01:01:38,333 --> 01:01:39,333
ಕೊಲೆಗಾತಿ!

1097
01:01:39,500 --> 01:01:42,541
ಒಂದು ಹೊಳೆಯುವ ಲೋಹದ ತುಂಡಿನಿಂದ
ಏನೂ ಇತ್ಯರ್ಥವಾಗಲ್ಲ.

1098
01:01:42,708 --> 01:01:45,166
ಖಂಡಿತ ಆಗುತ್ತೆ. ಅದು ಸಾಕ್ಷಿ.

1099
01:01:45,333 --> 01:01:48,000
ಸಾಕ್ಷಿ, ಹಾಂ? ಯಾವುದರ ಸಾಕ್ಷಿ?

1100
01:01:48,166 --> 01:01:50,583
ತಾನು ಇಲ್ಲಿಗೆ ಬಂದೇ ಇರಲಿಲ್ಲ
ಅಂತ ಪೊಲೀಸಪ್ಪನಿಗೆ ಹೇಳಿದಳು,

1101
01:01:50,750 --> 01:01:54,333
ಆದರೆ ಅವಳು ಕಳೆದ ರಾತ್ರಿ ಮತ್ತು ಜಾರ್ಜ್
ಕೊಲೆಯಾದ ರಾತ್ರಿಯಂದೇ ಇಲ್ಲಿಗೆ ಬಂದಿದ್ದಳು.

1102
01:01:54,666 --> 01:01:57,583
ಅವಳೊಬ್ಬಳು ಸುಳ್ಳಿ, ಅವಳು ನಕಲಿ,
ಮತ್ತು ಅವಳೊಬ್ಬ ಚಳಿಗಾಲದ--

1103
01:01:58,166 --> 01:01:59,916
ಅವಳು ಏನು?

1104
01:02:00,375 --> 01:02:01,458
ಹೇಳು.

1105
01:02:02,166 --> 01:02:04,125
ನಿನಗೆ ಮೊದಲಿನಿಂದಲೂ ಅವಳೆಂದರೆ ಇಷ್ಟವಿಲ್ಲ.

1106
01:02:04,291 --> 01:02:05,375
ನಿಮ್ಮೆಲ್ಲರಿಗೂ!

1107
01:02:05,666 --> 01:02:06,958
ಮತ್ತು ಯಾಕೆ?

1108
01:02:07,125 --> 01:02:10,083
ಯಾಕೆಂದರೆ ಅವಳು ಹುಟ್ಟಿದ್ದು
ಚಳಿಗಾಲದಲ್ಲಿ ಆದ್ದರಿಂದ.

1109
01:02:11,250 --> 01:02:14,125
ಎಂಥಾ ಮಹಾ ಅಪರಾಧ ಅದು.

1110
01:02:14,291 --> 01:02:15,666
ನೀನು ಕೇಳಿಲ್ಲವೇ?

1111
01:02:15,833 --> 01:02:17,333
ನೀನು ಯಾರಿಗೂ ಬೇಡ.

1112
01:02:17,500 --> 01:02:19,583
ನೀನು ಯಾವುದಕ್ಕೂ ಅರ್ಹನಲ್ಲ!

1113
01:02:21,375 --> 01:02:26,083
ಚಳಿಗಾಲದ ಕುರಿಮರಿ ಯಾವಾಗಲೂ ಕೇಳುವಂತ
ಮಾತುಗಳು ಇವು, ಒಂದು ದಿನ

1114
01:02:26,458 --> 01:02:29,041
ಅದೇ ನಿಜವೆಂದು ನಂಬಲು ಆರಂಭಿಸುತ್ತದೆ.

1115
01:02:29,125 --> 01:02:29,958
ಸೆಬಾಸ್ಟಿಯನ್--

1116
01:02:30,083 --> 01:02:31,208
ಅವಳು ಕೃತ್ಯ ಎಸಗಿಲ್ಲ.

1117
01:02:31,375 --> 01:02:32,541
ಆದರೆ ಅದು ನಿನಗೆ ಹೇಗೆ ಗೊತ್ತು?

1118
01:02:32,708 --> 01:02:35,000
ಯಾಕೆಂದರೆ ನಾನು ಅವಳ ಕಣ್ಣುಗಳಲ್ಲಿ ನೋಡಿದೆ.

1119
01:02:35,166 --> 01:02:37,291
ಯಾಕೆಂದರೆ ಅದು ಕಣ್ಣ ಮುಂದೆಯೇ ಇದೆ.

1120
01:02:37,708 --> 01:02:39,375
ಆದರೆ ನಿನಗಲ್ಲ.

1121
01:02:39,625 --> 01:02:40,833
ಇಲ್ಲ.

1122
01:02:41,000 --> 01:02:43,833
ಯಾವುದೋ ಕುರಿಯ ಹಿಂಡಿಗಲ್ಲ.

1123
01:02:45,291 --> 01:02:47,625
ನಾವು ನಿನ್ನ ಕುರಿಯ ಹಿಂಡು.

1124
01:02:48,791 --> 01:02:50,333
ನಾನು ನಿನಗೆ ಹೇಳಿದ್ದೇನೆ.

1125
01:02:50,500 --> 01:02:52,500
ನನಗೆ ಯಾವ ಹಿಂಡೂ ಇಲ್ಲ.

1126
01:02:53,958 --> 01:02:55,666
ಎಂದಿಗೂ ಇದ್ದಿಲ್ಲ.

1127
01:02:58,458 --> 01:02:59,541
ಲಿಲ್ಲಿ.

1128
01:03:00,250 --> 01:03:03,041
ಆ ಕೊನೆಯೇ ಇಲ್ಲದ ವಸ್ತುವನ್ನು ಏನು ಮಾಡೋಣ?

1129
01:03:06,541 --> 01:03:07,875
ಅದೇ ಅಲ್ವಾ!

1130
01:03:08,041 --> 01:03:09,375
ಆ ಚಾಲಕ!

1131
01:03:13,375 --> 01:03:14,500
ಏನು?

1132
01:03:17,041 --> 01:03:18,291
ಏನು?

1133
01:03:20,708 --> 01:03:21,750
ಹೇ!

1134
01:03:24,708 --> 01:03:26,166
ಬಾ ಇಲ್ಲಿ. ಹೇ!

1135
01:03:28,083 --> 01:03:29,125
ಹೇ!

1136
01:03:30,791 --> 01:03:32,208
ವಾಪಸ್ ಬಾ ಇಲ್ಲಿ!

1137
01:03:32,541 --> 01:03:34,041
ಅದು ನನ್ನ ಟೋಪಿ!

1138
01:03:34,875 --> 01:03:36,375
ನಿಲ್ಲು! ನಿಲ್ಲಿರಿ!

1139
01:04:07,625 --> 01:04:10,000
ಧನ್ಯವಾದ. ಇದಕ್ಕಾಗಿ ಧನ್ಯವಾದ.

1140
01:04:13,458 --> 01:04:15,000
ಎಲ್ಲರಿಗೂ ಧನ್ಯವಾದ.

1141
01:04:25,791 --> 01:04:27,750
ನನಗೆ ನಿನ್ನದೇನೋ ಸಿಕ್ಕಿದಂತಿದೆ.

1142
01:04:28,666 --> 01:04:30,625
ಮಿಕ್ಕವುಗಳೊಂದಿಗೆ ಹೊಂದಿಕೆಯಾಗುತ್ತದೆ.

1143
01:04:32,333 --> 01:04:33,791
ಅದು ಜಾರಿ ಬಿದ್ದಿರಬೇಕು. ಧನ್ಯವಾದ--

1144
01:04:33,916 --> 01:04:36,000
ನನಗಿದು ಸಿಕ್ಕಿದ್ದು
ಜಾರ್ಜ್‌ನ ಹುಲ್ಲುಗಾವಲಿನಲ್ಲಿ.

1145
01:04:36,166 --> 01:04:38,541
ಎಲ್ಲಿ ಎಂದರೆ,
ನೀನು ಹೋಗಿಯೇ ಇಲ್ಲ ಅಂದೆಯಲ್ಲ, ಅಲ್ಲಿ.

1146
01:04:39,958 --> 01:04:42,916
ನಿನ್ನ ಕೋಣೆಯನ್ನು ಪರಿಶೀಲಿಸಲು
ನನ್ನ ಬಳಿ ವಾರೆಂಟಿದೆ.

1147
01:04:45,208 --> 01:04:46,750
ಏನನ್ನು ಹುಡುಕುತ್ತಿದ್ದೀರಿ?

1148
01:04:46,916 --> 01:04:48,166
ನನಗೆ ಗೊತ್ತಿಲ್ಲ.

1149
01:04:59,583 --> 01:05:01,291
ಸ್ಥೌನೇಯ ಮರದ ಬಳಿಯೇ ಹೋಗಿಲ್ವಾ?

1150
01:05:01,458 --> 01:05:02,458
ನಾನಂದುಕೊಂಡೆ.

1151
01:05:02,625 --> 01:05:04,750
ನಾನು ಹೋಗಿಲ್ಲ. ನಾನು ಹೋಗಲ್ಲ.

1152
01:05:04,916 --> 01:05:06,958
ಟಿಮ್, ಟಿಮ್, ನೀನು ನನ್ನನ್ನು ನಂಬಬೇಕು.

1153
01:05:07,125 --> 01:05:08,875
ಆಫೀಸರ್ ಡೆರ್ರಿ.

1154
01:05:09,541 --> 01:05:12,625
ಆಫೀಸರ್ ಡೆರ್ರಿ, ಪ್ರಮಾಣ ಮಾಡಿ ಹೇಳುತ್ತೇನೆ.

1155
01:05:12,791 --> 01:05:14,708
ನಾನು ನನ್ನ ತಂದೆಯನ್ನು ಕೊಲ್ಲಲಿಲ್ಲ.

1156
01:05:14,875 --> 01:05:19,375
ರೆಬೆಕ್ಕಾ ಹ್ಯಾಂಪ್‌ಸ್ಟೆಡ್, ಜಾರ್ಜ್ ಹಾರ್ಡಿಯ
ಕೊಲೆಗಾಗಿ ನಿಮ್ಮನ್ನು ಬಂಧಿಸಲಾಗುತ್ತಿದೆ.

1157
01:05:26,250 --> 01:05:27,625
ಆರೋಪಿತಳ ಸಂದರ್ಶನ,

1158
01:05:27,791 --> 01:05:32,125
ಚಾಸ್ಟಿಟಿ ಕ್ರಾಂಪ್ಫ್ಸ್,
ಅಲಿಯಾಸ್ ರೆಬೆಕ್ಕಾ ಹ್ಯಾಂಪ್‌ಸ್ಟೆಡ್.

1159
01:05:32,916 --> 01:05:37,500
ಮಿಸ್ ಕ್ರಾಂಪ್ಫ್ಸ್, ನೀವು ವಕೀಲರ ಉಪಸ್ಥಿತಿಯನ್ನು
ನಿರಾಕರಿಸಿದ್ದೀರಿ ಎಂಬುದನ್ನು ಖಚಿತಪಡಿಸುತ್ತೀರಾ?

1160
01:05:37,750 --> 01:05:41,208
ಹೌದು. ಪರವಾಗಿಲ್ಲ.
ನಾನು ನಿಮಗೆ ಎಲ್ಲವನ್ನೂ ಹೇಳಲು ತಯಾರಿದ್ದೇನೆ.

1161
01:05:41,375 --> 01:05:43,583
ಸರಿ. ಹಾಗಾದರೆ ಇದರಿಂದ ಶುರು ಮಾಡೋಣ.

1162
01:05:43,958 --> 01:05:48,333
ಜಾರ್ಜ್ ಹಾರ್ಡಿಯ ಕೊಲೆಯ ದಿನದಂದು
ನೀವು ಅವರ ಜಮೀನಿಗೆ ಹೋಗಿದ್ದಿರಾ?

1163
01:05:49,000 --> 01:05:50,291
ಹೌದು.

1164
01:05:50,625 --> 01:05:52,375
ಸರಿ, ಹಾಗಾದರೆ ಅಷ್ಟೆಲ್ಲಾ ನಕ್ಕಿದ್ದು,

1165
01:05:52,500 --> 01:05:55,416
ಮತ್ತು "ನೀವು ತುಂಬಾ ಬುದ್ಧಿವಂತರು,
ಪತ್ತೇದಾರರೇ" ಅಂದಿದ್ದು?

1166
01:05:55,583 --> 01:05:57,750
ಅದೆಲ್ಲವೂ ನಾಟಕ. ಅಲ್ವಾ?

1167
01:05:57,916 --> 01:06:00,875
ನಿಜ ಏನೆಂದರೆ, ನೀನು ಬಂದಾಗಿನಿಂದ
ಒಂದೇ ಒಂದು ಸತ್ಯವನ್ನೂ ಹೇಳಿಲ್ಲ.

1168
01:06:01,750 --> 01:06:04,458
ಪತ್ರಗಳು. ಆ ವಿಷಯ ನಿಜವೇ.

1169
01:06:04,958 --> 01:06:08,750
ಆತ ನನಗಾಗಿ 20 ವರ್ಷಗಳಿಂದ ಹುಡುಕುತ್ತಿದ್ದರು
ಎಂದು ಬರೆದಿದ್ದರು,

1170
01:06:08,916 --> 01:06:10,916
ಮತ್ತು ಎಲ್ಲವೂ ಸರಿಯಾಗುತ್ತಿದೆ ಎಂದಿದ್ದರು,

1171
01:06:11,000 --> 01:06:13,000
ಮತ್ತು ತಮ್ಮ ಉಯಿಲಿನ
ಒಂದು ಪ್ರತಿಯನ್ನೂ ನನಗೆ ಕಳಿಸಿದ್ದರು.

1172
01:06:13,166 --> 01:06:17,375
ನಿನಗೆ ಮೂರು ಕೋಟಿ ಸಿಗುವ ಉಯಿಲೋ
ಅಥವಾ ಒಂದಷ್ಟು ಕುರಿಗಳು ಸಿಗುವ ಉಯಿಲೋ?

1173
01:06:17,541 --> 01:06:19,916
ಇಲ್ಲ, ಹಣ ಇಲ್ಲದ್ದು.

1174
01:06:21,375 --> 01:06:23,458
ಆತ ನನ್ನನ್ನು ಭೇಟಿಯಾಗಬೇಕೆಂದಿದ್ದರು.

1175
01:06:23,666 --> 01:06:24,916
ಮತ್ತೆ…

1176
01:06:25,666 --> 01:06:26,791
ನೀನು ಹಾರಿ ಬಂದೆ,

1177
01:06:26,958 --> 01:06:31,416
ಆಮೇಲೆ ಕೊಲೆಯ ರಾತ್ರಿ ನೀನು
ಆತನ ಜಮೀನಿಗೆ ಗಾಡಿ ಓಡಿಸಿಕೊಂಡು ಬಂದೆ.

1178
01:06:32,250 --> 01:06:33,791
ಆಮೇಲೆ ಏನಾಯಿತು?

1179
01:06:35,250 --> 01:06:36,541
ನಾವು ಮಾತಾಡಿದೆವು.

1180
01:06:36,708 --> 01:06:37,750
ಯಾವುದರ ಬಗ್ಗೆ?

1181
01:06:39,416 --> 01:06:40,708
ಕುರಿಗಳು.

1182
01:06:41,125 --> 01:06:42,916
ಕುರಿಗಳ ಬಗ್ಗೆ ಮಾತಾಡಿದೆವು.

1183
01:06:43,083 --> 01:06:45,041
ಮತ್ತು ಅವುಗಳ ಹೆಸರುಗಳು.

1184
01:06:45,208 --> 01:06:48,083
ಪ್ರತಿಯೊಂದು ಕುರಿಗೂ
ಹೆಸರಿರಬೇಕೆಂದು ಆತ ಹೇಳಿದರು.

1185
01:06:48,250 --> 01:06:52,125
ಪ್ರತಿಯೊಂದಕ್ಕೂ ಅವುಗಳ
ಕಣ್ಣುಗಳಲ್ಲಿ ನೋಡುತ್ತಾ ಹೆಸರಿಟ್ಟರು.

1186
01:06:52,541 --> 01:06:55,291
ಮುಂದೊಂದು ದಿನ ಅವುಗಳನ್ನು
ನಾನು ವಹಿಸಿಕೊಳ್ಳಬೇಕೆಂದು ಹೇಳಿದರು.

1187
01:06:57,166 --> 01:06:58,458
ಅದಕ್ಕೆ ನನ್ನನ್ನು ಆಯ್ದರು.

1188
01:07:00,000 --> 01:07:02,791
ಆದರೆ, ನೋಡಿ, ನಾನು ದಡ್ಡಿಯಲ್ಲ.

1189
01:07:03,125 --> 01:07:05,958
ಅವರು ಕೊಲೆಯಾದ ರಾತ್ರಿ
ನಾನೊಬ್ಬಳೇ ಅವರ ಜೊತೆ ಇದ್ದೆ.

1190
01:07:06,125 --> 01:07:10,875
ಮತ್ತು ಹೊಸ ಉಯಿಲು ಮತ್ತು ಆ ಎಲ್ಲಾ ಹಣ
ಮತ್ತು ನನ್ನ ಜೀವನದಲ್ಲಿ ನಡೆದ ಆ ಎಲ್ಲದರಿಂದ?

1191
01:07:11,041 --> 01:07:14,416
ನನಗಿದ್ದ ಏಕೈಕ ಆಯ್ಕೆ ಸುಳ್ಳು ಹೇಳುವುದು.

1192
01:07:15,500 --> 01:07:17,333
ನೀವು ನನ್ನನ್ನು ನಂಬಬೇಕು.

1193
01:07:18,833 --> 01:07:21,375
"ನಾನು ಸುಳ್ಳು ಹೇಳಿದೆ,
ಹಾಗಾಗಿ ನನ್ನನ್ನು ನಂಬಿ."

1194
01:07:22,791 --> 01:07:23,666
ಅದೇನಾ?

1195
01:07:27,333 --> 01:07:31,166
ಬೆಳಿಗ್ಗೆ ನಿನ್ನನ್ನು
ಕೌಂಟಿ ನ್ಯಾಯಾಲಯಕ್ಕೆ ಕರೆದೊಯ್ದು,

1196
01:07:31,333 --> 01:07:35,291
ಜಾರ್ಜ್ ಹಾರ್ಡಿಯ ಉದ್ದೇಶಿತ ಕೊಲೆಗಾಗಿ
ಅಧಿಕೃತವಾಗಿ ಪ್ರಕರಣ ದಾಖಲಿಸಲಾಗುತ್ತದೆ.

1197
01:07:48,958 --> 01:07:51,208
ಅಂದರೆ ಅವಳೇ ಮಾಡಿದ್ದು.

1198
01:07:54,333 --> 01:07:55,583
ಹಣ.

1199
01:07:55,916 --> 01:07:57,291
ಜನ ಅದಕ್ಕಾಗಿ ಏನೇನೆಲ್ಲಾ ಮಾಡ್ತಾರೋ.

1200
01:07:58,375 --> 01:08:02,250
ಪಾಪ, ಜಾರ್ಜ್ ಹಾರ್ಡಿ
ತಪ್ಪು ಕುರಿಮರಿಯನ್ನು ಆರಿಸಿದ್ದ.

1201
01:08:03,583 --> 01:08:06,041
ಗೊತ್ತಾ, ವಾನ್ ವ್ಯೂರೆನ್ ತನ್ನ ಕುರಿಗಳು

1202
01:08:06,125 --> 01:08:08,625
ಮತ್ತು ಜಮೀನನ್ನು
ಕೇಲೆಬ್ ಮೆರ್ರೋಗೆ ಮಾರಲು ಒಪ್ಪಿದ್ದಾನೆ,

1203
01:08:08,791 --> 01:08:11,875
ಹಾಗಾಗಿ ನಾಳೆ ಮಧ್ಯಾಹ್ನ
ಅದರ ಪತ್ರವಹಿವಾಟಿನ ಕೆಲಸ ಮಾಡೋಣ.

1204
01:08:12,791 --> 01:08:13,666
ಆಗಬಹುದು.

1205
01:08:14,416 --> 01:08:16,875
ನಿಮ್ಮ ಬಗ್ಗೆ ತಪ್ಪಾಗಿ ತಿಳಿದಿದ್ದೆ, ಆಫೀಸರ್.

1206
01:08:17,041 --> 01:08:18,041
ಹೌದು.

1207
01:08:18,207 --> 01:08:21,041
ಕೊನೆಗೂ ಆ ಮೂರ್ಖ ನೀವಲ್ಲ ಅನಿಸುತ್ತೆ.

1208
01:08:21,500 --> 01:08:22,582
ಉತ್ತಮ ಕೆಲಸ.

1209
01:09:01,500 --> 01:09:02,541
ಲಿಲ್ಲಿ?

1210
01:09:03,957 --> 01:09:06,916
ಇಲ್ಲೇನು ಮಾಡುತ್ತಿದ್ದೀಯ? ಆರಾಮಾಗಿದ್ದೀಯಾ?

1211
01:09:07,082 --> 01:09:09,957
ಹೌದು. ಚೆನ್ನಾಗಿಯೇ ಇದ್ದೇನೆ. ಸಂತೋಷವಾಗಿದ್ದೇನೆ.

1212
01:09:10,125 --> 01:09:13,666
ರೆಬೆಕ್ಕಾಳನ್ನು ಬಂಧಿಸಿದರು.
ನಾಳೆ, ಕೇಲೆಬ್ ನಮ್ಮ ಹೊಸ ಕುರುಬನಾಗುತ್ತಾನೆ.

1213
01:09:13,832 --> 01:09:15,000
ಅದ್ಭುತ.

1214
01:09:15,166 --> 01:09:19,375
ಅವಳು ಯಾವುದನ್ನೂ ಒಪ್ಪುತ್ತಿಲ್ಲ, ಸಹಜವಾಗಿ,
ಆದರೆ ನಾನು ಸರಿ ಮತ್ತು ಸೆಬಾಸ್ಟಿಯನ್ ತಪ್ಪು.

1215
01:09:20,666 --> 01:09:23,582
ರೆಬೆಕ್ಕಾನೇ ಮಾಡಿರುವುದು, ಅಲ್ವಾ?

1216
01:09:23,750 --> 01:09:25,000
ಖಂಡಿತ ಅವಳೇ ಮಾಡಿರುವುದು.

1217
01:09:25,166 --> 01:09:26,250
ಧನ್ಯವಾದ.

1218
01:09:26,416 --> 01:09:28,291
ಯಾಕೆಂದರೆ ಅವಳು ಮಾಡಿದಳು ಅಂತ
ನೀನು ಹೇಳಿದಕ್ಕಾಗಿ.

1219
01:09:29,082 --> 01:09:29,916
ಏನು?

1220
01:09:30,082 --> 01:09:33,250
ಅಂದರೆ, ಕಥೆಗಳು ಮುಗಿಯುವ ಮುಂಚೆಯೇ ಅವುಗಳ
ಅಂತ್ಯವನ್ನು ನೀನು ಯಾವಾಗಲೂ ಊಹಿಸುತ್ತೀಯ.

1221
01:09:33,416 --> 01:09:34,666
ನಾನು ನಿನ್ನನ್ನು ನಂಬುತ್ತೇನೆ.

1222
01:09:34,832 --> 01:09:36,750
ಆದರೆ ಅವು ಕಥೆಗಳು ಅಷ್ಟೇ.

1223
01:09:36,916 --> 01:09:39,500
ಇದು ಒಬ್ಬಳು ನೈಜ ವ್ಯಕ್ತಿ. ಒಂದು ವೇಳೆ ನಾನು--

1224
01:09:39,666 --> 01:09:40,832
ಲಿಲ್ಲಿ, ನೋಡು.

1225
01:09:41,000 --> 01:09:43,750
ಆ ಬೇಲಿಯ ಆಚೆ ಇರುವುದೇ ಕೇಲೆಬ್‌ನ ಹುಲ್ಲುಗಾವಲು.

1226
01:09:43,916 --> 01:09:46,541
ನಾವು ಅಲ್ಲಿಗೆ ಹೋಗಿ
ನಮ್ಮ ಹೊಸ ಹಿಂಡನ್ನು ಭೇಟಿಯಾಗೋಣವೇ?

1227
01:09:47,082 --> 01:09:49,750
ಆದರೆ ನಾವು ಹಿಂದೆಂದೂ
ಕೇಲೆಬ್‌ನ ಹುಲ್ಲುಗಾವಲಿಗೆ ಹೋಗಿಲ್ಲ.

1228
01:09:49,916 --> 01:09:52,625
ಹಂಗಾದರೆ, ನಾವು ಮುಂಚೆ
ಯಾವತ್ತೂ ರಸ್ತೆಗಳನ್ನೂ ದಾಟಿರಲಿಲ್ಲ.

1229
01:09:52,791 --> 01:09:53,832
ಬಾ.

1230
01:10:04,250 --> 01:10:06,208
ನಾವೊಂದು ಮೋಡದ ಒಳಗೆ ಇರುವಂತಿದೆ.

1231
01:10:06,375 --> 01:10:08,333
ನಾವು ತಪ್ಪು ಜಾಗಕ್ಕೆ ಬಂದಿದ್ದೇವೆ ಅನಿಸುತ್ತಾ?

1232
01:10:08,500 --> 01:10:10,083
ಹಾಗೇನಿಲ್ಲ.

1233
01:10:12,583 --> 01:10:13,833
ಹಲೋ?

1234
01:10:32,791 --> 01:10:33,958
ಹಲೋ!

1235
01:10:34,583 --> 01:10:36,750
ನನ್ನ ಹೆಸರು ಲಿಲ್ಲಿ.

1236
01:10:36,916 --> 01:10:39,416
ಮತ್ತು ಇವನು ಮಾಪಲ್.

1237
01:10:39,833 --> 01:10:42,041
ನಾವು ಪಕ್ಕದ ಹುಲ್ಲುಗಾವಲಿನವರು.

1238
01:10:43,291 --> 01:10:45,625
ಕೇಲೆಬ್ ನಮಗೂ ಕುರುಬನಾಗಲಿದ್ದಾನೆ.

1239
01:10:49,916 --> 01:10:50,958
ಏನು?

1240
01:10:58,708 --> 01:10:59,750
ಓಡಿರಿ.

1241
01:10:59,916 --> 01:11:01,916
ಏನು? ಆದರೆ ನಾನು--

1242
01:11:08,000 --> 01:11:12,208
ಯಾಕೋ ನಾವು ಇಲ್ಲಿಗೆ ಬರಬಾರದಿತ್ತು
ಅಂತ ಅನಿಸುತ್ತಿದೆ.

1243
01:11:12,375 --> 01:11:13,583
ನಾವು ಹೋಗಬೇಕು.

1244
01:11:13,750 --> 01:11:15,375
ಸರಿ.

1245
01:11:15,541 --> 01:11:16,916
ವಾಪಸ್ ಹೋಗುವ ದಾರಿ ಯಾವುದು?

1246
01:11:17,083 --> 01:11:18,875
ಆ ಕಡೆ ಇರಬಹುದೇನೋ?

1247
01:11:23,333 --> 01:11:25,250
ನೋಡು! ಅಲ್ಲೊಂದು ಬೆಳಕಿದೆ.

1248
01:11:28,500 --> 01:11:30,875
ಇದು ಕೇಲೆಬ್‌ನ ಕೊಟ್ಟಿಗೆ ಇರಬೇಕು.

1249
01:11:31,708 --> 01:11:33,625
ನಾವು ಇಲ್ಲಿ ಸುರಕ್ಷಿತವಾಗಿರುತ್ತೇವೆ.

1250
01:11:38,333 --> 01:11:41,000
ನನಗೆ ಯಾಕೋ ಇದು ಕೊಟ್ಟಿಗೆ ಅಂತ ಅನಿಸುತ್ತಿಲ್ಲ.

1251
01:11:42,000 --> 01:11:43,041
ಬಹುಶಃ ನಾವು…

1252
01:11:43,208 --> 01:11:44,208
ಇರು.

1253
01:11:45,333 --> 01:11:46,583
ಏನಿದು?

1254
01:11:48,291 --> 01:11:50,458
ಲಿಲ್ಲಿ, ಬೇಡ. ನಾವು ಹೋಗಬೇಕು.

1255
01:11:54,125 --> 01:11:56,125
ಆ ಕುರಿ ಯಾಕೆ ಹಾಗೆ ಕಾಣುತ್ತಿದೆ?

1256
01:11:56,291 --> 01:11:58,708
ಅವುಗಳಿಗೆ ಏನು ಮಾಡುತ್ತಿದ್ದಾರೆ?

1257
01:12:02,083 --> 01:12:03,291
ಕೇಲೆಬ್?

1258
01:12:04,666 --> 01:12:05,666
ಅವನು…

1259
01:12:06,208 --> 01:12:07,208
ಅವನು…

1260
01:12:08,458 --> 01:12:10,541
ಹಲೋ, ನಾಯಿಗಳೇ.

1261
01:12:12,833 --> 01:12:14,166
ಏನಾಗಿದೆ ಅವುಗಳಿಗೆ?

1262
01:12:15,875 --> 01:12:17,833
ನಾವು ಇಲ್ಲಿ ಇರಕೂಡದು.

1263
01:12:19,291 --> 01:12:20,625
ಓಡು!

1264
01:12:31,916 --> 01:12:33,083
ವೇಗವಾಗಿ, ಲಿಲ್ಲಿ!

1265
01:12:33,250 --> 01:12:35,458
ಆಗುತ್ತಿಲ್ಲ! ನನ್ನಿಂದ ಆಗಲ್ಲ!

1266
01:12:47,541 --> 01:12:48,625
ಸೆಬಾಸ್ಟಿಯನ್.

1267
01:13:03,833 --> 01:13:04,666
ಇಲ್ಲ!

1268
01:13:19,458 --> 01:13:20,750
ಸೆಬಾಸ್ಟಿಯನ್.

1269
01:13:20,916 --> 01:13:23,458
ಅಬ್ಬಾ, ಸದ್ಯ, ನೀನು ಬಂದಿದ್ದಕ್ಕೆ.
ಇಲ್ಲದಿದ್ದರೆ ನಾವು--

1270
01:13:25,791 --> 01:13:27,208
ಸೆಬಾಸ್ಟಿಯನ್?

1271
01:13:28,125 --> 01:13:29,666
ಸೆಬಾಸ್ಟಿಯನ್, ಎದ್ದೇಳು!

1272
01:13:32,333 --> 01:13:33,625
ಲಿಲ್ಲಿ.

1273
01:13:36,541 --> 01:13:37,875
ನನ್ನಿಂದ ಆಗುತ್ತಿಲ್ಲ.

1274
01:13:38,708 --> 01:13:40,166
ಯಾಕಾಗಲ್ಲ?

1275
01:13:40,333 --> 01:13:42,041
ನನಗೆ ಅರ್ಥ ಆಗು--

1276
01:13:47,333 --> 01:13:48,458
ಲಿಲ್ಲಿ.

1277
01:13:49,291 --> 01:13:50,666
ಅವನು ಸಾಯುತ್ತಿದ್ದಾನೆ.

1278
01:13:51,166 --> 01:13:52,333
ಏನು?

1279
01:13:52,500 --> 01:13:54,833
ಇಲ್ಲ, ಕುರಿಗಳು ಸಾಯಲ್ಲ.

1280
01:13:55,000 --> 01:13:56,833
ನಾವು ಮೋಡಗಳಾಗುತ್ತೇವೆ.

1281
01:13:57,000 --> 01:14:00,708
ಮೋಡವಾಗು, ಸೆಬಾಸ್ಟಿಯನ್. ಮೋಡವಾಗು.

1282
01:14:04,291 --> 01:14:06,000
ಆಗುವ ಹಾಗಿದ್ದರೆ ಚಂದವೇನೋ.

1283
01:14:07,083 --> 01:14:09,333
ನೀನು ಮರಳಿ ಬರಬಾರದಿತ್ತು.

1284
01:14:09,791 --> 01:14:11,750
ಯಾಕೆ ಮರಳಿ ಬಂದೆ?

1285
01:14:11,916 --> 01:14:13,291
ಬರಬೇಕಾಯಿತು.

1286
01:14:14,208 --> 01:14:16,000
ನೀವು ನನ್ನ ಹಿಂಡಿನವರು.

1287
01:14:23,208 --> 01:14:24,708
ನನಗೆ ಅವನು ಕಾಣಿಸುತ್ತಿದ್ದಾನೆ.

1288
01:14:26,625 --> 01:14:28,750
ನನಗೆ ಜಾರ್ಜ್ ಕಾಣಿಸುತ್ತಿದ್ದಾನೆ.

1289
01:14:39,125 --> 01:14:40,208
ಇಲ್ಲ.

1290
01:14:46,208 --> 01:14:47,291
ಅದು ಕೇಲೆಬ್.

1291
01:14:47,541 --> 01:14:48,916
ನಾವು ಹೋಗಬೇಕು.

1292
01:14:49,083 --> 01:14:50,250
ಈಗಲೇ, ಲಿಲ್ಲಿ!

1293
01:15:01,708 --> 01:15:04,166
ಎದ್ದೇಳಿ! ಎಲ್ಲರೂ ಎದ್ದೇಳಿ!

1294
01:15:04,458 --> 01:15:06,083
-ಎದ್ದೇಳಿ!
-ಎದ್ದೇಳಿ!

1295
01:15:06,250 --> 01:15:07,708
-ಎದ್ದೇಳಿ!
-ಎದ್ದೇಳಿ!

1296
01:15:07,958 --> 01:15:09,000
ನನ್ನ ಹಿಂದೆ ಬನ್ನಿ!

1297
01:15:09,166 --> 01:15:10,541
ಅವಳ ಹಿಂದೆ ಹೋಗಿ!

1298
01:15:10,708 --> 01:15:11,708
ಅವಳ ಹಿಂದೆ ಹೋಗಿ!

1299
01:15:11,875 --> 01:15:13,333
ಅವಳ ಹಿಂದೆ ಹೋಗಿ!

1300
01:15:20,333 --> 01:15:21,500
ನಿಲ್ಲಿ!

1301
01:15:21,916 --> 01:15:24,791
ನಿಲ್ಲಬೇಡಿ! ನಾವು ಹೋಗಬೇಕು! ಈಗಲೇ!

1302
01:15:24,958 --> 01:15:27,541
ಹೋಗಬೇಕಾ? ಏನು ಮಾತಾಡುತ್ತಿದ್ದೀಯ?

1303
01:15:28,291 --> 01:15:30,208
ಸೆಬಾಸ್ಟಿಯನ್ ಸತ್ತುಹೋದ.

1304
01:15:30,708 --> 01:15:33,458
ಆದರೆ ನಾವು ಮೋಡಗಳಾಗುತ್ತೇವೆ ಅಂತ ಹೇಳಿದ್ದೆ.

1305
01:15:33,625 --> 01:15:34,875
ನಾನು ತಪ್ಪು ತಿಳಿದಿದ್ದೆ.

1306
01:15:35,041 --> 01:15:36,375
ನಾವು ಸಾಯುತ್ತೇವೆ.

1307
01:15:36,541 --> 01:15:38,666
ಸೆಬಾಸ್ಟಿಯನ್ ಸಾಯುವುದನ್ನು ನೋಡಿದೆ.

1308
01:15:38,833 --> 01:15:42,916
ಮತ್ತು ನಾವು ಇಂದು ರಾತ್ರಿ ಹೊರಡದಿದ್ದರೆ,
ನಾವೆಲ್ಲರೂ ಸಾಯುತ್ತೇವೆ.

1309
01:15:43,708 --> 01:15:45,916
ಕೇಲೆಬ್ ಕುರಿಗಳನ್ನು ಆಹಾರವಾಗಿ ಪರಿವರ್ತಿಸಿ--

1310
01:15:46,083 --> 01:15:49,416
ನಿಲ್ಲಿಸು! ಇಂತಹ ಭಯಾನಕ ವಿಚಾರಗಳನ್ನು
ಹೇಳುವುದನ್ನು ನಿಲ್ಲಿಸು!

1311
01:15:49,583 --> 01:15:51,583
ಇದು ನಡೆದಿದ್ದನ್ನು
ನಾನು ಮರೆಯುತ್ತಿದ್ದೇನೆ. ಈಗಲೇ!

1312
01:15:51,708 --> 01:15:52,875
ಇಲ್ಲ, ಅದು ಆಗಲ್ಲ!

1313
01:15:53,041 --> 01:15:56,083
ಯಾಕೆ? ಇಂಥ ಭಯಾನಕ ಘಟನೆಯನ್ನು
ನಾನು ಯಾಕೆ ನೆನಪಿನಲ್ಲಿಟ್ಟುಕೊಳ್ಳಲಿ?

1314
01:15:56,250 --> 01:15:57,583
ಯಾಕೆಂದರೆ ಅದು ನಿಜ!

1315
01:15:57,750 --> 01:15:59,708
ನಾನು ಅದನ್ನು ಮರೆತರೆ ಅದು ನಿಜವಾಗಲ್ಲ.

1316
01:15:59,875 --> 01:16:00,958
-ಒಂದು.
-ಇರು!

1317
01:16:01,041 --> 01:16:01,875
ಎರಡು.

1318
01:16:02,000 --> 01:16:04,375
ರಾನಿ, ರೆಜ್ಜಿ, ದಯವಿಟ್ಟು. ಧೈರ್ಯವಾಗಿರಿ.

1319
01:16:04,541 --> 01:16:05,708
ಮೂರು!

1320
01:16:08,708 --> 01:16:10,250
ಓ, ಹಲೋ, ಲಿಲ್ಲಿ.

1321
01:16:10,791 --> 01:16:12,291
ನನಗೊಂದು ಪ್ರಶ್ನೆ ಇದೆ.

1322
01:16:12,500 --> 01:16:13,708
ನಾವು ಇಲ್ಲೇನು ಮಾಡುತ್ತಿದ್ದೇವೆ?

1323
01:16:13,875 --> 01:16:16,000
ನನಗೆ ಇಷ್ಟ ಆಗುತ್ತಿಲ್ಲ.
ನಮ್ಮ ಹುಲ್ಲುಗಾವಲಿಗೆ ಹೋಗೋಣ.

1324
01:16:16,166 --> 01:16:17,291
ನಮ್ಮ ಹುಲ್ಲುಗಾವಲಿಗೆ ಹೋಗೋಣ.

1325
01:16:17,708 --> 01:16:21,416
ಇಲ್ಲ! ಬೇಡ! ದಯವಿಟ್ಟು ಬೇಡ!

1326
01:16:24,750 --> 01:16:27,333
ಸೆಬಾಸ್ಟಿಯನ್ ನಮ್ಮ ಬಗ್ಗೆ ಸರಿಯಾಗಿಯೇ ಹೇಳಿದ್ದ.

1327
01:16:27,500 --> 01:16:31,125
ನಾವು ದಡ್ಡ, ಪುಕ್ಕಲು ಕುರಿಗಳಷ್ಟೇ.

1328
01:16:32,416 --> 01:16:37,416
ನಾನು ಇವತ್ತಷ್ಟೇ ಮೊದಲ ಸಲ
ಒಂದು ಕುರಿ ಸಾಯುವುದನ್ನು ನೋಡಿಲ್ಲ, ಅಲ್ವಾ?

1329
01:16:37,791 --> 01:16:38,833
ಇಲ್ಲ.

1330
01:16:39,000 --> 01:16:41,208
ನಾನು ಎಷ್ಟು ಸಲ ಮರೆತಿದ್ದೇನೆ?

1331
01:16:42,541 --> 01:16:44,291
ಲೆಕ್ಕ ಹಾಕಲಾರದಷ್ಟು ಸಲ.

1332
01:16:44,916 --> 01:16:49,000
ಇದೆಲ್ಲವನ್ನೂ ನೀನೊಬ್ಬನೇ
ಇಷ್ಟೂ ಕಾಲ ಭರಿಸಿದ್ದೀಯಾ?

1333
01:16:49,708 --> 01:16:50,833
ಹೌದು.

1334
01:16:51,250 --> 01:16:53,583
ನನಗೆ ಪ್ರತಿ ಕೆಟ್ಟ ಸಂಗತಿಯೂ ನೆನಪಿದೆ.

1335
01:16:53,958 --> 01:16:56,875
ಆದರೆ ನನಗೆ ಒಳ್ಳೆಯ ಸಂಗತಿಗಳೂ ನೆನಪಿವೆ.

1336
01:16:58,333 --> 01:17:01,083
ನನಗೆ ನನ್ನ ತಾಯಿಯ ಮುಖ ನೆನಪಿದೆ.

1337
01:17:01,250 --> 01:17:04,291
ಹಳೆಯ ಮಿತ್ರರು ಮತ್ತು ಅವರು ನನ್ನನ್ನು
ಹೇಗೆ ಪ್ರೀತಿಸುತ್ತಿದ್ದರು ಎಂಬುದು ನೆನಪಿದೆ.

1338
01:17:04,458 --> 01:17:07,166
ನಿನಗೆ ಸೆಬಾಸ್ಟಿಯನ್ ನೆನಪಿರುತ್ತಾನೆ.

1339
01:17:09,375 --> 01:17:10,833
ನೋವಾಗುತ್ತೆ.

1340
01:17:11,000 --> 01:17:13,041
ನೆನೆಸಿಕೊಂಡರೆ ನೋವಾಗುತ್ತದೆ.

1341
01:17:13,583 --> 01:17:14,750
ನಂಗೊತ್ತು.

1342
01:17:14,916 --> 01:17:17,708
ಆದರೆ ನೀನು ಮರೆತರೆ,
ಇತರರನ್ನು ಕಾಪಾಡಲಾಗುವುದಿಲ್ಲ

1343
01:17:17,791 --> 01:17:20,000
ಮತ್ತು ಸೆಬಾಸ್ಟಿಯನ್ ಸಾವು ವ್ಯರ್ಥವಾಗುತ್ತದೆ.

1344
01:17:20,791 --> 01:17:22,416
ಕೇಲೆಬ್ ನಾಳೆ ನಿಮಗಾಗಿ ಬರುತ್ತಾನೆ,

1345
01:17:22,583 --> 01:17:28,125
ಮತ್ತು ನೀವು ನಿಮ್ಮ ಹೊಸ ಕುರುಬನನ್ನು ಇತರ
"ದಡ್ಡ, ಪುಕ್ಕಲು ಕುರಿ"ಗಳಂತೆ ಹಿಂಬಾಲಿಸುತ್ತೀರಿ.

1346
01:17:28,625 --> 01:17:31,291
ಆಮೇಲೆ… ನಾವೆಲ್ಲರೂ ಸಾಯುತ್ತೇವೆ.

1347
01:17:32,916 --> 01:17:35,833
ನನ್ನನ್ನು ಕ್ಷಮಿಸು, ಲಿಲ್ಲಿ. ನಿಜವಾಗಲೂ.

1348
01:17:36,000 --> 01:17:39,958
ಆದರೆ ನಾವು ಪ್ರೀತಿಸುವವರನ್ನು
ಜೀವಂತವಾಗಿಡುವುದೇ ನಮ್ಮ ನೆನಪುಗಳು.

1349
01:18:00,541 --> 01:18:02,708
ನನ್ನನ್ನು ಕ್ಷಮಿಸು, ಸೆಬಾಸ್ಟಿಯನ್.

1350
01:18:03,708 --> 01:18:05,833
ನಾನು ನಿನ್ನಷ್ಟು ಬಲಶಾಲಿ ಅಲ್ಲ.

1351
01:18:08,333 --> 01:18:10,625
ಒಂದು. ಎರಡು.

1352
01:18:10,791 --> 01:18:15,000
ನೀನು ಎಲ್ಲರಿಗಿಂತ ಬುದ್ದಿವಂತ ಕುರಿ ಇರಬಹುದು,
ಆದರೆ ಮಾಪಲ್ ಎಲ್ಲರಿಗಿಂತ ಜ್ಞಾನಿ.

1353
01:18:18,833 --> 01:18:20,708
ನಾನು ಒಮ್ಮೆ ಒಬ್ಬರನ್ನು ಕಳೆದುಕೊಂಡೆ.

1354
01:18:21,750 --> 01:18:23,416
ಅದು ಬಾಧೆಯಾಗುತ್ತೆ ಅಂತ ಗೊತ್ತು.

1355
01:18:23,833 --> 01:18:27,458
ಆದರೆ, ಕಾಲ ಕಳೆದಂತೆ,
ಎಲ್ಲವೂ ಒಳ್ಳೆಯದೇ ಉಳಿಯುತ್ತದೆ.

1356
01:18:28,125 --> 01:18:30,791
ನೀನು…? ನೀನು ನಿಜವಾಗಲೂ ಇಲ್ಲಿದ್ದೀಯಾ?

1357
01:18:31,250 --> 01:18:32,833
ಖಂಡಿತ ಇದ್ದೇನೆ.

1358
01:18:33,000 --> 01:18:35,416
ಯಾಕೆಂದರೆ ನೀನು ನನ್ನನ್ನು ಮರೆಯಲಿಲ್ಲ.
ಇದು ಹೇಗೆ ಅಂತ ಗೊತ್ತಾಯ್ತಾ?

1359
01:18:35,750 --> 01:18:39,791
ಅದು, ಹೌದು, ಆದರೆ ಈಗ ಅದು ಮುಖ್ಯವಲ್ಲ.
ಕೇಲೆಬ್ ಈಗ--

1360
01:18:39,958 --> 01:18:44,208
ಕೇಲೆಬ್ ನನ್ನ ಹಿಂಡಿಗೆ ಏನನ್ನೂ ಮಾಡಕ್ಕಾಗಲ್ಲ
ಯಾಕೆಂದರೆ ನೀನು ಅವುಗಳನ್ನು ಕಾಪಾಡುತ್ತೀಯ.

1361
01:18:44,750 --> 01:18:45,958
ಆದರೆ ಹೇಗೆ?

1362
01:18:46,125 --> 01:18:48,041
ಹೇಗೆ ಅಂತ ನಿನಗೆ ಈಗಾಗಲೇ ಗೊತ್ತಿದೆ.

1363
01:18:48,583 --> 01:18:51,291
ಅದನ್ನು ನಿಜವಾಗಿ ಮಾಡಿದ್ದು ಯಾರು
ಅಂತ ನೀನು ಕಂಡುಹಿಡಿದರೆ, ಲಿಲ್ಲಿ,

1364
01:18:51,458 --> 01:18:54,041
ರೆಬೆಕ್ಕಾ ಹಿಂಡನ್ನು ಪಡೆಯುತ್ತಾಳೆ
ಮತ್ತು ನೀವೆಲ್ಲರೂ ಸುರಕ್ಷಿತವಾಗಿರುತ್ತೀರಿ.

1365
01:18:54,208 --> 01:18:56,750
ಆದರೆ ಅದನ್ನು ಮಾಡಿದ್ದು ಯಾರು
ಅಂತ ನನಗೆ ಗೊತ್ತಾಗದಿದ್ದರೆ?

1366
01:18:56,916 --> 01:18:59,416
ನಿಜವಾಗಲೂ, ನಾನು ನಿನಗೆ
ಇಂಥ ಹತ್ತಾರು ಕಥೆಗಳನ್ನು ಓದಿ ಹೇಳಿದ್ದೇನೆ.

1367
01:18:59,583 --> 01:19:01,208
ಅವುಗಳಲ್ಲಿರುವ ನಿಯಮಗಳು ಬಹಳ ಸರಳ.

1368
01:19:01,375 --> 01:19:03,291
ಆದರೆ ನಿಯಮಗಳಿಂದ ಪ್ರಯೋಜನವಾಗಿಲ್ಲ.

1369
01:19:03,458 --> 01:19:05,375
ಅದು ಆಗಂತುಕನಲ್ಲ ಅಂತ ಪೊಲೀಸರಿಗೆ ಗೊತ್ತಿದೆ.

1370
01:19:05,541 --> 01:19:07,416
ಕೃತ್ಯದ ಸ್ಥಳಕ್ಕೆ
ಯಾರು ಬೇಕಾದರೂ ಮರಳಬಹುದಾಗಿತ್ತು.

1371
01:19:07,583 --> 01:19:09,875
ರೆಬೆಕ್ಕಾ ಅಚಾನಕ್ಕಾಗಿ ಬಂದವಳು ಮತ್ತು--

1372
01:19:10,041 --> 01:19:11,166
ಮತ್ತು?

1373
01:19:13,375 --> 01:19:16,416
ಕೊಲೆಯಾದವರೇ ಅತಿ ಮುಖ್ಯವಾದ ಸುಳಿವು.

1374
01:19:18,750 --> 01:19:21,500
ಅವನ ಕೈಗಳ ಮೇಲಿದ್ದ ಹುಲ್ಲಿನಂಥ ಹಸಿರು ಬಣ್ಣ.

1375
01:19:22,208 --> 01:19:24,666
ಎಷ್ಟು ಸುಂದರವಾಗಿ ಬಣ್ಣ ಹಾಕಿದ್ದಾರೆ.

1376
01:19:24,958 --> 01:19:26,291
ತಪ್ಪು ಕುರಿಮರಿಯನ್ನು ಆರಿಸಿದ್ದ.

1377
01:19:26,458 --> 01:19:28,500
ನಾನು ಜಾರ್ಜ್‌ನ ಭೂತವನ್ನು ನೋಡಿದೆ.

1378
01:19:30,541 --> 01:19:31,583
ಜಾಣ ಮರಿ.

1379
01:19:40,041 --> 01:19:42,125
-ರೆಬೆಕ್ಕಾ ಅದನ್ನು ಮಾಡಿಲ್ಲ!
-ಲಿಲ್ಲಿ, ನಿಧಾನ.

1380
01:19:42,250 --> 01:19:43,875
ಯಾರು ಮಾಡಿದರಂತ ಗೊತ್ತಾಯಿತು. ಸಾಬೀತು ಮಾಡಿದರೆ--

1381
01:19:43,958 --> 01:19:44,791
ಯಾವುದನ್ನು ಸಾಬೀತು ಮಾಡುವುದು?

1382
01:19:44,916 --> 01:19:46,125
ಅದು ಹುಲ್ಲಿನ ಬಣ್ಣವಲ್ಲ.

1383
01:19:46,250 --> 01:19:47,750
-ಮತ್ತು ನಾನು ಹೇಗೆ--
-ಇರು-ಇರು.

1384
01:19:47,875 --> 01:19:49,083
ಒಂದು ವೇಳೆ… ಹಾಂ!

1385
01:19:49,208 --> 01:19:51,666
ಓ, ಆದರೆ ನಾನು ತುಂಬಾ ದಪ್ಪ ಇದ್ದೇನೆ.
ನಾನು ಒಳಗೆ ಹಿಡಿಸಲ್ಲ.

1386
01:19:51,791 --> 01:19:54,083
ನಾನು ಒಳಗೆ ಹಿಡಿಸುತ್ತೇನೆ.

1387
01:19:55,208 --> 01:19:57,833
ಮತ್ತು ನಾನು ಮರೆಯಲಿಲ್ಲ.

1388
01:19:59,833 --> 01:20:01,750
ನಿನ್ನ ಪೂರ್ತಿ ಕಾಲನ್ನು ಒಳಗಿಡು.

1389
01:20:03,875 --> 01:20:07,166
ಈಗ ನಿನ್ನ ಇನ್ನೊಂದು ಕಾಲನ್ನು ಅದರೊಳಗೆ ಇಡು.

1390
01:20:10,791 --> 01:20:13,291
ಸರಿ. ಈಗ ಹೋಗುವ ಸಮಯ.

1391
01:20:22,250 --> 01:20:24,583
ಅಷ್ಟೇ. ಅದರ ಒಳಗಿಂದ ಹೋಗು.

1392
01:21:17,916 --> 01:21:20,250
ಎಂಥಾ ವಿಚಿತ್ರ ಊರು ಇದು.

1393
01:21:21,875 --> 01:21:24,041
ಅದು ಕೆಲಸ ಮಾಡುತ್ತೆ ಅಂತೀಯಾ?

1394
01:21:24,500 --> 01:21:27,583
ನನಗೆ ಗೊತ್ತಿಲ್ಲ. ನಾವು ಕಾದು ನೋಡಬೇಕಷ್ಟೇ.

1395
01:21:29,958 --> 01:21:34,208
ಜಾರ್ಜ್ ಸಾಯುವ ಮುಂಚೆ
ಅಂದು ಬೆಳಿಗ್ಗೆ ನಿನಗೇನು ಹೇಳಿದ್ದ?

1396
01:21:34,666 --> 01:21:37,333
ನಿನ್ನ ಕಿವಿಯಲ್ಲಿ ಏನೋ ಉಸುರಿದ್ದನ್ನು ನೋಡಿದೆ.

1397
01:21:38,250 --> 01:21:42,666
ಚಳಿಗಾಲದ ಕುರಿಮರಿಯೇ ಅತ್ಯುತ್ತಮ ಕುರಿಮರಿ
ಅಂತ ಹೇಳಿದ.

1398
01:21:56,500 --> 01:21:58,708
-ಹೇ, ರಾನಿ.
-ಹಾಂ?

1399
01:21:58,875 --> 01:22:02,541
ನೀನು ಏನೋ ಮರೆತಿದ್ದೀಯ ಎಂಬಂಥ ಭಾವನೆ
ನಿನಗೆ ಯಾವಾಗಲಾದರೂ ಬರುತ್ತಾ?

1400
01:22:02,708 --> 01:22:05,708
ಅಂದರೆ ನೆನ್ನೆ ರಾತ್ರಿ ಲಿಲ್ಲಿ
ನಮಗೆ ಏನನ್ನೋ ಹೇಳಬೇಕೆಂದುಕೊಂಡಳು,

1401
01:22:05,875 --> 01:22:09,208
ಆದರೆ ನಾವು ಅದನ್ನು ಮರೆಯಲು ನಿರ್ಧರಿಸಿದೆವು,
ಯಾಕೆಂದರೆ ನಮಗೆ ಭಯವಾಗಿತ್ತು, ಅನ್ನುವುದಾ?

1402
01:22:09,458 --> 01:22:11,833
ಅಂದರೆ, ಭಯ ಅಂತಲ್ಲ. ಖಂಡಿತ ಭಯವೇನಿಲ್ಲ.

1403
01:22:12,000 --> 01:22:13,833
ಆದರೂ ಹೌದು. ಅದೇ ವಿಷಯ.

1404
01:22:14,000 --> 01:22:15,375
ನಾವೇನು ಮಾಡೋಣ, ಅಣ್ಣ?

1405
01:22:15,541 --> 01:22:19,333
ನಂಗೊತ್ತಿಲ್ಲ, ಆದರೆ ನಾವೇನೂ ಮಾಡೋಕಾಗಲ್ಲ,
ಹಾಗಾಗಿ ನಾವು… ಏನೋ ಒಂದು ಮಾಡಬೇಕು!

1406
01:22:20,083 --> 01:22:21,166
ಅದ್ಭುತ ಅದು.

1407
01:22:21,333 --> 01:22:23,666
ಬಾ ಮತ್ತೆ! ನಾವೇನು ಕುರಿಮರಿಗಳಾ?

1408
01:22:23,833 --> 01:22:26,625
ಅಥವಾ ನಾವು ಟಗರುಗಳಾ?

1409
01:22:39,333 --> 01:22:40,541
ಯಾರು ಮಾಡಿದ್ದು ಇದನ್ನು?

1410
01:22:40,916 --> 01:22:43,375
ಒಂದು ಕುರಿಮರಿ ಕಿಟಿಕಿಯಿಂದ ಹಾರಿ.

1411
01:22:43,541 --> 01:22:46,541
ಒಂದು ಕುರಿಮರಿ ಕಿಟಿಕಿಯಿಂದ ಹಾರಿ.

1412
01:22:46,791 --> 01:22:47,916
ಇನ್ನೂ ಕೆಟ್ಟದಾಗಿದೆ.

1413
01:22:48,416 --> 01:22:51,208
ಕಿಟಿಕಿಯಿಂದ ಹಾರಿ ಬಂದ
ಕುರಿಮರಿಗಿಂತ ಕೆಟ್ಟದೇನಿರಲ್ಲ.

1414
01:22:51,916 --> 01:22:53,958
ನಾನು ಖಚಿತವಾಗಿ ಹೇಳಬಲ್ಲೆ,

1415
01:22:54,583 --> 01:22:58,541
ಆ ಕುರಿಮರಿಯು ಇನ್ನೊಂದು ಕುರಿಯ
ಆದೇಶಗಳನ್ನು ಪಾಲಿಸುತ್ತಿತ್ತು.

1416
01:23:01,041 --> 01:23:02,208
ಸರಿ.

1417
01:23:07,000 --> 01:23:08,250
ಅದರ ಅರ್ಥ ಏನು?

1418
01:23:14,583 --> 01:23:16,333
ಅದರ ಅರ್ಥ…

1419
01:23:19,083 --> 01:23:20,333
ಏನೂ ಇಲ್ಲ.

1420
01:23:21,250 --> 01:23:22,541
ಏನೂ ಇಲ್ಲ!

1421
01:23:23,000 --> 01:23:24,333
ಅವು ಕುರಿಗಳು.

1422
01:23:25,500 --> 01:23:26,875
ಅವು ಕುರಿಗಳು.

1423
01:24:09,583 --> 01:24:11,791
ವರ್ಗಾವಣೆಗೆ ಸಹಿ ಹಾಕಿದರೆ, ನಾವು ಹೊರಡುತ್ತೇವೆ.

1424
01:24:11,958 --> 01:24:13,125
ಸರಿ.

1425
01:24:15,166 --> 01:24:16,500
ಅದು ಕೆಲಸ ಮಾಡಲಿಲ್ಲ.

1426
01:24:16,666 --> 01:24:18,375
ಒಂದು ನಿಮಿಷ ನೋಡೋಣ.

1427
01:24:21,083 --> 01:24:22,125
ಆಫೀಸರ್ ಡೆರ್ರಿ.

1428
01:24:23,333 --> 01:24:24,458
ಕಾಗದಪತ್ರ.

1429
01:24:30,416 --> 01:24:31,916
ಮಾಡಬೇಡ.

1430
01:24:59,791 --> 01:25:01,791
ನಿಲ್ಲಿ! ನಿಲ್ಲಿ!

1431
01:25:03,375 --> 01:25:06,083
ಅವಳಲ್ಲ ಮಾಡಿದ್ದು. ಅವಳಲ್ಲ ಮಾಡಿದ್ದು.

1432
01:25:06,791 --> 01:25:08,333
ಆದರೆ ಮಾಡಿದ್ದು ಯಾರಂತ ನನಗೆ ಗೊತ್ತು.

1433
01:25:08,500 --> 01:25:10,208
ಜಾರ್ಜ್ ಹಾರ್ಡಿಯನ್ನು
ಕೊಂದಿದ್ದು ಯಾರಂತ ನನಗೆ ಗೊತ್ತು.

1434
01:25:15,625 --> 01:25:16,916
ಶ್ರೀಮತಿ ಹಾರ್‌ಬಾಟಲ್.

1435
01:25:18,083 --> 01:25:19,250
ಇಲ್ಲ-ಇಲ್ಲ-ಇಲ್ಲ!

1436
01:25:19,458 --> 01:25:24,250
ಮೊದಲಿಂದ ನಾನೇ ಮೂರ್ಖನಾಗಿದ್ದೆ,
ಆದರೆ ಈಗಂತೂ ಅಲ್ಲ.

1437
01:25:25,583 --> 01:25:27,791
ರೆಬೆಕ್ಕಾ ಹ್ಯಾಂಪ್‌ಸ್ಟೆಡ್
ಡೆನ್‌ಬ್ರೂಕ್‌ಗೆ ಬಂದಾಗಿನಿಂದ

1438
01:25:27,875 --> 01:25:30,041
ಅವಳೇ ಇದರ ಪ್ರಮುಖ ಶಂಕಿತೆಯಾಗಿದ್ದಾಳೆ.

1439
01:25:30,208 --> 01:25:33,166
ಅವಳಿಗೇ ಅದರ ಪ್ರಮುಖ ಉದ್ದೇಶವಿತ್ತು.
ಅಲ್ಲದೆ, ಅವಳು ಸುಳ್ಳು ಹೇಳಿದಳು.

1440
01:25:33,333 --> 01:25:35,625
ಕೊಲೆ ನಡೆದ ರಾತ್ರಿಯಂದು
ಅವಳು ಜಾರ್ಜ್‌ನ ಹೊಲದಲ್ಲಿ ಇದ್ದಳು.

1441
01:25:35,791 --> 01:25:38,208
ಕೊಲೆಗಾರರು ಕೂಡ ಅದನ್ನೇ ನಿರೀಕ್ಷಿಸಿದ್ದರು.

1442
01:25:38,375 --> 01:25:43,291
ನಾವು ಗಣನೆಗೇ ತೆಗೆದುಕೊಳ್ಳದ ಕೊಲೆಗಾರ,
ಯಾಕೆಂದರೆ ಅವರು ಶಂಕಿತರೇ ಆಗಿರಲಿಲ್ಲ.

1443
01:25:43,500 --> 01:25:48,833
ಜಾರ್ಜ್‌ನ ಉಯಿಲಿನಲ್ಲಿ ಹೆಸರಿಸಿದ್ದ ಒಬ್ಬರೇ
ಒಬ್ಬರು ನಿರ್ದೋಷಿ ಎನಿಸಲು ಕಾರಣ ಕೊಟ್ಟಿದ್ದವರು.

1444
01:25:49,083 --> 01:25:50,833
ಅತ್ಯಂತ ಸೂಕ್ತ ಕಾರಣ.

1445
01:25:51,000 --> 01:25:52,750
ತಾನು ದೇಶದಲ್ಲೇ ಇರಲಿಲ್ಲ ಎಂಬ ಕಾರಣ.

1446
01:25:52,916 --> 01:25:54,416
-ಅಂದರೆ ನೀವು ಹೇಳುವುದು--
-ಹೌದು.

1447
01:25:54,583 --> 01:25:55,666
ಪೀಟರ್ ವಾನ್ ವ್ಯೂರೆನ್.

1448
01:25:55,833 --> 01:25:57,083
-ಸೌತ್ ಆಫ್ರಿಕಾದವನು.
-ಸೌತ್ ಆಫ್ರಿಕಾದವನು.

1449
01:25:57,250 --> 01:25:59,875
ರೆಬಕ್ಕಾ, ಜಾರ್ಜ್ ನಿನಗೆ ತನ್ನ ಉಯಿಲಿನ ಪ್ರತಿ
ಕಳಿಸಿದ್ದರು ಅಂತ ನೀನು ಹೇಳಿದ್ದೆ.

1450
01:26:00,041 --> 01:26:03,291
ಆದರೆ ಖಂಡಿತವಾಗಿ ಅವರು ನಿನ್ನ ಸಹೋದರನಿಗೂ
ಅದರ ಪ್ರತಿಯನ್ನು ಕಳಿಸಿರಲೇಬೇಕು,

1451
01:26:03,458 --> 01:26:07,583
ಅವನು ಸ್ವಲ್ಪ ಹುಡುಕಾಡಿ, ಜಾರ್ಜ್‌ನ ನಿಜವಾದ ಆಸ್ತಿ
ಎಷ್ಟಿದೆ ಅಂತ ಕಂಡುಹಿಡಿದು,

1452
01:26:07,750 --> 01:26:12,833
ಕೊಲೆ ಮಾಡಿಯಾದರೂ ಆ ಮೂರು ಕೋಟಿ ಹಣವನ್ನು
ಪಡೆಯಲೇಬೇಕು ಅಂತ ನಿರ್ಧರಿಸಿದ.

1453
01:26:13,791 --> 01:26:16,416
ಆದರೆ ಅವನಿಗೆ ಒಂದು ದೊಡ್ಡ ಸಮಸ್ಯೆ ಎದುರಾಗಿತ್ತು.

1454
01:26:16,583 --> 01:26:17,541
ಉದ್ದೇಶ!

1455
01:26:17,958 --> 01:26:19,250
ಅದನ್ನು ನಾನು ಹೇಳುವವನಿದ್ದೆ.

1456
01:26:19,416 --> 01:26:22,000
ಅಲ್ಲ, ನಾನೇ ಕೊಲೆಗಾತಿ ಅಂತ ನೀನು ಬಿಂಬಿಸಲಿದ್ದೆ.

1457
01:26:23,875 --> 01:26:24,875
ಉದ್ದೇಶ!

1458
01:26:25,375 --> 01:26:27,541
ಕೊಲೆಯಾದವರು ತಮ್ಮ ಉಯಿಲಿನಲ್ಲಿ
ನಿಮಗೆ ದೊಡ್ಡ ಮೊತ್ತದ

1459
01:26:27,666 --> 01:26:30,416
ಆಸ್ತಿ ಬಿಟ್ಟು ಹೋದರೆ,
ಆಗ ನೀವೇ ಪ್ರಮುಖ ಶಂಕಿತರು.

1460
01:26:30,583 --> 01:26:33,916
ಆದರೆ ಅವರು ಅದನ್ನು ನಿಮ್ಮ ಸಹೋದರಿಗೆ
ಬಿಟ್ಟು ಹೋಗಿ, ಕೃತ್ಯಕ್ಕೆ ಅವಳೇ ದೂಷಿತಳಾದಾಗ…

1461
01:26:34,083 --> 01:26:35,625
ಹಣವು ಸಹಜವಾಗಿ ಯಾರಿಗೆ ಹೋಗುತ್ತದೆ ಎಂದರೆ--

1462
01:26:35,791 --> 01:26:37,083
-ಉಳಿದ ವಾರಸುದಾರರಿಗೆ!
-ಉಳಿದ ವಾರಸುದಾರರಿಗೆ!

1463
01:26:37,208 --> 01:26:39,458
ದಯವಿಟ್ಟು ಸುಮ್ಮನಿರುತ್ತೀರಾ?
ನಾನಾಗಿ ಹೇಳಲು ಪ್ರಯತ್ನಿಸುತ್ತಿದ್ದೇನೆ.

1464
01:26:39,625 --> 01:26:40,708
ದಯವಿಟ್ಟು ಕ್ಷಮಿಸು.

1465
01:26:41,083 --> 01:26:42,750
ಉಳಿದ ವಾರಸುದಾರರು!

1466
01:26:43,125 --> 01:26:44,458
ಈಗ ಉಳಿದಿರುವ ಒಂದೇ ಪ್ರಶ್ನೆ…

1467
01:26:45,833 --> 01:26:47,375
ಅವನು ಎಲ್ಲಿ ಅಡಗಿದ್ದಾನೆ?

1468
01:26:47,541 --> 01:26:49,333
ನಾನು ಯಾರನ್ನು ಹುಡುಕುತ್ತಿದ್ದೇನೆ?

1469
01:26:49,500 --> 01:26:52,083
ನಮ್ಮ ಕಣ್ಣ ಮುಂದೆಯೇ ಅಡಗಿರುವವರನ್ನು.

1470
01:26:52,250 --> 01:26:54,416
ತನ್ನ ಹೆಸರನ್ನು ಬದಲಾಯಿಸಿದವನನ್ನು.

1471
01:26:55,041 --> 01:26:58,750
ಉದಾಹರಣೆಗೆ, ಚಾಸ್ಟಿಟಿ ಕ್ರಾಂಪ್ಫ್ಸ್…

1472
01:26:58,916 --> 01:27:01,166
ರೆಬೆಕ್ಕಾ ಹ್ಯಾಂಪ್‌ಸ್ಟೆಡ್ ಆದಳು.

1473
01:27:01,333 --> 01:27:02,625
ಮತ್ತು ಪೀಟರ್ ವಾನ್ ವ್ಯೂರೆನ್…

1474
01:27:02,791 --> 01:27:04,750
ಮತ್ತು ಪೀಟರ್ ವಾನ್ ವ್ಯೂರೆನ್…

1475
01:27:06,625 --> 01:27:08,416
ಎಲಿಯಟ್ ಮ್ಯಾಥ್ಯೂಸ್ ಆದ.

1476
01:27:08,583 --> 01:27:09,625
ಇಲ್ಲ!

1477
01:27:11,291 --> 01:27:13,083
ಜಾರ್ಜ್‌ನ ಭೂತ.

1478
01:27:14,375 --> 01:27:16,041
ನಾನು ಊಹೆ ಮಾಡಲ್ಲ.

1479
01:27:17,125 --> 01:27:19,083
ಟಿಮ್, ಇಲ್ಲಸಲ್ಲದ್ದನ್ನು ಹೇಳುತ್ತಿದ್ದೀಯ.

1480
01:27:19,666 --> 01:27:20,875
ನಾನು ಇರುವುದು ಸೌತ್ ಆಫ್ರಿಕಾದಲ್ಲಲ್ಲ.

1481
01:27:21,000 --> 01:27:23,208
ನಾನು ಈ ದೇಶದಲ್ಲಿರುವವನು,
ಮತ್ತು ಕೆಲಸ ಮಾಡುವ ದಿನಪತ್ರಿಕೆ--

1482
01:27:23,375 --> 01:27:24,375
ನಂಗೊತ್ತು.

1483
01:27:24,500 --> 01:27:29,416
ನೀನು ಕೆಲ ಕಾಲದಿಂದ "ಎಲಿಯಟ್ ಮ್ಯಾಥ್ಯೂಸ್" ಎಂದು
ಈ ದೇಶದಲ್ಲಿ ಬದುಕುತ್ತಿದ್ದೀಯ ಅಂದುಕೊಳ್ಳುವೆ.

1484
01:27:29,583 --> 01:27:31,333
ನೀನು ಉಚ್ಛರಿಸುವ ಶೈಲಿಯಲ್ಲೇ.

1485
01:27:31,625 --> 01:27:36,041
ರೆಬೆಕ್ಕಾ ಭೇಟಿಯಾಗಲು ಬರುತ್ತಿದ್ದಾಳೆ ಅಂತ
ಜಾರ್ಜ್ ನಿನಗೆ ಹೇಳಿದರು, ಅಲ್ವಾ?

1486
01:27:36,625 --> 01:27:39,583
ಅವಳನ್ನು ಸಿಲುಕಿಸಲು ನಿನಗೆ ಸೂಕ್ತವಾದ ಅವಕಾಶ.

1487
01:27:39,875 --> 01:27:43,166
ಡೆನ್‌ಬ್ರೂಕ್‌ಗೆ ಬರೋಕೆ ನಿನಗೆ
ಯಾವುದೋ ಒಂದು ಕಾರಣ ಬೇಕಿತ್ತಷ್ಟೇ.

1488
01:27:43,916 --> 01:27:46,166
ಒಂದು ಸಾಂಸ್ಕೃತಿಕ ಉತ್ಸವದಂತೆ.

1489
01:27:46,333 --> 01:27:48,375
ನಿನ್ನ ಯೋಜನೆ ಸರಳವಾಗಿತ್ತು.

1490
01:27:48,500 --> 01:27:49,333
ಮೊದಲಿಗೆ…

1491
01:27:49,625 --> 01:27:51,875
ಡೆನ್‌ಬ್ರೂಕ್ ಬಿಟ್ಟು ಹೋಗುತ್ತಿರುವಂತೆ
ದೊಡ್ಡ ನಾಟಕವಾಡಿದೆ.

1492
01:27:52,208 --> 01:27:55,583
ಆಮೇಲೆ ಒಂದು ಅನುಕೂಲಕರ ಕಾರಿನ ತೊಂದರೆಯಿಂದ
ನೀನು ವಾಪಸ್ ಬಂದೆ.

1493
01:27:57,791 --> 01:28:01,458
ಆಮೇಲೆ ಆ ರಾತ್ರಿ, ರೆಬೆಕ್ಕಾ ಹೋದ ನಂತರ,

1494
01:28:01,625 --> 01:28:04,250
ನೀನೇನು ಮಾಡಲು ಬಂದಿದ್ದೆಯೋ ಅದನ್ನು ಮಾಡಿದೆ.

1495
01:28:07,333 --> 01:28:08,416
ಬಾ, ಬಾ, ಬಾ.

1496
01:28:18,375 --> 01:28:19,500
ಚಿಯರ್ಸ್.

1497
01:28:19,791 --> 01:28:21,458
ನಿನ್ನ ತಂದೆಗೆ ನೀನು ವಿಷ ಹಾಕಿ…

1498
01:28:23,333 --> 01:28:25,500
ಅಲ್ಲಿ ಹೊಸ ಉಯಿಲನ್ನು ಇರಿಸಿದೆ.

1499
01:28:28,416 --> 01:28:30,791
ಆದರೆ ನಿಮ್ಮಪ್ಪ
ನೀನಂದುಕೊಂಡಿದ್ದಕ್ಕಿಂತ ಬಲಶಾಲಿಯಾಗಿದ್ದರು.

1500
01:28:32,791 --> 01:28:34,166
ಅಲ್ಲೊಂದು ಹೋರಾಟ ನಡೆಯಿತು.

1501
01:28:42,541 --> 01:28:45,125
ಆದರೆ ಕೊನೆಯಲ್ಲಿ ನೀನೇ ಗೆದ್ದೆ.

1502
01:28:45,666 --> 01:28:49,291
ನಿನ್ನ ತಂಗಿಯ ಮೇಲೆ ಆರೋಪ ಹೊರಿಸುವುದಷ್ಟೇ
ಇನ್ನು ಬಾಕಿ ಇದ್ದ ಕೆಲಸ.

1503
01:28:50,000 --> 01:28:51,958
ನೀನು ಚತುರತೆ ಬಳಸಿದ್ದೆ.

1504
01:28:52,333 --> 01:28:54,083
ಶ್ರೀಮತಿ ಹಾರ್‌ಬಾಟಲ್ ಉಯಿಲನ್ನು ಓದುವ ದಿನದಂದು,

1505
01:28:54,166 --> 01:28:55,916
ನಿನ್ನನ್ನು ಆಚೆ ಹಾಕುತ್ತಾರೆಂದು
ನಿನಗೆ ಗೊತ್ತಿತ್ತು.

1506
01:28:57,750 --> 01:29:02,166
ಮಿ. ವಾನ್ ವ್ಯೊರೆನ್, ನಾನು ಲಿಡಿಯಾ ಹಾರ್‌ಬಾಟಲ್.
ನನ್ನ ಮಾತು ಕೇಳಿಸುತ್ತಿದೆಯಾ?

1507
01:29:02,500 --> 01:29:04,333
ಹಾಂ. ಒಳ್ಳೆಯ ಸಂಪರ್ಕ ಇದೆ. ಧನ್ಯವಾದ.

1508
01:29:04,500 --> 01:29:08,666
ಸ್ಥೌನೇಯದ ಹಣ್ಣುಗಳನ್ನು ರೆಬೆಕ್ಕಾಳ ಕೋಣೆಯಲ್ಲಿ
ಇರಿಸುವುದು ನೀರು ಕುಡಿದಷ್ಟೇ ಸುಲಭವಾಗಿತ್ತು.

1509
01:29:09,125 --> 01:29:10,666
ಸಣ್ಣ ಊರಿನ ವಸತಿಗೃಹ.

1510
01:29:10,833 --> 01:29:12,208
ಸುಲಭವಾಗಿ ತೆರೆಯಬಹುದಾದ ಬೀಗಗಳು.

1511
01:29:13,291 --> 01:29:15,333
ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು, ಎಲಿಯಟ್.

1512
01:29:15,500 --> 01:29:18,833
ಆದರೆ ನಿನಗೆ ಗೊತ್ತಿಲ್ಲದ್ದು
ಮತ್ತು ನನಗೆ ಇದುವರೆಗೂ ಗೊತ್ತಾಗದಿದ್ದದ್ದು

1513
01:29:19,000 --> 01:29:20,708
ಏನೆಂದರೆ ನೀನೊಂದು ಸುಳಿವನ್ನು ಬಿಟ್ಟು ಹೋದೆ.

1514
01:29:21,500 --> 01:29:23,083
ಜಾರ್ಜ್‌ನ ಕೈಗಳು.

1515
01:29:23,250 --> 01:29:25,208
ಜಾರ್ಜ್‌ನ ಕೈಗಳು.

1516
01:29:26,875 --> 01:29:30,000
ಒಂದು ನೀಲಿಯಾಗಿತ್ತು, ಇನ್ನೊಂದು ಹಸಿರಾಗಿತ್ತು.

1517
01:29:30,166 --> 01:29:33,000
ನೀಲಿ ರಂಗು ಅರ್ಥವಾಗುವಂಥದ್ದೇ.
ಅದು ಆತನಿಗೆ ಐಶ್ವರ್ಯ ತರುವ ವಸ್ತು.

1518
01:29:33,166 --> 01:29:35,000
ಆದರೆ ಹಸಿರು? ಹಸಿರು ಯಾಕೆ?

1519
01:29:35,916 --> 01:29:38,875
ಆಮೇಲೆ ಕೆಲವು ಸ್ನೇಹಿತರು…

1520
01:29:39,291 --> 01:29:42,375
ತುಂಬಾ ಒಳ್ಳೆಯ ಪತ್ತೇದಾರರಾದ ಕೆಲವು ಸ್ನೇಹಿತರು…

1521
01:29:45,833 --> 01:29:47,375
ನಾನು ಆಲೋಚಿಸುವಂತೆ ಮಾಡಿದರು.

1522
01:29:48,208 --> 01:29:50,083
ನೀಲಿ ಮತ್ತು ಹಳದಿ.

1523
01:29:50,250 --> 01:29:54,041
ನೀಲಿ ಮತ್ತು ಹಳದಿ ಮಿಶ್ರಣಗೊಂಡರೆ
ಸಿಗುವುದು ಹಸಿರು.

1524
01:29:54,208 --> 01:29:57,291
ಜಾರ್ಜ್‌ನ ಕೈಯ ಮೇಲೆ ನನಗೆ ಕಂಡ ಹಸಿರು ರಂಗಿನಂತೆ.

1525
01:29:57,458 --> 01:30:00,625
ಜಾರ್ಜ್‌ನನ್ನು ನೀನು ಕೊಲೆ ಮಾಡಿದ ರಾತ್ರಿ
ವಸತಿಗೃಹದಲ್ಲಿ ನೀನು ಮಲಗಿದ್ದ

1526
01:30:00,916 --> 01:30:04,291
ದಿಂಬಿನ ಹೊದಿಕೆಯ ಮೇಲೆ
ನನಗೆ ಕಂಡ ಹಸಿರು ರಂಗಿನಂತೆ!

1527
01:30:05,583 --> 01:30:09,500
ಜಾರ್ಜ್‌ನ ಎರಡೂ ಕೈಗಳಿಗೆ ಅಂದು ರಾತ್ರಿ
ಔಷಧದ ಕಾರಣದಿಂದ ನೀಲಿ ಬಣ್ಣ ಅಂಟಿತ್ತು.

1528
01:30:09,666 --> 01:30:12,958
ಆಮೇಲೆ ಆತ ಯಾರದ್ದೋ ಕೂದಲನ್ನು ಹಿಡಿದಿದ್ದ.

1529
01:30:14,083 --> 01:30:17,791
ಅದು ಯಾರೆಂದರೆ, ಮಳೆಯಲ್ಲಿ ತೊಳೆದು ಹೋಗುವ,
ಬೇಗ ಹಚ್ಚಬಹುದಾದ,

1530
01:30:17,958 --> 01:30:19,750
ಅಗ್ಗದ ಹಳದಿ ಕೂದಲಿನ ರಂಗು ಬಳಸಿದವರು,

1531
01:30:19,916 --> 01:30:21,625
ಅವರಿಂದ ಜಾರ್ಜ್‌ನ ಕೈ ಹಸಿರಾಯಿತು.

1532
01:30:22,625 --> 01:30:26,208
ಡೆನ್‌ಬ್ರೂಕ್‌ಗೆ ಬರುವ ಮುನ್ನ ಆತುರದಲ್ಲಿ
ಕೂದಲಿಗೆ ಹಳದಿ ಬಣ್ಣ ಹಚ್ಚಿದವರು,

1533
01:30:26,375 --> 01:30:29,166
ಯಾಕೆಂದರೆ ಒಂದೇ ಒಂದು ಕ್ಷಣವೂ
ತನ್ನ ಸಹೋದರಿಯಂತೆ ಅಥವಾ ತಂದೆಯಂತೆ

1534
01:30:29,333 --> 01:30:32,166
ಕಿಂಚಿತ್ತೂ ಯಾರಿಗೂ ಕಾಣಬಾರದೆಂದು ಆತ ಬಯಸಿದ್ದ.

1535
01:30:32,666 --> 01:30:33,958
ಅಲ್ವಾ, ಪೀಟರ್?

1536
01:30:34,041 --> 01:30:34,875
ಹೌದು!

1537
01:30:35,041 --> 01:30:35,958
ಇಲ್ಲ!

1538
01:30:36,375 --> 01:30:39,375
ಇಲ್ಲ, ಇದು ಕಟ್ಟುಕಥೆ ಮತ್ತು ಇದನ್ನು
ಸಂಪೂರ್ಣವಾಗಿ ನಿರಾಕರಿಸಬಹುದು.

1539
01:30:39,541 --> 01:30:43,041
ಹಾಗಾದರೆ ನಾನು ಇದನ್ನು ತೆಗೆದುಕೊಂಡರೆ
ನಿನಗೆ ಅಭ್ಯಂತರವಿಲ್ಲವಲ್ಲ?

1540
01:30:47,833 --> 01:30:49,333
ಖಂಡಿತ ಇಲ್ಲ.

1541
01:30:50,375 --> 01:30:53,083
ಸಹಜವಾಗಿ ನನ್ನ ಕೂದಲು ಇಷ್ಟು ಹೊಂಬಣ್ಣವಿಲ್ಲ
ಎಂದು ಒಪ್ಪುವೆ.

1542
01:30:53,750 --> 01:30:58,708
ಅದಲ್ಲದೆ ನಾನು ನನ್ನ ಹಲ್ಲುಗಳನ್ನೂ ತಿಳಿಯಾಗಿಸುವೆ
ಮತ್ತು ಎದೆಯ ಕೂದಲನ್ನೂ ತೆಗೆಸುತ್ತೇನೆ.

1543
01:30:58,875 --> 01:31:01,000
ಅವನು ಖಂಡಿತ ಸಸ್ಯಾಹಾರಿ ಎನ್ನುವೆ.

1544
01:31:01,166 --> 01:31:03,250
ಹಾಗಾಗಿ ನನ್ನ ಕೂದಲಿನಲ್ಲಿ ರಂಗು ಇದೆ ಅಂತ
ನನ್ನ ಮೇಲೆ

1545
01:31:03,333 --> 01:31:05,416
ಕೊಲೆ ಆರೋಪ ಹೊರೆಸುವಷ್ಟು ಧೈರ್ಯ ನಿನಗಿದ್ದರೆ,

1546
01:31:05,583 --> 01:31:07,208
ನೀನು ನನ್ನನ್ನು
ನ್ಯಾಯಾಲಯಕ್ಕೆ ಕರೆದೊಯ್ಯುವುದಿಲ್ಲ.

1547
01:31:07,375 --> 01:31:09,541
ನಾನು ನಿನ್ನನ್ನು ಕರೆದೊಯ್ಯುತ್ತೇನೆ.

1548
01:31:13,916 --> 01:31:15,458
ನೀನು ಅಪಾರ್ಥ ಮಾಡಿಕೊಂಡಿದ್ದೀಯ.

1549
01:31:15,625 --> 01:31:18,041
ನನಗೆ ನಿನ್ನ ಕೂದಲಿನಲ್ಲಿರುವ ಬಣ್ಣ ಬೇಕಿಲ್ಲ.

1550
01:31:18,208 --> 01:31:19,666
ಡಿಎನ್ಎ ಬೇಕಿರೋದು.

1551
01:31:21,333 --> 01:31:23,791
ನೀನು ಜಾರ್ಜ್ ಹಾರ್ಡಿಯ ಮಗನಾಗಿದ್ದರೆ,

1552
01:31:23,958 --> 01:31:26,333
ಆಗ ನೀನೇ ಪೀಟರ್ ವಾನ್ ವ್ಯೂರೆನ್,

1553
01:31:26,500 --> 01:31:30,291
ಮತ್ತು ನೀನೇ ನಿಜವಾದ ಕೊಲೆಗಾರ.

1554
01:31:31,291 --> 01:31:32,375
ಸಿಕ್ಕಿದ.

1555
01:31:33,458 --> 01:31:34,625
ಸಿಕ್ಕಿದೆ.

1556
01:31:40,666 --> 01:31:42,166
ಶಭಾಷ್, ಟಿಮ್.

1557
01:31:48,666 --> 01:31:49,666
ಹೇ!

1558
01:31:52,916 --> 01:31:53,750
ಲಿಲ್ಲಿ!

1559
01:31:53,875 --> 01:31:55,750
ರಾನಿ! ರೆಜ್ಜಿ! ನೀವು ಬಂದಿರಿ!

1560
01:31:55,916 --> 01:31:57,208
ಹೌದು!

1561
01:31:57,583 --> 01:31:58,583
ಯಾಕೆ?

1562
01:32:01,041 --> 01:32:02,708
ಹೇ! ನಿಲ್ಲು! ನಿಲ್ಲು!

1563
01:32:02,875 --> 01:32:06,583
ಯಾಕೆಂದರೆ ಗುದ್ದಲು ಒಂದು ಸೂಕ್ತವಾದ ಕಾರಣವಿದೆ.

1564
01:32:06,750 --> 01:32:08,041
-ಧನ್ಯವಾದ.
-ಕೊನೆಗೂ!

1565
01:32:08,166 --> 01:32:09,000
ಹಾಂ!

1566
01:32:28,500 --> 01:32:29,666
ನ್ಯಾಯವೇ?

1567
01:32:29,833 --> 01:32:32,208
ಅಲ್ಲ. ನಾವಷ್ಟೇ.

1568
01:32:32,375 --> 01:32:33,541
ಹಾಂ!

1569
01:32:37,166 --> 01:32:40,625
ಆತನ ಬಳಿ ಕೋಟಿಗಳಿದ್ದವು! ಕೇಳಿಸಿತಾ? ಕೋಟಿಗಳು!

1570
01:32:40,791 --> 01:32:41,916
ನಾನು ಆತನ ಮಗ.

1571
01:32:42,083 --> 01:32:44,208
ಆ ಕೋಟಿಗಳು ನನಗೆ ಸೇರಬೇಕಾಗಿದ್ದವು.

1572
01:32:51,958 --> 01:32:54,208
ಅವಳು ಅಮೆರಿಕದವಳು ಅಂತ ಗೊತ್ತಿತ್ತು,
ಆದರೆ ಅವಳು ಮಾಡಿಲ್ಲ ಅಂತ ಗೊತ್ತಿತ್ತು.

1573
01:32:54,333 --> 01:32:55,500
ಓ, ಅದು ನಿಜವಲ್ಲ ಬಿಡು.

1574
01:32:58,375 --> 01:32:59,291
ನೋಡು.

1575
01:32:59,458 --> 01:33:03,333
ಇಡೀ ಡೆನ್‌ಬ್ರೂಕ್ ಪೊಲೀಸ್ ಇಲಾಖೆಯ ವತಿಯಿಂದ,

1576
01:33:03,500 --> 01:33:05,666
ನಮ್ಮ ಮನಃಪೂರ್ವಕ ಕ್ಷಮಾಪಣೆ.

1577
01:33:05,833 --> 01:33:08,666
ಅದರಲ್ಲಿ ನಿನ್ನನ್ನು ಬಿಟ್ಟು
ಬೇರೆ ಯಾರಾದರೂ ಇದ್ದಾರಾ?

1578
01:33:09,166 --> 01:33:10,208
ಇಲ್ಲ.

1579
01:33:11,083 --> 01:33:13,000
ನಾನು ಕ್ಷಮೆ ಕೇಳುವೆ.

1580
01:33:14,666 --> 01:33:15,666
ಧನ್ಯವಾದ.

1581
01:33:24,750 --> 01:33:26,041
ನೋಡು.

1582
01:33:27,208 --> 01:33:28,333
ಹಾರಿದ ಕುರಿಮರಿ?

1583
01:33:29,708 --> 01:33:31,291
ಹಾರಿದ ಕುರಿಮರಿ.

1584
01:33:33,083 --> 01:33:35,500
ಇನ್ನೂ ಸ್ವಲ್ಪ ಕಾಲ ಇಲ್ಲೇ ಇರುತ್ತೀಯಾ?

1585
01:33:35,750 --> 01:33:40,666
ಏನೆಂದರೆ, ಈಗಷ್ಟೇ ಜೈಲಿನಿಂದ ಹೊರಬಂದೆ,
ಹಾಗಾಗಿ ನನಗೆ ಸ್ವಲ್ಪ ಏಕಾಂತ ಸಮಯ ಬೇಕು.

1586
01:33:45,291 --> 01:33:47,250
ನಿನಗೆ ಅದು ಸಿಗಲಿ.

1587
01:33:47,791 --> 01:33:49,000
ಬಹುಶಃ.

1588
01:33:53,833 --> 01:33:54,916
ರೆಬೆಕ್ಕಾ.

1589
01:33:55,500 --> 01:33:58,875
ರೆಬೆಕ್ಕಾ. ನಾನು ನಿನ್ನನ್ನು
ತುಂಬಾ ಕ್ಷಮೆ ಕೇಳಬೇಕು.

1590
01:34:25,958 --> 01:34:27,500
ಅದೇನೂ ಬೇಡ.

1591
01:34:29,250 --> 01:34:30,458
ಧನ್ಯವಾದ.

1592
01:34:34,791 --> 01:34:35,916
ಇರು.

1593
01:34:40,500 --> 01:34:42,625
ನನ್ನನ್ನು ಕ್ಷಮಿಸು.

1594
01:34:44,916 --> 01:34:46,458
ನಾನು ಇದನ್ನು ನೋಡಿದೆ.

1595
01:34:47,083 --> 01:34:51,708
ಅದು ಅಂಚೆಚೀಲದಲ್ಲಿತ್ತು, ಅಂದರೆ,
ನೀನು ಅವರ ಮಗಳು ಅಂತ ನನಗೆ ಗೊತ್ತಿರಲಿಲ್ಲ.

1596
01:34:51,875 --> 01:34:55,041
ಮತ್ತು ಆ ಗುಲಾಬಿ ಸುವಾಸನೆಯ ಕಾಗದ
ಅವರಿಗೆ ಕೊಡಿಸಿದ್ದು ನಾನು, ಹಾಗಾಗಿ…

1597
01:34:55,458 --> 01:34:57,000
ನಿನಗೆ ಅರ್ಥ ಆಗುತ್ತಲ್ವಾ?

1598
01:34:57,208 --> 01:34:58,625
ಅವರನ್ನು ಪ್ರೀತಿಸುತ್ತಿದ್ದಿರಾ?

1599
01:35:00,208 --> 01:35:01,291
ಅದು…

1600
01:35:01,666 --> 01:35:04,250
ಮತ್ತು ಅವರು ನಿಮ್ಮನ್ನು ಪ್ರೀತಿ--?

1601
01:35:04,500 --> 01:35:05,916
ಪ್ರಯತ್ನ ಮಾಡಿದರು.

1602
01:35:06,291 --> 01:35:09,041
ಆದರೆ ಜಾರ್ಜ್
ನಿಮ್ಮಮ್ಮನನ್ನು ಪ್ರೀತಿಸುತ್ತಿದ್ದರು.

1603
01:35:09,250 --> 01:35:12,333
ಮತ್ತು ಆತನ ಹೃದಯದಲ್ಲಿ
ಬೇರೆ ಯಾರಿಗೂ ಸ್ಥಾನವಿರಲಿಲ್ಲ.

1604
01:35:13,333 --> 01:35:15,708
ಆಕೆ ನೋಡಲು ಹೇಗಿದ್ದಾಳೋ ಅಂತ ಯೋಚಿಸುತ್ತಿದ್ದೆ.

1605
01:35:16,083 --> 01:35:17,916
ಆದರೆ ಈಗ ಯೋಚಿಸಬೇಕಿಲ್ಲ.

1606
01:35:19,416 --> 01:35:21,708
ಆಕೆಯ ಬಗ್ಗೆ ನಾನು
ಅವರನ್ನು ಇನ್ನಷ್ಟು ಕೇಳಬೇಕಿತ್ತು.

1607
01:35:23,666 --> 01:35:25,208
ನನಗೆ ಆಕೆಯ ಹೆಸರು ಕೂಡ ಗೊತ್ತಿಲ್ಲ.

1608
01:35:25,500 --> 01:35:26,666
ಲಿಲ್ಲಿ.

1609
01:35:27,333 --> 01:35:28,958
ಆಕೆಯ ಹೆಸರು ಲಿಲ್ಲಿ.

1610
01:35:35,000 --> 01:35:38,208
ಖಂಡಿತವಾಗಿ ಸುಳ್ಳು ಸಹಿಯ ಉಯಿಲು ಸಮ್ಮತವಲ್ಲ.

1611
01:35:38,375 --> 01:35:41,333
ಆದರೂ ನಿನಗೆ ಅವರ ಕುರಿಗಳು
ಮತ್ತು ಎಲ್ಲಾ ಜಮೀನು ಸಿಗುತ್ತವೆ.

1612
01:35:41,500 --> 01:35:43,291
-ಮಿಸ್ ಹ್ಯಾಂಪ್‌ಸ್ಟೆಡ್.
-ಹಾಗಾಗಿ ಅದು ಒಳ್ಳೆಯದು.

1613
01:35:43,458 --> 01:35:45,166
ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ.

1614
01:35:45,583 --> 01:35:49,666
ನೋಡಿ, ನಾನು ಮತ್ತು ಹ್ಯಾಮ್, ನಾವು ಒಂದು
ಹೊಸ ವ್ಯಾಪಾರ ಶುರು ಮಾಡಲು ನೋಡುತ್ತಿದ್ದೇವೆ.

1615
01:35:49,833 --> 01:35:51,583
ನಮಗೆ ಒಂದು ಒಳ್ಳೆಯ ಬ್ಯಾಂಕಿನ ಬೆಂಬಲ ಇದೆ.

1616
01:35:52,250 --> 01:35:53,666
ಹಾಗಾಗಿ ನಾವು ನಿಮ್ಮ ತಂದೆಯ ಜಮೀನು

1617
01:35:53,791 --> 01:35:56,000
ಮತ್ತು ಕುರಿಗಳನ್ನು
ನಿಮ್ಮಿಂದ ಖರೀದಿಸಬೇಕೆಂದುಕೊಂಡಿದ್ದೇವೆ.

1618
01:35:56,666 --> 01:35:57,666
ಇಬ್ಬರು ಕೊಲೆಗಾರರು.

1619
01:35:57,833 --> 01:35:59,000
ಏನೆಂದಿರಿ?

1620
01:35:59,166 --> 01:36:02,208
ನೀವಿಬ್ಬರೂ ನನ್ನ ತಂದೆಯ ಜಮೀನಿನಲ್ಲಿ
ಕುರಿ ಕಡಿಯುತ್ತಿದ್ದದ್ದು ಅವರಿಗೆ ಗೊತ್ತಾಯಿತು.

1621
01:36:02,666 --> 01:36:04,625
ನೀವು ಆ ಇಬ್ಬರು ಕೊಲೆಗಾರರು.

1622
01:36:05,000 --> 01:36:06,500
ಅಂದರೆ, ಇಬ್ಬರು ವ್ಯಾಪಾರಿಗಳು.

1623
01:36:06,666 --> 01:36:09,375
ಒಳ್ಳೆಯ ಬೆಲೆ ಕೊಡುತ್ತಿರುವವರು.

1624
01:36:09,791 --> 01:36:11,625
ಅವುಗಳ ಹೆಸರನ್ನಾದರೂ ಬಲ್ಲಿರಾ?

1625
01:36:12,583 --> 01:36:14,333
ಅವುಗಳ ಹೆಸರನ್ನು ನನಗೆ ಆತ ಹೇಳಿದ್ದರು.

1626
01:36:14,500 --> 01:36:16,833
ಲಿಲ್ಲಿ ಇದ್ದಾಳೆ.

1627
01:36:18,791 --> 01:36:20,000
ಮತ್ತು ಮಾಪಲ್.

1628
01:36:20,166 --> 01:36:24,166
ಮತ್ತು ದೊಡ್ಡದಾಗಿ ಹತ್ತಿಯಂತಿರುವುದು ಕ್ಲೌಡ್.
ಅದೊಂಥರ ವಯ್ಯಾರಿ ಅಂದಿದ್ದರು.

1629
01:36:24,333 --> 01:36:27,041
ಮತ್ತು ಕಣ್ಣುಗಳ ಮುಂದೆ ಉಣ್ಣೆ ಇರುವುದಕ್ಕೆ
ವುಲ್-ಐಯ್ಸ್ ಅಂತ ಕರೆದರು,

1630
01:36:27,208 --> 01:36:28,583
ನನಗದು ತುಂಬಾ ಸಹಜವಾದ ಹೆಸರು ಅಂತ ಅನಿಸಿತು,

1631
01:36:28,708 --> 01:36:30,458
ಆದರೆ ಅವರು,
"ನನ್ನನ್ಯಾರೂ ಪ್ರಶ್ನಿಸಿಲ್ಲ" ಅಂದರು.

1632
01:36:30,625 --> 01:36:32,791
-ಹಾಂ, ನೋಡಿ, ಮಿಸ್ ಹ್ಯಾಂಪ್‌ಸ್ಟೆಡ್--
-ಹಾರ್ಡಿ.

1633
01:36:33,250 --> 01:36:34,500
ರೆಬೆಕ್ಕಾ ಹಾರ್ಡಿ.

1634
01:36:34,666 --> 01:36:36,000
ಅದನ್ನು ಬದಲಾಯಿಸುತ್ತಿದ್ದೇನೆ.

1635
01:36:36,166 --> 01:36:38,041
ನಾನು ಹೆಸರುಗಳ ಬದಲಾವಣೆ ಮಾಡಿಸಲ್ಲ.

1636
01:36:38,208 --> 01:36:40,541
ಕ್ಷಮಿಸಿ, ಮಿಸ್ ಹಾರ್ಡಿ,
ಆದರೆ ನಿಮಗೆ ಒಳ್ಳೆಯದಾಗಲಿ.

1637
01:36:40,750 --> 01:36:41,750
ಸಿಗೋಣ.

1638
01:36:42,791 --> 01:36:43,791
ಇರಿ.

1639
01:36:44,250 --> 01:36:46,791
ನನಗೆ ಇನ್ನೂ ಹೆಚ್ಚಿನ ಕುರಿಗಳು ಬೇಕಾಗಿ ಬಂದರೆ?

1640
01:36:47,208 --> 01:36:49,541
ನನಗೊಂದು ಒಳ್ಳೆಯ ಬ್ಯಾಂಕಿನ ಬೆಂಬಲ ಸಿಗಬಹುದಾ?

1641
01:36:50,583 --> 01:36:53,708
ಲಿಲ್ಲಿ, ಅದನ್ನು ಹೇಗೆ ಪರಿಹರಿಸಿದೆ ನೀನು?

1642
01:36:53,875 --> 01:36:55,541
ಖಂಡಿತ ಪರಿಹರಿಸಿದಳು.

1643
01:36:55,708 --> 01:36:57,833
ಅವಳು ಜಗತ್ತಿನಲ್ಲೇ ಅತಿ ಬುದ್ಧಿವಂತ ಕುರಿ.

1644
01:36:58,000 --> 01:37:01,833
ಓ, ಬಿಡಿ. ಹಾಗೆಯೇ ನಾನೂ ಅಂದುಕೊಂಡಿದ್ದೆ,
ಆದರೆ ಅದು ನಾನಲ್ಲ.

1645
01:37:02,000 --> 01:37:03,125
ನಾನು ತಪ್ಪುಗಳನ್ನು ಮಾಡಿದೆ.

1646
01:37:03,291 --> 01:37:05,458
ಜಾರ್ಜ್‌ನ ಭೂತವನ್ನು ತಾನು ಕಂಡಿದ್ದಾಗಿ
ಚಳಿಗಾಲದ ಕುರಿಮರಿ ಹೇಳಿದಾಗ,

1647
01:37:05,541 --> 01:37:07,666
ನಾನು ಅದರ ಮಾತು ಕೇಳದೆ ಬದಲಾಗಿ--

1648
01:37:16,375 --> 01:37:18,500
ಬನ್ನಿ, ಎಲ್ಲರೂ. ಬನ್ನಿ.

1649
01:37:29,291 --> 01:37:30,833
ಏನು ನಿನ್ನ ಹೆಸರು?
ನಿನ್ನ ಒಡಹುಟ್ಟಿದವರು ಇದ್ದಾರಾ?

1650
01:37:31,000 --> 01:37:33,916
ಎಷ್ಟು ಕಾಲದಿಂದ ಇಲ್ಲಿದ್ದೀರಿ?
ನನಗೊಂದು ಸಾವಿರ ಪ್ರಶ್ನೆಗಳಿವೆ.

1651
01:37:34,083 --> 01:37:36,083
ಅಯ್ಯೋ! ಕ್ಷಮಿಸಿ.

1652
01:37:38,791 --> 01:37:40,416
ನಿನ್ನ ಮುಖ ಎಲ್ಲಿದೆ?

1653
01:37:43,000 --> 01:37:45,041
ನಿನಗೆ ಬಾಯಿಯ ಹುಣ್ಣಿದೆ.

1654
01:37:45,208 --> 01:37:47,208
ನನಗೂ ಬಾಯಿಯ ಹುಣ್ಣಿದೆ!

1655
01:37:53,458 --> 01:37:54,708
ಲಿಲ್ಲಿ.

1656
01:39:08,125 --> 01:39:09,708
"ಅಧ್ಯಾಯ ಒಂದು:

1657
01:39:11,875 --> 01:39:15,583
ಸಾಮಾನ್ಯವಾಗಿ ಪ್ರಚಲಿತವಾಗಿರುವ ಒಂದು
ನಂಬಿಕೆ ಇದೆ, ತೋಟದ ಪ್ರಾಣಿಗಳೆಲ್ಲದರ ಪೈಕಿ,

1658
01:39:15,750 --> 01:39:17,541
ಕುರಿಗಳೇ ಎಲ್ಲದಕ್ಕಿಂತ ದಡ್ಡ ಪ್ರಾಣಿಗಳು ಅಂತ.

1659
01:39:21,208 --> 01:39:22,875
ಆದರೆ, ಅಸಲಿಗೆ, ಅದು ನಿಜವಲ್ಲ.

1660
01:39:23,750 --> 01:39:27,583
ಕುರಿಗಳು ಬುದ್ಧಿವಂತ ಪ್ರಾಣಿಗಳಷ್ಟೇ ಅಲ್ಲ,
ಸ್ಪೂರ್ತಿದಾಯಕ ಕೂಡ.

1661
01:39:27,750 --> 01:39:30,750
ಶತಮಾನಗಳ ಹಿಂದಿನ ಮಕ್ಕಳ ಪದ್ಯವೊಂದು ಹೀಗಿದೆ:

1662
01:39:30,916 --> 01:39:34,708
ಲಿಟಲ್ ಬೋ ಪೀಪ್‌ಳ ಕುರಿಗಳು ಕಾಣ್ತಿಲ್ಲ
ಅವನ್ನು ಎಲ್ಲಿ ಹುಡುಕುವುದೋ ಅವಳಿಗೆ ಗೊತ್ತಿಲ್ಲ

1663
01:39:34,875 --> 01:39:37,375
ಅವುಗಳ ಪಾಡಿಗೆ ಅವುಗಳನ್ನು ಬಿಡು
ಅವುಗಳೇ ಮನೆಗೆ ಮರಳುವವು ನೋಡು

1664
01:39:38,125 --> 01:39:40,666
ತಮ್ಮ ಬಾಲಗಳನ್ನು ಅಲ್ಲಾಡಿಸುತ್ತಾ"

1665
01:39:47,208 --> 01:39:49,125
ಇಲ್ಲಿ ತುಂಬಾ ಚೆನ್ನಾಗಿದೆ.

1666
01:39:49,875 --> 01:39:51,625
ಆದರೆ ಸ್ವಲ್ಪ ಒಂಟಿತನ ಕಾಡುತ್ತೆ.

1667
01:39:55,125 --> 01:39:56,375
ಜಾರ್ಜ್.

1668
01:39:57,708 --> 01:39:59,375
ಅದೇ ನಿನ್ನ ಹೆಸರು.

1669
01:40:00,041 --> 01:40:02,458
ಪ್ರತಿಯೊಂದು ಕುರಿಗೂ ಹೆಸರಿರಬೇಕು.

1670
01:40:04,833 --> 01:40:06,291
ಜಾರ್ಜ್.

1671
01:40:16,416 --> 01:40:21,750
"ಒಳ್ಳೆಯ, ತುಪ್ಪಳ ತುಂಬಿದ, ಮುದ್ದಾದ,
ಬಿಳಿ ಬಣ್ಣದ ಕುರಿಗಳ ಗುಂಪು.

1672
01:40:21,916 --> 01:40:24,625
ಎಲ್ಲಾ ಕುರಿಗಳೂ ಒಂದೇ ಅಂತ
ಸಾಮಾನ್ಯವಾಗಿ ಅಂದುಕೊಳ್ಳಲಾಗುತ್ತದೆ.

1673
01:40:25,208 --> 01:40:27,833
ಆದರೆ ಒಂದೇ ಕುರಿ ಹಿಂಡಿನಲ್ಲಿ, ಅಸಲಿಗೆ,
ಅನೇಕ ವಿಧದ ವ್ಯಕ್ತಿತ್ವಗಳು

1674
01:40:28,000 --> 01:40:32,208
ಮತ್ತು ಗುಣಗಳಿರುವಂತಹ ಪ್ರಾಣಿಗಳು ಕಾಣಸಿಗುತ್ತವೆ.

1675
01:40:35,458 --> 01:40:39,625
ಸಾಧುಜೀವಿಗಳು ಇರುತ್ತವೆ, ಸ್ನೇಹಜೀವಿಗಳು
ಇರುತ್ತವೆ, ಮತ್ತು ಒಂಟಿ ಜೀವಿಗಳೂ ಇರುತ್ತವೆ.

1676
01:40:39,791 --> 01:40:42,416
ಬುದ್ಧಿವಂತ ಜೀವಿಗಳು ಮತ್ತು ದಡ್ಡ ಜೀವಿಗಳು.
ನಾಚಿಕೆ ಸ್ವಭಾವದವು ಮತ್ತು ಮುಕ್ತ ಸ್ವಭಾವದವು."

1677
01:40:42,541 --> 01:40:45,166
-ಹಾಯ್, ನಿನ್ನ ಹೆಸರೇನು?
-ಹಾಯ್! ನನ್ನ ಹೆಸರು ಜಾರ್ಜ್.

1678
01:40:45,666 --> 01:40:46,791
ಹಾಯ್, ಜಾರ್ಜ್!

1679
01:40:47,458 --> 01:40:50,375
"ಈ ಸೌಮ್ಯ ಪ್ರಾಣಿಗಳು ಪ್ರತಿಯೊಂದು ಮಾನವ
ಸಂಸ್ಕೃತಿಯಲ್ಲೂ ಸ್ಥಾನವನ್ನು ಪಡೆದಿವೆ,

1680
01:40:50,500 --> 01:40:52,750
ಭಾಷೆ ಮತ್ತು ಕಲ್ಪನೆ ಎರಡರಲ್ಲೂ
ಆಗಾಗ್ಗೆ ಪ್ರತಿನಿಧಿಸಲ್ಪಡುತ್ತಾ

1681
01:40:52,916 --> 01:40:55,375
ಪ್ರೀತಿ, ಮುಗ್ಧತೆ,
ಮತ್ತು ಶಾಂತಿಯ ಪ್ರತಿರೂಪಗಳಾಗಿವೆ.

1682
01:40:55,833 --> 01:41:00,458
ಯಾಕೆಂದರೆ, ಮನುಷ್ಯರಂತೆ, ಒಬ್ಬರಿಗೆ ಸೇರಿರುವುದು
ಅವುಗಳಿಗೆ ತೃಪ್ತಿ ನೀಡುತ್ತದೆ.

1683
01:41:01,333 --> 01:41:04,166
ನಮ್ಮೊಂದಿಗೆ ಸೇರಲು
ಸ್ವತಃ ಅನುಮತಿಸಿಕೊಳ್ಳುತ್ತವೆ.

1684
01:41:04,750 --> 01:41:06,333
ಆಗಲೇ ನಮಗೂ ತಿಳಿಯುವುದು…

1685
01:41:07,291 --> 01:41:09,708
ನಾವು ಅವುಗಳಿಗೆ ಸೇರಿದವರೆಂದು."

1686
01:48:46,125 --> 01:48:47,791
ನನಗೆ ಈಗಲೂ ಅದು ಕೆಲಸದವಳೇ ಅಂತ ಅನಿಸುತ್ತೆ.



